More

    ಪಕ್ಷ ಬಿಡೋಕೆ ನೋವಾಗುತ್ತಿದೆ…ಭಾರದ ಮನಸ್ಸಿನಿಂದ ರಾಜೀನಾಮೆ ಕೊಟ್ಟಿದ್ದೇನೆ; ಎಸ್‌.ಆರ್‌ ಶ್ರೀನಿವಾಸ್‌

    ಬೆಂಗಳೂರು: ಶಾಸಕ ಸ್ಥಾನಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬಳಿಕ ಗುಬ್ಬಿ ಶ್ರೀನಿವಾಸ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರುವ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

    20 ವರ್ಷ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದೆ. ಪಕ್ಷ ಬಿಡೋಕೆ ನೋವಾಗುತ್ತಿದೆ. ನಾನು ಪಕ್ಷ ಬಿಡೋ ಯೋಚನೆ ‌ಮಾಡಿರಲಿಲ್ಲ.ಆದರೆ 2021ರಲ್ಲಿ ಕುಮಾರಸ್ವಾಮಿ ನನ್ನ ವಿರುದ್ದ ಅಭ್ಯರ್ಥಿ ಘೋಷಣೆ ಮಾಡಿದ್ರು.ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ:  ಮೀಸಲಾತಿ ವಿರೋಧಿಸಿ ಭುಗಿಲೆದ್ದ ಹೋರಾಟ– ಬಿಎಸ್​ವೈ ನಿವಾಸದ ಮೇಲೆ ಕಲ್ಲು ತೂರಾಟ

    ನನಗೆ ದೇವೇಗೌಡರು, ಕುಮಾರಸ್ವಾಮಿ ಜೊತೆ ಉತ್ತಮ ಸಂಬಂಧ ಇತ್ತು. ಅಣ್ಣ- ತಮ್ಮನ ರೀತಿ ನಾವು ಇದ್ದೇವು. ಯಾರು ಏನ್ ಹೇಳಿದ್ರೋ ಗೊತ್ತಿಲ್ಲ. ನನ್ನ ವಿರುದ್ಧ ಅಭ್ಯರ್ಥಿ ಘೋಷಣೆ ಮಾಡಿದ್ದರು. ಗುಬ್ಬಿಯಲ್ಲಿ ನಾನು ಇದ್ದ ದಿನವೇ ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡಿದರು. ಪಕ್ಷದಲ್ಲಿ ಮಾನ್ಯತೆ ಇಲ್ಲದೆ ಹೋದ್ರೆ ಹೇಗೆ ಇರೋದು. ವಿಧಿ ಇಲ್ಲದೆ ರಾಜೀನಾಮೆ ಕೊಟ್ಟಿದೇನೆ. ನನಗೆ ಸಹಕಾರ ಕೊಟ್ಟ ರೇವಣ್ಣ ಅವರು ಹಾಗೂ ಎಲ್ಲರಿಗೂ ಧನ್ಯವಾದ ಹೇಳುತ್ತೇನೆಂದಿದ್ದಾರೆ.

    ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​​ನತ್ತ ಮುಖ ಮಾಡಿದ ಗುಬ್ಬಿ ಶ್ರೀನಿವಾಸ್‌

    ಕ್ರಾಸ್ ಓಟಿಂಗ್ ನಾನು ಮಾಡಿಲ್ಲ. ಕುಮಾರಸ್ವಾಮಿಗೆ ಕ್ರಾಸ್ ಓಟಿಂಗ್ ಬಗ್ಗೆ ಸ್ಪಷ್ಟತೆ ಇಲ್ಲ. ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ಜಿಡಿ ದೇವೇಗೌಡರ ವಿರುದ್ದ ಅಷ್ಟೆಲ್ಲ ಮಾತಾಡಿದ್ರು. ಅಮೇಲೆ ದೇವೇಗೌಡ, ಕುಮಾರಸ್ವಾಮಿ ರಾಜೀ ಮಾಡಿದರು. ನಾನು ಪಕ್ಷ ಬಿಡೊಲ್ಲ ಅಂದ್ರು ಯಾರು ಬಂದು ನನ್ನ ಬಳಿ ಮಾತಾಡಲಿಲ್ಲ.ನನ್ನನ್ನ ಯಾರು ಕರೆದು ಮಾತಾಡಲಿಲ್ಲ. ಭಾರದ ಮನಸ್ಸಿನಿಂದ ರಾಜೀನಾಮೆ ಕೊಟ್ಟಿದ್ದೇನೆಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಬೇರೆ ಯಾರು ಪಕ್ಷ ಬಿಡ್ತಾರೋ ಗೊತ್ತಿಲ್ಲ. ಮಾರ್ಚ್ 30ರ ನಂತರ ನಾನು ಕಾಂಗ್ರೆಸ್ ‌ಸೇರ್ಪಡೆ ಆಗುತ್ತೇನೆ. ಕಾಂಗ್ರೆಸ್ ‌ಸೇರ್ಪಡೆ ಆಗುತ್ತೇನೆ. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲಿದ್ದೇನೆ. ನನ್ನ ಕಾರ್ಯಕರ್ತರು ನನ್ನ ಜತೆ ಇದ್ದಾರೆ. 100% ಕಾಂಗ್ರೆಸ್ ನಿಂದ ಗೆಲ್ಲುತ್ತೇನೆಂದು ಹೇಳಿದ್ದಾರೆ.

    ರಸ್ತೆ ಮಾಲಿನ್ಯದಿಂದಾಗಿ ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts