More

    ತುಂತುರು ಮಳೆಯಿಂದ ದ್ರಾಕ್ಷಿ ಬೆಳೆಗೆ ಹಾನಿ

    ಕೊಕಟನೂರ: ಅಥಣಿ ತಾಲೂಕಿನಲ್ಲಿ ಹವಾಮಾನ ವೈಪರೀತ್ಯ ಹಾಗೂ ತುಂತುರು ಮಳೆಗೆ ದ್ರಾಕ್ಷಿ ಬೆಳೆ ತಪ್ಪಲು ಉದುರಿ ಚಾಟನಿ ತೆಗೆದುಕೊಳ್ಳಲು ಬಾರದೇ ಇರುವುದರಿಂದ ಸಂಪೂರ್ಣ ಹಾನಿಯಾದ ಪರಿಣಾಮ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ತಂಡ ಕೊಕಟನೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು.

    ಅಥಣಿ ತಾಲೂಕು ಬೆಳಗಾವಿ ಜಿಲ್ಲೆಯಿದ್ದರೂ ಪ್ರಾಕೃತಿಕವಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯನ್ನು ಹೋಲುತ್ತದೆ. ಇದರಿಂದಾಗಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ. ಎಸ್.ಜಿ. ಗೊಳ್ಳಗಿ, ಡಾ. ಸಿದ್ದಣ್ಣ ಟೋಪಿ, ಡಾ. ರಮೇಶ ರಾಠೋಡ, ಡಾ. ಎ.ಎಂ. ನದಾಫ್ ಅವರನ್ನೊಳಗೊಂಡ ತಂಡ ಭೇಟಿ ನೀಡಿದಾಗ ಕಳೆದ ಒಂದು ತಿಂಗಳಿನಿಂದ ಸೂರ್ಯನ ಬಿಸಿಲು ಇಲ್ಲದ್ದರಿಂದ ಮೋಡ, ಮಂಜು ಹಾಗೂ ತಂಪು ವಾತಾವರಣದಲ್ಲಿ ದ್ರಾಕ್ಷಿ ಬೆಳೆಯ ಎಲೆಗಳು ಉದುರುತ್ತಿವೆ ಎಂದು ತಿಳಿಸಿದರು.

    ಜಿಪಂ ಸದಸ್ಯ ಹಾಗೂ ಅಥಣಿ ತಾಲೂಕಾ ದ್ರಾಕ್ಷಿ ಬೆಳೆಗಾರ ಸಂಘದ ನಿರ್ದೇಶಕ ಸಿದ್ಧಪ್ಪ ಮುಕಣ್ಣವರ ಮಾತನಾಡಿ. ಬೆಳಗಾವಿ ಜಿಲ್ಲೆಯಲ್ಲಿ 6700 ಹೆಕ್ಟೇರ್ ದ್ರಾಕ್ಷಿ ಬೆಳೆದಿದ್ದು, ಅದರಲ್ಲಿ ಅಥಣಿ ತಾಲೂಕಿನಲ್ಲಿಯೇ 4 ಸಾವಿರ ಹೆಕ್ಟೇರ್ ದ್ರಾಕ್ಷಿ ಬೆಳೆಯನ್ನು ರೈತರು ಅವಲಂಬಿಸಿದ್ದಾರೆ. ಇದರಿಂದ ಈ ವರ್ಷ ಚಾಟನಿ ಮಾಡುವುದೇ ದುರ್ಲಭವಾಗಿದೆ. ಕರೊನಾದಿಂದ ಕಳೆದ ವರ್ಷದ ಬೇದಾನಿ (ಒಣದ್ರಾಕ್ಷಿ) ಇನ್ನೂ ಶೀತಗೃಹ (ಕೋಲ್ಡ್ ಸ್ಟೋರೆಜ್) ನಲ್ಲಿಯೇ ಇವೆ. ಹೀಗಾಗಿ ದ್ರಾಕ್ಷಿ ಬೆಳೆಯನ್ನು ನೆಚ್ಚಿದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ದ್ರಾಕ್ಷಿ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.


    ಅಥಣಿ ಸಹಾಯಕ ತೋಟಗಾರಿಕೆ ನಿರ್ದೇಶಕ ವಿ.ಸಿ. ಚುನಮುರಿ, ಸಹಾಯಕ ತೋಟಕಾರಿಕೆ ಅಧಿಕಾರಿ ಅಶ್ವಿನಿ ಗಾನೂರ, ಅಭಯಕುಮಾರ ನಾಂದ್ರೇಕರ್, ಸುರೇಶ ಪಾಟಣಕರ, ಅನಿಲ ಮುಳಿಕ, ರಾಘವೇಂದ್ರ ಚವ್ಹಾಣ, ಅನಿಲ ಸಾಳುಂಕೆ, ಶಿವಾಜಿ ಚವ್ಹಾಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts