More

    VIDEO| ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಪಕ್ಷಿಯನ್ನು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    ಬ್ರಾಸಿಲಿಯಾ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಪಕ್ಷಿಯೊಂದು ಮರದ ಬೇಲಿಯ ಮೇಲೆ ಕುಳಿತಿರುವ ಚಿತ್ರದಲ್ಲಿ ಪಕ್ಷಿಯೂ ನೋಡಲು ಥೇಟ್​ ಕತ್ತರಿಸಿದ ಮರದ ತುಂಡಿನಂತೆ ಕಾಣುತ್ತಿದ್ದು, ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರವನ್ನೂ ಬ್ರೆಜಿಲ್​ನಲ್ಲಿ ಸೆರೆಹಿಡಿಯಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಇದ್ದು, ಭಾರಿ ವೈರಲ್​ ಆಗಿದೆ.

    ವಿಡಿಯೋ ಮತ್ತು ಫೋಟೋವನ್ನು ವಾಂಡೇರ್ಲಿ ಬೆನಿಟ್ಸ್​ ಎಂಬುವರು ಸೆರೆಹಿಡಿದಿದ್ದಾರೆ. “ಪೊಟೋ ಪಕ್ಷಿ”ಯ ಚಿತ್ರವಾಗಿದ್ದು, ಮರದ ಬೇಲಿಯ ಮೇಲೆ ಥೇಟ್ ಮರದಂತೆ ನಿಂತಿರುವ ಪಕ್ಷಿಯು ಕೊನೆಯಲ್ಲಿ ಮೊಟ್ಟೆ ಇಟ್ಟು ಹಾರಿಹೋಗುವುದು ವಿಡಿಯೋದಲ್ಲಿದೆ. ​

    VIDEO| ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಪಕ್ಷಿಯನ್ನು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    ಇನ್ನು ಈ ವಿಡಿಯೋವನ್ನು 2015 ಜನವರಿ 16ರಂದು ಪೋಸ್ಟ್​ ಮಾಡಲಾಗಿದ್ದು, ಇದೀಗ ಮತ್ತೊಮ್ಮೆ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಇನ್ನು ಪೊಟೊ ಪಕ್ಷಿಯು ರಾತ್ರಿ ಚಟುವಟಿಕೆಯ ಪ್ರಭೇದಕ್ಕೆ ಸೇರಿದ್ದರು, ದಕ್ಷಿಣ ಗೋಳಾರ್ಧದಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಫೋಟೋ ಮತ್ತು ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಡೈಲಿ ಮೇಲ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts