More

    ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳಿಂದ ನಳಪಾಕ

    ಬೆಂಗಳೂರು: ಎಲ್ಲರಿಗೂ ಲಾಕ್‌ಡೌನ್ ಕಲಿಸಿದ ಪಾಠ ಒಂದೆರಡಲ್ಲ. ಮನೆಯೇ ಮಂತ್ರಾಲಯ ಎಂದು ಹಿರಿಯರು ಹೇಳಿದಂತೆ ಬಹುತೇಕ ಮಂದಿ ಕುಟುಂಬದವರೊಂದಿಗೆ ಕಾಲಕಳೆಯುತ್ತಿದ್ದಾರೆ. ಸ್ಟಾರ್ ಕ್ರೀಡಾಪಟುಗಳು ತಮ್ಮ ಅಭಿಮಾನಿಗಳಿಗೆ ಹತ್ತಿರವಾಗುವ ಸಲುವಾಗಿ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನೇ ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ. ಫಿಟ್ನೆಸ್ ವ್ಯಾಯಾಮಗಳನ್ನು ಮಾಡುವುದು, ಕುಟುಂಬ ಸದಸ್ಯರಿಗೆ ಸಹಾಯ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಕೆಲ ಸ್ಟಾರ್ ಕ್ರೀಡಾಪಟುಗಳು ತಮಗಿಷ್ಟವಾದ ತಿಂಡಿಗಳನ್ನು ಮಾಡುವ ಮೂಲಕ ಗಮನಸೆಳೆದಿದ್ದಾರೆ.

    ಇದನ್ನೂ ಓದಿ: ಮನೀಷ್ ಪಾಂಡೆಗೆ ಐವರು ಗೆಳತಿಯರು! ಯಾರವರು ಗೊತ್ತೇ?

    ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳಿಂದ ನಳಪಾಕ

    ಭಜ್ಜಿ, ಮಯಾಂಕ್ ಭರ್ಜರಿ ಅಡುಗೆ….
    ಲಾಕ್‌ಡೌನ್ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಮಯಾಂಕ್ ಅಗರ್ವಾಲ್ ಅಡುಗೆ ಮನೆಯಲ್ಲೂ ಅಷ್ಟೇ ಸಕ್ರಿಯವಾಗಿದ್ದಾರೆ. ಪತ್ನಿ ಗೀತಾ ಬಾಸ್ರಾರ ಸಹಾಯದೊಂದಿಗೆ ಅಡುಗೆ ಮಾಡುವುದನ್ನು ಕಲಿಯುತ್ತಿರುವುದಾಗಿ ಭಜ್ಜಿ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಮಯಾಂಕ್ ಅಗರ್ವಾಲ್, ಕ್ವಿಯೊನಾದೊಂದಿಗೆ ಬೆಣ್ಣೆ, ಬೆಳ್ಳುಳ್ಳಿ, ಅಣಬೆಯಿಂದ ವಿಶೇಷ ತಿಂಡಿ ತಯಾರಿಸಿದ್ದರು. 29 ವರ್ಷದ ಮಯಾಂಕ್ ವಿವಿಧ ರೀತಿಯ ತಿಂಡಿಗಳನ್ನ ತಯಾರಿಸಿದ್ದರು. ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್, ತರಕಾರಿ ಕಟ್ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಜತೆಗೆ ರೋಹಿತ್ ಶರ್ಮ ಅಡುಗೆ ತಯಾರಿಯಲ್ಲಿ ಪತ್ನಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕ್ರಿಕೆಟರ್ ವೇದಾ ಈಗ ಟಿಕ್‌ಟಾಕ್ ಕ್ವೀನ್ಲಾಕ್‌ಡೌನ್‌ನಲ್ಲಿ ಕ್ರೀಡಾಪಟುಗಳಿಂದ ನಳಪಾಕ

    ಬೋಪಣ್ಣ ವಿಶೇಷ ರೆಸಿಪಿ
    ಸ್ಟಾರ್ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವಾಕಾಡೊ ಏಗ್ಸ್ ತಯಾರಿಸುವ ಮೂಲಕ ಗಮನಸೆಳೆದಿದ್ದರು. ಜತೆಗೆ ಇದಕ್ಕೆ ಬೇಕಾಗುವ ಸಾಮಾಗ್ರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಸ್ಪೇನ್‌ನಲ್ಲಿ ಲಾಕ್ ಆಗಿರುವ 19 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ರಾೆಲ್ ನಡಾಲ್, ಕೂಡ ಅಡುಗೆ ಮಾಡುವುದನ್ನು ಕಲಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts