More

    ಆಸ್ಕರ್​ ಪ್ರಶಸ್ತಿ ಬಂದಿದ್ದೇ ಬಂದಿದ್ದು ಆನೆಯಣ್ಣ ಫುಲ್​ ಫೇಮಸ್!

    ನವದೆಹಲಿ: ಮಾರ್ಚ್ 13 ರಂದು ಲಾಸ್ ಏಂಜಲೀಸ್‌ನಲ್ಲಿ ದಿ ಎಲಿಫೆಂಟ್ ವಿಸ್ಪರರ್ ಮತ್ತು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆಯೇ ಪ್ರಪಂಚದಾದ್ಯಂತದ ಭಾರತೀಯರು ಸಂಭ್ರಮಿಸಿದರು. ಎಲಿಫೆಂಟ್ ವಿಸ್ಪರರ್ಸ್ ಕಿರು ಸಾಕ್ಷ್ಯಚಿತ್ರ, ಅನಾಥ ಆನೆಯನ್ನು ಪಡೆದ ದಂಪತಿಗಳ ಹೃದಯಸ್ಪರ್ಶಿ ಕಥೆಯಾಗಿದೆ .

    ಇದೀಗ ತೆಪ್ಪಕಾಡು ಆನೆ ಶಿಬಿರದಲ್ಲಿ ಸಂಚಲನ ಮೂಡಿದೆ. ಆಸ್ಕರ್​ ಗೆದ್ದ ಸೆಲೆಬ್ರಿಟಿ ಆನೆಯನ್ನು ಕಣ್ತುಂಬಿಕೊಳ್ಳಲು ಜನರು ಶಿಬಿರಕ್ಕೆ ಮುಗಿಬಿಳುತ್ತಿದ್ದಾರೆ. ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಕೂಡಲೇ ಇದು ನಡೆದಿದೆ.

    ಹಾಲ್ ಔಟ್, ಹೌ ಡು ಯು ಮೆಷರ್ ಎ ಇಯರ್, ದಿ ಮಾರ್ಥಾ ಮಿಚೆಲ್ ಎಫೆಕ್ಟ್ ಮತ್ತು ಸ್ಟ್ರೇಂಜರ್ ಅಟ್ ದಿ ಗೇಟ್ ಜೊತೆಗೆ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ನಾಮನಿರ್ದೇಶನಗೊಂಡಿತು.

    “ಇದೊಂದು ಉತ್ತಮ ಕ್ಷಣ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ಆನೆ ನನ್ನ ಅಚ್ಚುಮೆಚ್ಚಿನ ಪ್ರಾಣಿ ಮತ್ತು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿರುವುದು ನನಗೆ ಸಂತೋಷ ಮತ್ತು ಉತ್ಸುಕತೆಯನ್ನುಂಟು ಮಾಡಿದೆ” ಎಂದು ಶಿಬಿರಕ್ಕೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ಎಎನ್‌ಐಗೆ ತಿಳಿಸಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts