More

    ಸ್ನೇಹ ಬಾಂಧವ್ಯಕ್ಕೆ ಕ್ರೀಡಾಕೂಟ ಸಹಕಾರಿ: ಜಿಲ್ಲಾಧಿಕಾರಿ ಸೆಲ್ವಮಣಿ ಅಭಿಮತ ವಿಜೇತರಿಗೆ ಬಹುಮಾನ ವಿತರಣೆ

    ಕೆಜಿಎಫ್: ವರ್ಷಕ್ಕೊಮ್ಮೆ ನಡೆಯುವ ಪೊಲೀಸ್ ಕ್ರೀಡಾಕೂಟದಲ್ಲಿ ಹಬ್ಬದ ವಾತಾವರಣದಿಂದ ಸಂತಸ ತಂದಿದ್ದು, ಒತ್ತಡದ ನಡುವೆಯೂ ಪೊಲೀಸರಿಗೆ ಕ್ರೀಡೋಲ್ಲಾಸ, ಸ್ನೇಹ ಬಾಂಧವ್ಯಕ್ಕೆ ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

    ಕೆಜಿಎಫ್ ಚಾಂಪಿಯನ್ ರೀಫ್ಸ್‌ನ ಡಿಎಆರ್ ಪೊಲೀಸ್ ಕವಾಯಿತು ಮೈದಾನದಲ್ಲಿ 2021-22ನೇ ಸಾಲಿನ ಪೊಲೀಸರ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ದೈಹಿಕವಾಗಿ, ಮಾನಸಿಕವಾಗಿ, ಶಾಂತಿ, ಸಂಯಮದಿಂದ ಕರ್ತವ್ಯ ನಿರ್ವಹಿಸಲು ಕ್ರೀಡೆಗಳು ಸಹಕಾರಿ. ಪೊಲೀಸರ ಕರ್ತವ್ಯ ನಿಷ್ಠೆಗೆ ಕುಟುಂಬ ಸದಸ್ಯರ ಬೆಂಬಲ ಅಗತ್ಯ. ಪೊಲೀಸರ ಕುರಿತು ಸಮಾಜದಲ್ಲಿ ಯಾವುದೇ ಕೀಳರಿಮೆ ಕಂಡುಬರದಂತೆ ನಡೆದುಕೊಳ್ಳಬೇಕು ಎಂದರು.

    ಅಪರಾಧಗಳು ಹೆಚ್ಚಾಗಲು ನಿರುದ್ಯೋಗ ಸಮಸ್ಯೆ ಕಾರಣವಾಗಿದೆ. ಉದ್ಯೋಗಾಂಕ್ಷಿಗಳಿಗೆ ಸಮಾಜದಲ್ಲಿ ಸ್ಪರ್ಧಾತ್ಮಕ ಪೈಪೋಟಿಯಿದ್ದು, ಯಾರೂ ಸಹ ಕೆಟ್ಟದ್ದನ್ನು ಬಯಸದೇ ಒಳ್ಳೆ ಮಾರ್ಗದಲ್ಲಿ ಮುನ್ನಡೆಯಬೇಕು. ಕರ್ತವ್ಯ ನಿಷ್ಠೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.

    ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಪಿ ಡಿ.ಕಿಶೋರ್‌ಬಾಬು, ಪೊಲೀಸರು ಕಾನೂನು ಸುವ್ಯವಸ್ಥೆ ಅಡಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಮಧ್ಯೆ ಮನೋವಿಕಾಸಕ್ಕಾಗಿ ವರ್ಷಕ್ಕೊಮ್ಮೆ ಕ್ರೀಡಾಕೂಟ ನಡೆಸಲಾಗುತ್ತಿದೆ. ಪ್ರಸ್ತುತ ಕೆಜಿಎಫ್‌ನಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಪೊಲೀಸರು ಉತ್ಸಹದಿಂದ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

    ಪೊಲಿಸರ ಮಕ್ಕಳಿಗೂ ಸಹ ಎಲ್ಲ ರೀತಿಯ ಕ್ರೀಡೆ ನಡೆಸಲಾಯಿತು. ಡಿವೈಎಸ್ಪಿ ಪಿ.ಮುರಳೀಧರ ಇನ್‌ಪ್ಸೆಕ್ಟರ್ ಆರ್.ದಯಾನಂದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts