More

    ವಾಹನ ಚಾಲಕರ ಕಸರತ್ತು

    ಕೊಪ್ಪ: ಸ್ಪೋರ್ಟ್ಸ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ 4*4 ಆ್ರೋಡ್‌ನಲ್ಲಿ ವಾಹನ ಚಾಲಕರು ತಮ್ಮ ಕಸರತ್ತು ಮೆರೆದರು. ಹೊಂಡ-ಗುಂಡಿ, ಉಬ್ಬು-ತಗ್ಗು, ಹಳ್ಳ, ತೋಟದ ನಡುವೆ ಕಾರು, ಜೀಪ್, ಜಿಪ್ಸಿಗಳನ್ನು ಚಲಾಯಿಸಿ ಖುಷಿಪಟ್ಟರು.
    ಜಿಟಿಜಿಟಿ ಮಳೆ ನಡುವೆ ಕಾಫಿ, ಅಡಕೆ ತೋಟಗಳ ನಡುವೆ ಹಾದು ಹೋಗುವ ಹಳ್ಳದಲ್ಲಿ, ಎತ್ತರದ ಉಬ್ಬಿನಲ್ಲಿ ವಾಹನಗಳನ್ನು ಚಲಾಯಿಸಿ ಸಾಹಸ ಮೆರೆದರು. ಡ್ರೈವ್ ನೋಡಲು ಆಗಮಿಸಿದ್ದ ಸ್ಥಳೀಯರಿಗಂತೂ ಎದೆ ಝಲ್ ಎನಿಸುತ್ತಿತ್ತು.
    ತಾಲೂಕಿನ ಮರಿತೊಟ್ಟಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಬ್ಬಾನೆ, ಕಾಚ್‌ಗಲ್, ಹಂಚಿಕೊಳಲು, ಕಳಾಸಪುರ, ಅರೂರು, ತನೂಡಿ ಗ್ರಾಮದಲ್ಲಿ ಶನಿವಾರ ಸ್ಪರ್ಧೆ ಆಯೋಜಿಸಲಾಗಿತ್ತು. ಸಂತೋಷಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದ ರೋಮಾಂಚನಕಾರಿ ಆ್ರೋಡ್ ಮೋಟರ್ ಡ್ರೈವ್‌ಗೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 120ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕುಟುಂಬ ಸಮೇತರಾಗಿ ಕೆಲವರು ಆಗಮಿಸಿ ಸಂಭ್ರಮ ಪಟ್ಟರು. ಯುವತಿಯರು ಕೂಡ ಪುರುಷರಿಗಿಂತ ನಾವೇನೂ ಕಮ್ಮಿಯಿಲ್ಲ ಎನ್ನುವ ರೀತಿ ವಾಹನಗಳನ್ನು ಚಲಾಯಿಸಿದರು.
    ಕೆಲವು ವಾಹನಗಳು ದಿಬ್ಬಗಳನ್ನು ಹತ್ತಲು ಸಾಹಸಪಟ್ಟರೆ, ಕೆಲವು ದಿಬ್ಬ ಏರಲು ಸಾಧ್ಯವಾಗದೆ ಟ್ರಾೃಕ್ಟರ್‌ಗಳ ಸಹಾಯ ಪಡೆದರು. ಮಳೆ ಬರುತ್ತಿದ್ದರಿಂದ ವಾಹನಗಳ ಟೈಯರ್ ಜಾರುತ್ತಿತ್ತು. ಈ ವೇಳೆ ದಿಬ್ಬ ಹತ್ತಿಸುವುದೇ ಸವಾಲು ಆಗಿತ್ತು.
    ಬೆಂಗಳೂರಿನ ಅಶೋಕ್ ವಿಜಯವಾಣಿಯೊಂದಿಗೆ ಮಾತನಾಡಿ, ನಾನು ಎರಡನೇ ಬಾರಿ ಭಾಗವಹಿಸುತ್ತಿದ್ದು ಇಂತಹ ಇವೆಂಟ್ ಸಂತೋಷ ನೀಡುತ್ತದೆ. ಮಲೆನಾಡಿನ ವಾತಾವರಣ ನಮಗೆ ಡ್ರೈವ್ ಮಾಡಲು ಥ್ರೀಲ್ ನೀಡುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts