More

    ಆರೋಗ್ಯ, ಆನಂದಕ್ಕೆ ಕ್ರೀಡೆ ಅತಿ ಮುಖ್ಯ: ವಿನಯ್ ಗುರೂಜಿ

    ತೀರ್ಥಹಳ್ಳಿ: ಗಂಡಿನಷ್ಟೇ ಸಮರ್ಥಳಾದ ಹೆಣ್ಣು ಅಡುಗೆ ಮನೆಗೆ ಸೀಮಿತವಾಗದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹೊಂದಿರುವ ಮಹಿಳೆ ಸರ್ವ ಶ್ರೇಷ್ಠತೆಯೊಂದಿಗೆ ಪಾವಿತ್ರ್ಯವನ್ನೂ ಹೊಂದಿದ್ದಾಳೆ ಎಂದು ಗೌರಿಗದ್ದೆ ಗಾಂಧಿ ಸೇವಾಶ್ರಮದ ವಿನಯ್ ಗುರೂಜಿ ಹೇಳಿದರು.
    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಲೆನಾಡು ಮಹಿಳಾ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ಆಹ್ವಾನಿತ ಮಹಿಳಾ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಹಾಗೂ ಸಾಧಕರ ಸನ್ಮಾನ ನೆರವೇರಿಸಿ ಮಾತನಾಡಿದರು.
    ಆರೋಗ್ಯ ಮತ್ತು ಆನಂದಕ್ಕೆ ಕ್ರೀಡೆ ಅತಿ ಮುಖ್ಯ. ಮಹಿಳಾ ಸಬಲೀಕರಣ ದೃಷ್ಟಿಯಿಂದ ಕ್ರೀಡೆ ಆಯೋಜಿಸಿರುವುದು ಪ್ರಶಂಸನೀಯ. ಆಹಾರ ಕ್ರಮದ ಬಗ್ಗೆ ತಾಯಂದಿರುವ ಎಚ್ಚರಿಕೆ ವಹಿಸುವ ಅಗತ್ಯವಿದೆ. ಅತಿಯಾದ ಬಾಯ್ಲರ್ ಚಿಕನ್ ಬಳಕೆ ಸೇರಿ ರಾಸಾಯನಿಕ ಮಿಶ್ರಣದ ಆಹಾರ ಸೇವನೆಯಿಂದ ಇತ್ತೀಚೆಗೆ ಎಳೆಯ ವಯಸ್ಸಿನಲ್ಲೇ ಹೆಣ್ಣು ಮಕ್ಕಳಲ್ಲಿ ಅನಿರೀಕ್ಷಿತ ಬದಲಾವಣೆ ಕಾಣಿಸಿಕೊಳ್ಳುತ್ತಿವೆ. ಇದು ಅತ್ಯಂತ ಅಪಾಯಕಾರಿ. ಆರೋಗ್ಯದ ದೃಷ್ಟಿಯಿಂದ ಭಾರತೀಯ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕಿದೆ. ಹುಂಡಿಗೆ ಹಣ ಹಾಕುವ ಬದಲು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಮಾನವೀಯತೆ ಮೆರೆಯೋಣ ಎಂದು ಹೇಳಿದರು.
    ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಪುರುಷರಿಗೆ ಸರಿಸಮಾನಳಾಗಿ ಹೆಣ್ಣು ಎಲ್ಲ ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯ ತೋರುತ್ತಿದ್ದಾಳೆ. ಇದಕ್ಕೆ ಕುಟುಂಬದ ಸದಸ್ಯರ ಪೂರ್ಣ ನೆರವು ಅಗತ್ಯ. ಮಹಿಳಾ ಸಬಲೀಕರಣ ದೃಷ್ಟಿಯಿಂದ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಇಲ್ಲಿನ ಮಲೆನಾಡು ಮಹಿಳಾ ಟ್ರಸ್ಟ್ ಕಾರ್ಯ ಪ್ರಶಂಸನೀಯ ಎಂದರು. ಮಲೆನಾಡು ಮಹಿಳಾ ಟ್ರಸ್ಟ್ ಅಧ್ಯಕ್ಷೆ ನಯನಾ ಜೆ. ಶೆಟ್ಟಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಸಿರಿಬೈಲ್ ಧರ್ಮೇಶ್, ಡಿವೈಎಸ್ಪಿ ಗಜಾನನ ಸುತಾರ್, ಸೊಪ್ಪುಗುಡ್ಡೆ ರಾಘವೇಂದ್ರ, ಎಂ.ಜಿ.ಮಣಿಹೆಗ್ಡೆ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಶ್ರುತಿ ಆದರ್ಶ, ಅಮರನಾಥ ಶೆಟ್ಟಿ ಇದ್ದರು.

    ಮೂಡಬಿದಿರೆ ತಂಡ ಪ್ರಥಮ

    ರಾಜ್ಯ ಮಟ್ಟದ ಆಹ್ವಾನಿತ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡ ಮೂಡಬಿದಿರೆ(ಪ್ರಥಮ), ಮೈಸೂರಿನ ಹ್ಯಾಪಿ ಗರ್ಲ್ಸ್( ದ್ವಿತೀಯ), ರವಿ ಅಕಾಡೆಮಿ ಮೈಸೂರು(ತೃತೀಯ), ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ(ಚತುರ್ಥ) ಸ್ಥಾನ ಪಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts