More

    ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

    ತಾಳಿಕೋಟೆ : ಮಕ್ಕಳಲ್ಲಿ ಉತ್ತಮ ಚೈತನ್ಯ ಮೂಡಿಸುವದರೊಂದಿಗೆ ಆರೋಗ್ಯವಂತ ದೇಹವನ್ನು ಹೊಂದಲು ಕ್ರೀಡೆ ಸಹಕಾರಿಯಾಗಿದ್ದು, ಪ್ರತಿ ವಿಧ್ಯಾರ್ಥಿಯು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಪಿಎಸ್‌ಐ ರಾಮನಗೌಡ ಸಂಕನಾಳ ಹೇಳಿದರು.

    ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ 18ನೇ ವಾರ್ಷಿಕ ಕೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕ್ರೀಡೆ ಎಂಬುದು ಕೇವಲ ಆಟವಲ್ಲ. ಜೀವನವನ್ನು ಬದಲಾಯಿಸುವ ಶಕ್ತಿ ಅದರಲ್ಲಿ ಅಡಗಿದೆ.

    ಸಾಕಷ್ಟು ಜನರು ಕ್ರೀಡೆಯ ಮೂಲಕ ಜಗತ್ತಿನಲ್ಲಿ ಪ್ರಸಿದ್ಧರಾಗಿದ್ದಾರೆ. ಪಾಠದ ಜತೆಗೆ ಕ್ರೀಡೆಯೂ ಮನುಷ್ಯನಿಗೆ ಅವಶ್ಯವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಸ್.ಎಂ. ಸಜ್ಜನ ಮಾತನಾಡಿ, ಸದೃಢ ದೇಹ ಮತ್ತು ಸದೃಢ ಮನಸ್ಸು ಇರಬೇಕಾದರೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ದೈಹಿಕ ಶ್ರಮದಿಂದ ಉತ್ತಮ ಆರೋಗ್ಯದ ಜತೆಗೆ ಶಾಲೆಯಲ್ಲಿ ಹೇಳಿದ ಪಾಠ ಮಸ್ತಕಕ್ಕೆ ಸೇರಲಿದೆ ಎಂದರು.

    ಕ್ರೀಡಾಕೂಟದ ಅಂಗವಾಗಿ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನದೊಂದಿಗೆ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

    ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್. ಬಂಗಿ, ಎಂ.ಎಲ್. ಪಟೇದ, ಶಂಕರ ಸಜ್ಜನ, ಸಂಸ್ಥೆಯ ಆಡಳಿತಾಧಿಕಾರಿ ಬಸವರಾಜ ಸಜ್ಜನ, ವಿಪಿನ್ ರಾಜ, ಬಿ. ಆದಿಶೇಖರರಡ್ಡಿ, ರಾಕೇಶ ನಾಯರ, ಮುಖ್ಯಶಿಕ್ಷಕಿ ಆರ್.ಎಸ್. ದೇಸಾಯಿ, ದೈಹಿಕ ಶಿಕ್ಷಕರಾದ ಎಸ್.ಕೆ. ಸುಣದೊಳಿ, ಕೆ.ಎಸ್. ವಾಲಿಕಾರ ಇತರರಿದ್ದರು.

    ಕಲ್ಮೇಶ ಆಲ್ಯಾಳ ಪರಿಚಯಿಸಿದರು. ಐಶ್ವರ್ಯ ಸಜ್ಜನ ಮತ್ತು ಮಲ್ಲನಗೌಡ ಬಿರದಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts