More

    ಸ್ಪಂಜಿನಲ್ಲಿ ವಿವಿಧ ಮಾದರಿಗಳ ರಚನೆ -ಶಿಕ್ಷಕನ ಕುಂಚದಲ್ಲಿ ಅರಳಿದ ಕಲೆ

    ಗುರುಗುಂಟಾ: ಪಟ್ಟಣದ ನಿವಾಸಿ, ನಿವೃತ್ತ ಶಿಕ್ಷಕ ಗುರುನಾಥರಾವ್ ದೇಸಾಯಿ ಸ್ಪಂಜಿನಲ್ಲಿ ಹಲವಾರು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆಯುತ್ತಿದ್ದಾರೆ.

    ಸ್ಪಂಜಿನಲ್ಲಿ ಹೃದಯ, ಕಿಡ್ನಿ, ಮೆದುಳು ಇತ್ಯಾದಿ ಅಂಗಾಂಗಗಳ ಕಲಾಕೃತಿ ರಚಿಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ, ಐತಿಹಾಸಿಕ, ಕ್ರೀಡೆ, ಧಾರ್ಮಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರ, ಸ್ಮಾರಕಗಳ, ಪ್ರಸ್ತುತ ವಿದ್ಯಮಾನಗಳನ್ನು ಬಿಂಬಿಸುವ ವಿವಿಧ ಕಲಾಕೃತಿಗಳನ್ನು ಸ್ಪಂಜಿನಿಂದ ರಚಿಸಿದ್ದಾರೆ. ವಿಜ್ಞಾನಕ್ಕೆ ಸಂಬಂಧಪಟ್ಟ ಸ್ಪಂಜಿನಿಂದ ಸಿದ್ಧಗೊಳಿಸಿದ ಮಾದರಿಗಳು ದೆಹಲಿಯಲ್ಲಿ ಪ್ರದರ್ಶನಗೊಂಡಿವೆ.

    ಇದನ್ನೂ ಓದಿ: ಕ್ರಿಕೆಟ್​ ಸಾಧಕರ ‘ಕ್ರೀಡಾ ಜಂಕ್ಷನ್​’; ಮೇಲ್ಸೇತುವೆ ಪಿಲ್ಲರ್​ ಮೇಲೆ ಕುಂಚ ಕೈಚಳಕ

    ಗುರುನಾಥರಾವ್ ದೇಸಾಯಿ ಅವರ ಮನೆಯ ಗೋಡೆಗಳಲ್ಲಿ ರಾರಾಜಿಸುತ್ತಿರುವ ಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ. ಗುರುನಾಥರಾವ್ ದೇಸಾಯಿ ಅವರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಶಿಕ್ಷಣ ಕಲ್ಯಾಣ ನಿಧಿಯಿಂದ ಪ್ರಶಸ್ತಿ, ರಾಯಚೂರು ಜಿಲ್ಲಾ ರೋಟರಿ ಕ್ಲಬ್ ನಿಂದ ಪ್ರಶಸ್ತಿ, ಉತ್ತಮ ಜನಗಣತಿ ಕಾರ್ಯಕ್ಕೆ 1991ರಲ್ಲಿ ಕೇಂದ್ರ ಸರ್ಕಾರ ಬೆಳ್ಳಿ ಪದಕ ನೀಡಿದೆ.

    ಹಿಂದಿನ ಘಟನಾವಳಿಗಳನ್ನು ಮತ್ತು ಮಹಾತ್ಮರ, ವಿಶ್ವಪ್ರಸಿದ್ಧ ನಾಯಕರ, ದೇವರುಗಳ ಕಲಾಕೃತಿಗಳನ್ನು ಸ್ಪಂಜಿನಲ್ಲಿ ನಿರ್ಮಿಸಿದ್ದೇನೆ. ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ದೃಷ್ಟಿಯಿಂದ ಈ ಕಾರ್ಯ ಮಾಡುತ್ತಿದ್ದೇನೆ.
    | ಗುರುನಾಥರಾವ್ ದೇಸಾಯಿ, ನಿವೃತ್ತ ಶಿಕ್ಷಕ, ಗುರುಗುಂಟಾ

    ಗುರುನಾಥರಾವ್ ದೇಸಾಯಿ ಶಿಕ್ಷಣದ ಜತೆಗೆ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸ್ಪಂಜಿನಿಂದ ರಚಿಸಿದ ಮಾದರಿಗಳ ಮೂಲಕ ಕಲೆಗೆ ಮೆರುಗು ನೀಡಿದ್ದಾರೆ.
    | ರಾಜಾಸೋಮನಾಥನಾಯಕ, ಸಂಸ್ಥಾನಿಕ, ಗುರುಗುಂಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts