More

    ಇಂದು ಆಫ್ಘನ್‌ಗೆ ಡಚ್ ಸವಾಲು: ಚಾಂಪಿಯನ್ಸ್ ಟ್ರೋಫಿ ಅರ್ಹತೆಗೆ ಪೈಪೋಟಿ

    ಲಖನೌ: ಬಲಿಷ್ಠ ತಂಡಗಳಿಗೆ ಆಘಾತ ನೀಡಿ ಗಮನ ಸೆಳೆದಿರುವ ತಂಡಗಳಾದ ಅ್ಘಾನಿಸ್ತಾನ ಹಾಗೂ ನೆದರ್ಲೆಂಡ್ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಶುಕ್ರವಾರ ಮುಖಾಮುಖಿ ಆಗಲಿವೆ. ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳ ಮೊಟ್ಟಮೊದಲ ಮುಖಾಮುಖಿಯಾಗಿದೆ.
    ಸತತ 2 ಗೆಲುವಿನೊಂದಿಗೆ ಬೀಗುತ್ತಿರುವ ಹಶ್ಮತ್‌ಉಲ್ಲಾ ಶಾಹಿದಿ ಪಡೆ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ ತಲಾ 3 ಸೋಲು, ಗೆಲುವಿನೊಂದಿಗೆ ಆರು ಅಂಕ ಕಲೆಹಾಕಿರುವ ಆ್ಘನ್ ತಂಡ ಸೆಮೀಸ್ ರೇಸ್‌ನಲ್ಲೂ ಇದೆ. ಹೀಗಾಗಿ ಈ ಪಂದ್ಯದಲ್ಲಿ 2 ಅಂಕದ ಜತೆಗೆ ರನ್‌ರೇಟ್ ಸುಧಾರಣೆಗೆ ಒತ್ತು ನೀಡಲಿದೆ. ಆದರೆ, ಆ್ಘನ್ ತಂಡ ಗೆಲುವು ಸಾಧಿಸಿದರೂ ಇತರ ಪಂದ್ಯಗಳ ಲಿತಾಂಶ ವರದಾನವಾಗಬೇಕಿದೆ.
    ಹಾಲಿ ಟೂರ್ನಿಯ ‘ಆರೆಂಜ್ ಆರ್ಮಿ’ ನೆದರ್ಲೆಂಡ್ ಆಡಿರುವ ಆರು ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿ 4 ಅಂಕ ಹೊಂದಿದೆ. ಸೆಮೀಸ್ ಹಾದಿ ಕಠಿಣ ಎನಿಸಿದರೂ ಉಳಿದಿರುವ ಅಲ್ಪ ಸ್ವಲ್ಪ ಅವಕಾಶವನ್ನು ಎದುರು ನೋಡುತ್ತಿದೆ. ಡಚ್ಚರಿಗೆ ಈ ಕಾದಾಟದ ನಂತರ ಮುಂದಿನ 2 ಪಂದ್ಯಗಳಲ್ಲಿ (ನ.7 ಆಸ್ಟ್ರೇಲಿಯಾ, ನ. 10 ದ.ಆಫ್ರಿಕಾ) ಅಗ್ನಿಪರೀಕ್ಷೆ ಎದುರಾಗಲಿದೆ. ಹೀಗಾಗಿ ಸೆಮೀಸ್‌ಗೇರುವ ಆಸೆ ಜೀವಂತವಿಡುವುದು ಕಠಿಣವೆನಿಸಿದೆ.
    ಸೆಮೀಸ್ ಕೈತಪ್ಪಿದರೂ, 2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಅಂಕಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದಲೂ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ನೆದರ್ಲೆಂಡ್ ಬಾಕಿಯಿರುವ 3 ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿದರೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಆ್ಘನ್ ಎದುರು ಸೋತರೆ ನವೆಂಬರ್ 8ರ ಇಂಗ್ಲೆಂಡ್ ವಿರುದ್ಧದ ಲಿತಾಂಶ ನೆದರ್ಲೆಂಡ್‌ನ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧರಿಸಲಿದೆ.

    ಏಕದಿನ ಮುಖಾಮುಖಿ: 9
    ಅಪ್ಘಾನಿಸ್ತಾನ- 7
    ನೆದರ್ಲೆಂಡ್-2
    ಆರಂಭ: ಮಧ್ಯಾಹ್ನ 2
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts