More

    ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳಿದ ಮೂವರು ಕ್ರಿಕೆಟಿಗರು

    ಬೆಂಗಳೂರು: ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಆಡಿದ್ದ ಮಿಂಚಿದ್ದ ಮೂವರು ಕ್ರಿಕೆಟಿಗರು ಇದೀಗ 13ನೇ ಆವೃತ್ತಿಗೆ ಹೊಸ ಪಾತ್ರದ ಮೂಲಕ ಮರುಪ್ರವೇಶ ನೀಡುತ್ತಿದ್ದಾರೆ. ಅವರೆಂದರೆ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್, ಇತ್ತೀಚೆಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಹಿಂದೆ ಸರಿದಿದ್ದ ಭಾರತದ ಹರ್ಭಜನ್ ಸಿಂಗ್ ಮತ್ತು ಕಳೆದ ಸಿಪಿಎಲ್‌ನಲ್ಲಿ ಮಿಂಚಿದ ಹಿರಿಯ ಸ್ಪಿನ್ನರ್ ಪ್ರವೀಣ್ ತಂಬೆ. ಹೊಸ ಪಾತ್ರದ ಮೂಲಕ ಐಪಿಎಲ್‌ಗೆ ಮರಳುತ್ತಿರುವ ಈ ಮೂವರೂ ಸ್ಪಿನ್ ಬೌಲರ್‌ಗಳೆಂಬುದು ವಿಶೇಷ.

    2008ರ ಚೊಚ್ಚಲ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಶೇನ್ ವಾರ್ನ್ ಇದೀಗ ಇದೇ ತಂಡಕ್ಕೆ ಮೆಂಟರ್ ಆಗಿ ಮರಳುತ್ತಿದ್ದಾರೆ. ಈಗಾಗಲೆ ತಂಡದ ಪ್ರಚಾರ ರಾಯಭಾರಿಯಾಗಿರುವ ಪಾತ್ರದೊಂದಿಗೆ ಈ ಹೊಸ ಜವಾಬ್ದಾರಿಯನ್ನೂ ಅವರು ನಿಭಾಯಿಸಲಿದ್ದಾರೆ. ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ‘ಟೀಮ್ ಮೆಂಟರ್’ ಎಂಬ ಹೊಸ ಹೊಣೆಯನ್ನು ಅವರಿಗೆ ವಹಿಸಲಾಗಿದೆ.

    ಇನ್ನು ವೈಯಕ್ತಿಕ ಕಾರಣದಿಂದಾಗಿ ಯುಎಇಯಲ್ಲಿ ಐಪಿಎಲ್ ಆಡಲು ತೆರಳದಿರುವ ಹರ್ಭಜನ್ ಸಿಂಗ್ ಇದೀಗ ವೀಕ್ಷಕವಿವರಣೆಕಾರರಾಗಿ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಹಿಂದಿ ಕಾಮೆಂಟರಿ ಬಳಗದಲ್ಲಿ ಸ್ಥಾನ ಪಡೆದಿರುವ ಹರ್ಭಜನ್, ಮುಂಬೈನಿಂದಲೇ ಕಾರ್ಯನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: 560 ಬಡ ಮಕ್ಕಳಿಗೆ ನೆರವಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್

    ಕಳೆದ ಐಪಿಎಲ್ ಹರಾಜಿನಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದರೂ, ಅನಧಿಕೃತ ಟಿ10 ಲೀಗ್‌ಗಳಲ್ಲಿ ಆಡಿದ ಕಾರಣದಿಂದಾಗಿ 48 ವರ್ಷದ ಸ್ಪಿನ್ನರ್ ಪ್ರವೀಣ್ ತಂಬೆ ಈ ಬಾರಿ ಐಪಿಎಲ್‌ನಲ್ಲಿ ಆಡಲು ಅನರ್ಹರಾಗಿದ್ದಾರೆ. ಆದರೆ ಇದೀಗ ಅವರು ಕೆಕೆಆರ್ ತಂಡದ ತರಬೇತಿ ಸಿಬ್ಬಂದಿ ಬಳಗವನ್ನು ಕೂಡಿಕೊಂಡಿದ್ದು, ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಂ ಅಡಿಯಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

    ಅನುಷ್ಕಾ ಬೇಬಿ ಬಂಪ್ ಚಿತ್ರಕ್ಕೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts