More

    ಗ್ರೀನ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸಿದ್ಧಗೊಂಡಿದೆ ಸ್ಪಿನ್ ಖೆಡ್ಡಾ!

    ಕಾನ್ಪುರ: ಭಾರತ ಎಂದಿನಂತೆ ತವರಿನ ಟೆಸ್ಟ್ ಸರಣಿಗೆ ಸ್ಪಿನ್ ಪಿಚ್ ಸಿದ್ಧಪಡಿಸಿದ್ದು, ಪ್ರವಾಸಿ ನ್ಯೂಜಿಲೆಂಡ್ ತಂಡ ಕಠಿಣ ಸವಾಲು ಎದುರಿಸಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ವರ್ಗವಾಗುವ ನಿರೀಕ್ಷೆ ಇದ್ದು, ಭಾರತ ತಂಡ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲಿದೆ. ಅದರಲ್ಲೂ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಹೊಸ ಚೆಂಡಿನಿಂದಲೇ ಬೌಲಿಂಗ್ ಮಾಡುವ ಸಾಧ್ಯತೆ ಇದೆ. ಅಶ್ವಿನ್ ನೆಟ್ಸ್‌ನಲ್ಲಿ ಹೊಸ ಚೆಂಡಿನಲ್ಲೇ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದು ಇದರ ಸೂಚನೆ ರವಾನಿಸಿದೆ. ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಪಿನ್ ವಿಭಾಗದ ಮತ್ತೆರಡು ಅಸವಾಗಿರಲಿದ್ದಾರೆ. ಟೆಸ್ಟ್ ಸರಣಿಗೆ ಗುರುವಾರ ಚಾಲನೆ ಸಿಗಲಿದೆ.

    ಕಳೆದ 33 ವರ್ಷಗಳಿಂದ ಭಾರತದಲ್ಲಿ ಒಂದೂ ಟೆಸ್ಟ್ ಗೆದ್ದಿರದ ನ್ಯೂಜಿಲೆಂಡ್ ತಂಡವೂ ಸ್ಪಿನ್ ಸವಾಲು ಎದುರಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಿದೆ. ಕಿವೀಸ್ ತಂಡವೂ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸುಳಿವನ್ನು ಕೋಚ್ ಗ್ಯಾರಿ ಸ್ಟೆಡ್ ಬಿಟ್ಟುಕೊಟ್ಟಿದ್ದಾರೆ.

    ನಾಲ್ವರು ವೇಗಿಗಳು ಮತ್ತು ಓರ್ವ ಸ್ಪಿನ್ನರ್ ಜತೆ ಆಡುವ ಸಿದ್ಧಸೂತ್ರ ಭಾರತದಲ್ಲಿ ನಡೆಯದು. ಹೀಗಾಗಿ ಪಿಚ್ ನೋಡಿದ ಬಳಿಕ ಮೂವರು ಸ್ಪಿನ್ನರ್‌ಗಳನ್ನು ಆಡಿಸಬೇಕಾಗಿ ಬಂದರೂ ನಾವು ಅದಕ್ಕೆ ಸಿದ್ಧರಾಗಿದ್ದೇವೆ ಎಂದು ಸ್ಟೆಡ್ ಹೇಳಿದ್ದಾರೆ. ಕಿವೀಸ್ ತಂಡ ಐವರು ಸ್ಪಿನ್ನರ್‌ಗಳನ್ನು ಒಳಗೊಂಡಿದ್ದು, ಈ ಪೈಕಿ ಅಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್ ಮತ್ತು ವಿಲ್ ಸೋಮರ್‌ವಿಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ರಚಿನ್ ರವೀಂದ್ರ ಮತ್ತು ಗ್ಲೆನ್ ಫಿಲಿಪ್ಸ್ ತಂಡದಲ್ಲಿರುವ ಮತ್ತಿಬ್ಬರು ಸ್ಪಿನ್ನರ್‌ಗಳು.

    ಹಲಾಲ್ ವಿವಾದದಲ್ಲಿ ಟೀಮ್ ಇಂಡಿಯಾ; ಬಿಸಿಸಿಐ ವಿರುದ್ಧ ಕ್ರಿಕೆಟ್‌ಪ್ರೇಮಿಗಳ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts