More

    ಪ್ರವಚನ ಕೇಳಿದರೆ ಮನಸ್ಸು ಪ್ರಫುಲ್ಲ: ಡಾ.ಬಸವಜಯಚಂದ್ರ ಸ್ವಾಮೀಜಿ ಅಭಿಪ್ರಾಯ

    ಚನ್ನಗಿರಿ: ಮಠ ಮಂದಿರಗಳಲ್ಲಿ ಶ್ರಾವಣ ಮಾಸದ ಪ್ರವಚನ ಕೇಳಿದರೆ ಮನಸ್ಸು ಪ್ರಫುಲ್ಲಗೊಂಡು ಅಧ್ಯಾತ್ಮದತ್ತ ಹೊರಳಿ ಸತ್ಪ್ರಜೆಯಾಗಲು ಸಹಕಾರಿಯಾಗುತ್ತದೆ ಎಂದು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಡಾ.ಬಸವಜಯಚಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಭಾನುವಾರ ಶ್ರಾವಣ ಮಾಸದ ಶ್ರೀ ಜಗದ್ಗುರು ಜಯದೇವ ಲೀಲೆ ವಚನಾಮೃತ ಬೋಧನೆ ಹಾಗೂ ಶ್ರೀ ಹಾಲಸ್ವಾಮಿ, ಶ್ರೀಕಂಠ ಸ್ವಾಮೀಜಿ, ಜಯದೇವ ಸ್ವಾಮೀಜಿ ಸಂಸ್ಮರಣೋತ್ಸವ ಸಮಾರೋಪದಲ್ಲಿ ಮಾತನಾಡಿದರು.

    ವೃತ್ತಿ ನಿಷ್ಠೆ, ಪ್ರಾಮಾಣಿಕತೆ ತೋರಿದರೆ ಉತ್ತಮ ಹೆಸರು ತಾನಾಗಿಯೇ ಬರುತ್ತದೆ. ಅಂಥವರಿಗೆ ಯಶಸ್ಸು ಲಭಿಸಿ, ಸದಾ ಸ್ಮರಣೆಯಲ್ಲಿ ಇರುತ್ತಾರೆ. ಶ್ರಾವಣ ಮಾಸದಲ್ಲಿ ಕೇಳುವ ವಚನಾಮೃತಗಳು ಶಿವನಿಗೆ ಪ್ರಿಯವಾದವುಗಳು. ಒಂದು ತಿಂಗಳು ಪ್ರವಚನ ಕೇಳಿದ ಭಕ್ತರು ಧನ್ಯರು ಎಂದರು.

    ನಿವೃತ್ತ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಮಾತನಾಡಿ, ರಾಜಕಾರಣಿಗಳು, ಮಠಾಧೀಶರು ಮತ್ತಿತರರು ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಕೆಲಸ ಮಾಡುತ್ತಾರೆ. ಮುಂದೊಂದು ದಿನ ಎಲ್ಲವೂ ನಾಶವಾಗುತ್ತದೆ ಎಂಬ ವಿಷಯವನ್ನು ಅವರೆಲ್ಲರೂ ಅರಿಯಬೇಕು. ಆದರೆ, ಇಂಥವರ ಬಗ್ಗೆ ಜಾಗ್ರತರಾಗಿರಬೇಕು ಎಂದು ಹೇಳಿದರು.

    ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಮಾತನಾಡಿ, ಮಾತಿನಲ್ಲಿ ಒಳ್ಳೆಯತನ ಇರಬೇಕು. ಯಾರ ಮನಸ್ಸು ನೋವಾಗದಂತೆ ಇರಬೇಕು. ರಾಜಕಾರಣ, ಧಾರ್ವಿುಕ ಸೇರಿ ಎಲ್ಲ ಕ್ಷೇತ್ರದಲ್ಲಿ ಆಗುತ್ತಿರುವ ಪರಿಣಾಮಗಳು ಭಯ ಹುಟ್ಟಿಸುತ್ತಿದೆ ಎಂದರು.

    ರಾಜ್ಯದಲ್ಲಿ 33 ಸಾವಿರ ಕೆರೆಗಳಲ್ಲಿ ಕೇವಲ 3 ಸಾವಿರ ಕೆರೆಗಳನ್ನು ನೋಡಬಹುದಾಗಿದೆ. ಅಭಿವೃದ್ದಿ ಹೆಸರಿನಲ್ಲಿ ಎಲ್ಲವೂ ಮಾಯವಾಗಿವೆ. ಶೇ. 33 ರಷ್ಟು ಇದ್ದ ಅರಣ್ಯ ನಾಶವಾಗಿ ಈಗ ಶೇ. 13 ರಷ್ಟು ಉಳಿದಿದೆ. ಭದ್ರಾ ಜಲಾಶಯದ ನೀರನ್ನು ರೈತರು ಬಳಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದರು.

    ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಮಹಾಂತೇಶ ಶಾಸ್ತ್ರಿ, ಡಾ.ಎಸ್.ಡಿ.ಗಂಗಾಧರ್, ವೀರಶೈವ ಸಮುದಾಯದ ಅಧ್ಯಕ್ಷ ರಾಜಶೇಖರಯ್ಯ, ಮಹಾಂತೇಶ್, ಪಿ.ಎ.ಹರ್ಷ, ಡಾ.ಗಂಗಾಧರ್, ಮಂಜುನಾಥ್ ಹೊಸಕೋಟೆ, ಎಲ್.ಎಂ.ಉಮಾಪತಿ, ಪುರಸಭಾ ಸದಸ್ಯ ಹಾಲೇಶ್, ಜವಳಿ ಮಹೇಶ್, ಶಿಕ್ಷಕ ಕರಿಸಿದ್ದಪ್ಪ, ಕವಿತಾ ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts