More

  ಭಯೋತ್ಪಾದನೆ, ಹಿಂಸಾಚಾರದ ವಿರುದ್ಧ ನಿಲುವು ತಳೆದ ಭಾರತ-ವಿಶ್ವಸಂಸ್ಥೆಯಲ್ಲಿ ರಾಯಭಾರಿ ಕಾಂಬೋಜ್ ಹೇಳಿದ್ದೇನು?

  ವಾಷಿಂಗ್ಟನ್: ”ಯಾವುದೇ ರೂಪದ ಭಯೋತ್ಪಾದನೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಹಿಂಸಾಚಾರದ ವಿರುದ್ಧವೂ ನಿಲ್ಲುತ್ತೇವೆ ”ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ರುಸಿರಾ ಕಾಂಬೋಜ್ ಹೇಳಿದರು.

  ಇದನ್ನೂ ಓದಿ: 2024ಕ್ಕೆ ಭಾರತ-ಚೀನಾ ಸಂಘರ್ಷ, ದೊಡ್ಡ ಸುನಾಮಿ, ಭೀಕರ ಬರ ಕಾಡಲಿದೆಯಾ?: ನಾಸ್ಟ್ರಾಡಾಮಸ್ ಹೇಳಿದ್ದೇನು..?
  ಇಸ್ರೇಲ್-ಹಮಾಸ್ ಯುದ್ಧವು ಒಂದು ತಿಂಗಳಿನಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ರಾಯಭಾರಿ ರುಸಿರಾ ಕಾಂಬೋಜ್ ಮಾತನಾಡಿ, ಯುದ್ಧದ ತೀವ್ರತೆಯನ್ನು ಕಡಿಮೆ ಮಾಡಲು ಅಂತರರಾಷ್ಟ್ರೀಯ ಸಂಸ್ಥೆಗಳು ಕೈಗೊಂಡ ಎಲ್ಲಾ ಕ್ರಮಗಳನ್ನು ಭಾರತ ಸ್ವಾಗತಿಸುತ್ತದೆ. ಜೀವನೋಪಾಯದ ಅಗತ್ಯತೆಗಳು ಪ್ಯಾಲೆಸ್ತೀನ್ ಜನರಿಗೆ ಸಿಗಬೇಕು. ಇದು ಭಾರತದ ನಿಲುವು ಎಂದರು.

  ಯಾವುದೇ ರೂಪದ ಭಯೋತ್ಪಾದನೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ನಾವು ಹಿಂಸೆಯ ವಿರುದ್ಧವೂ ನಿಲ್ಲುತ್ತೇವೆ. ಮಾನವೀಯ ಆಧಾರಿತ ತಾತ್ಕಾಲಿಕ ಕದನ ವಿರಾಮ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ಯುದ್ಧಪೀಡಿತ ಪ್ರದೆಶದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಜೀವನೋಪಾಯವನ್ನು ಒದಗಿಸುವುದು ಮತ್ತು ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವುದನ್ನು ಭಾರತ ಎದುರು ನೋಡುತ್ತಿದೆ ಶಾಂತಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

  ದಾಖಲೆ ಬರೆಯುತ್ತಿದೆ ದೇಶೀಯ ವಿಮಾನಯಾನ: ನಿತ್ಯ 1.20 ಕೋಟಿ ಮಂದಿ ಪ್ರಯಾಣ!

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts