More

    ಕೋಲಿ ಸಮಾಜದವರು ಭಾವುಕ ಜೀವಿಗಳು

    ಸೇಡಂ: ಕೋಲಿ ಸಮಾಜದ ಜನರು ನಂಬಿಗಸ್ಥರು. ಯಾವತ್ತೂ ನಂಬಿದವರನ್ನು ಕೈಬಿಡದೆ ಭಾವುಕ ಜೀವಿಗಳಾಗಿ ಬದುಕು ನಡೆಸುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ಹೋರಾಟಗಾರ ವಿಠ್ಠಲ್ ಹೇರೂರ ಅವರ ೧೦ನೇ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದ ಕ್ರೀಡಾಂಗಣದಲ್ಲಿ ಕೋಲಿ ಸಮಾಜ ಭಾನುವಾರ ಆಯೋಜಿಸಿದ್ದ ನುಡಿನಮನ ಮತ್ತು ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೋಲಿ ಸಮಾಜದವರ ಕೊಡುಗೆ ಅಪಾರವಾಗಿದೆ. ಸಮಾಜದ ಬೇಡಿಕೆಗಳನ್ನು ಅಧ್ಯಕ್ಷರು ನನ್ನ ಗಮನಕ್ಕೆ ತಂದಿದ್ದಾರೆ. ನಾಲ್ಕು ಸಲ ಶಾಸಕನಾಗುವಲ್ಲಿ ಸಮಾಜದ ಸಹಕಾರ ದೊಡ್ಡದಿದೆ. ಮುಂಬರುವ ದಿನಗಳಲ್ಲಿ ಅವರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಕ್ರಾಂತಿಕಾರಿ ವಚನಗಳ ಮೂಲಕ ಸಮಾಜವನ್ನು ತಿದ್ದುವಂಥ ಕೆಲಸ ಮಾಡಿರುವ ನಿಜಶರಣ ಅಂಬಿಗರ ಚೌಡಯ್ಯನವರ ಮಾರ್ಗದರ್ಶನದಲ್ಲಿ ನಾವೆಲ್ಲ ಬದುಕಬೇಕಿದೆ. ಮೂಢನಂಬಿಕೆಯ ಮೊರೆ ಹೋಗದೆ ವಾಸ್ತವದ ಬದುಕು ನಡೆಸುವ ನಿಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯವಿದೆ ಎಂದರು.

    ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಹತ್ತಾರು ವರ್ಷಗಳಿಂದ ವಿವಿಧ ಪದಗಳಿಂದ ಕರೆಯುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಹೋರಾಟ ನಡೆದರೂ ಸ್ಪಂದನೆ ಶೂನ್ಯ. ನ್ಯಾಯಕ್ಕಾಗಿ ಜೇನು ಹುಳಗಳಂತೆ ಒಗ್ಗಟ್ಟಾಗಬೇಕು. ಸಮಾಜ ಒಡೆಯುವ ಕೆಲಸ ಯಾರಿಂದಲೂ ಆಗಬಾರದು ಎಂದು ಸಲಹೆ ನೀಡಿದರು.

    ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಈ.ಧನರಾಜ ಮಾತನಾಡಿದರು.

    ಮಹಲ್ ರೋಜಾದ ಶ್ರೀ ಪರಶುರಾಮ ಮುತ್ಯಾ, ಪ್ರಮುಖರಾದ ಭೀಮಣ್ಣ ಸಾಲಿ, ನಾಗಪ್ಪ ಕೊಳ್ಳಿ, ಸಿದ್ದು ಬಾನರ್, ಸೋಮಶೇಖರ ಹೊಸಮನಿ, ಅರವಿಂದ ಚವ್ಹಾಣ್, ಭೀಮರಾವ ಅಳ್ಳೊಳ್ಳಿ, ಭೀಮಾಶಂಕರ ಕೊಳ್ಳಿ, ಭೀಮರಾಯ ಹಣಮನಹಳ್ಳಿ, ಮಲ್ಲಿಕಾರ್ಜುನ ಗುಡ್ಡದ, ಡಾ.ಶ್ರೀನಿವಾಸ ಮೊಕದಂ, ಸುಭಾಷ ಆರಬೋಳ, ಜ್ಯೋತಿ ಮಾರ್ಲಾ, ರವೀಂದ್ರ ನಂದಿಗಾಮ, ಲಕ್ಷö್ಮಣ ಅವಂಟಿ, ರವಿ ಚಿತ್ತಾಪುರ, ಭೀಮು ಚನ್ನಕ್ಕಿ ಇತರರಿದ್ದರು.
    ಅಂಬುಜಾ ಬಜೆಫ್ ಪ್ರಾರ್ಥಿಸಿದರು. ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಾಗೇಂದ್ರಪ್ಪ ಲಿಂಗಂಪಲ್ಲಿ ಪ್ರಾಸ್ತಾವಿಕ ಮಾತನಾಡಿದರು. ಶಿವಶರಣಪ್ಪ ಜಮಾದರ ಸ್ವಾಗತಿಸಿದರು. ಜ್ಯೋತಿ ಲಿಂಗಂಪಲ್ಲಿ ನಿರೂಪಣೆ ಮಾಡಿದರು.

    ನಾನು ವಿಠ್ಠಲ್ ಹೇರೂರ ಅವರನ್ನು ಅತ್ಯಂತ ಸಮೀಪದಿಂದ ಕಂಡಿದ್ದು, ಜೀವನದುದ್ದಕ್ಕೂ ಕೋಲಿ ಸಮಾಜಕ್ಕೆ ನ್ಯಾಯ ಕೊಡಿಸಲು ನಿಸ್ವಾರ್ಥವಾಗಿ ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಅವರು.
    | ಡಾ.ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts