More

    ಎಡಗಾಲಲ್ಲಿ ಯಶಸ್ವಿಯಾಗಿ ಪರೀಕ್ಷೆ ಬರೆದ ಈ ವಿದ್ಯಾರ್ಥಿಗೆ ಶಿಕ್ಷಕನಾಗುವ ಆಸೆ!

    ಛತ್ತೀಸ್​ಗಢ: ಈ 17 ವರ್ಷದ ಅಂಗವಿಕಲ ಹುಡುಗನೋರ್ವ ತನ್ನ 12ನೇ ತರಗತಿಯ (HSC) ಬೋರ್ಡ್ ಪರೀಕ್ಷೆ ಯ ಪೇಪರ್‌ಗಳನ್ನು ಎಡಗಾಲಿನಿಂದ ಬರೆದಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.

    ಈ ಸಾಧಕ ವಿದ್ಯಾರ್ಥಿ ಸುರ್ಗುಜಾ ಜಿಲ್ಲೆಯ ಅಂಬಿಕಾಪುರದ ನಿವಾಸಿ ಮಹೇಶ್ ಸಿಂಗ್, ಬಡ ಕೃಷಿ ಕುಟುಂಬದಿಂದ ಬಂದವರು. ಅವರು ಫೋಕೊಮೆಲಿಯಾ (ಕೈಗಳು ಮತ್ತು ಕಾಲುಗಳ ವಿರೂಪತೆ) ಎಂಬ ಅಪರೂಪದ ವಿರೂಪತೆಯಿಂದ ಬಳಲುತ್ತಿದ್ದಾರೆ. ಆದರೆ ಇದು ಈ ವಿದ್ಯಾರ್ಥಿಗೆ ಶಿಕ್ಷಕನಾಗುವ ಕನಸನ್ನು ಕಾಣುವಂತೆ. ಒಂದನೇ ತರಗತಿಯಿಂದ ಮಹೇಶ ಎಡಗಾಲಿನಿಂದ ಬರೆಯತೊಡಗಿದ.

    ಇದನ್ನೂ ಓದಿ: ಮೋಕ್ಷ ಪ್ರಾಪ್ತಿಗೆ ಸಾಧಕರಾಗಿ

    ನಿಮಗೇನು ಸ್ಫೂರ್ತಿ ಎಂದು ಕೇಳಿದಾಗ, ಅವರು ಹೇಳಿದರು: “ನನಗೆ ಸ್ಫೂರ್ತಿ ನೀಡಿದವರು ಅನೇಕರಿದ್ದಾರೆ. ನನ್ನ ಸೋದರಸಂಬಂಧಿಗಳು ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಅವರನ್ನು ನೋಡುವಾಗ ನಾನು ನನ್ನ ಜೀವನದಲ್ಲಿ ಏನಾದರೂ ಮಾಡಬೇಕು ಎಂದು ನನಗೆ ಅನಿಸುತ್ತದೆ” ಎಂದು ಹೇಳಿದ್ದಾರೆ.

    ಆರ್ಟ್ಸ್ ವಿದ್ಯಾರ್ಥಿಯಾಗಿರುವ ಮಹೇಶ್​ ಸಿಂಗ್, ಪಶ್ನೆ ಪತ್ರಿಕೆಗಳು ಉತ್ತಮವಾಗಿ ಬಂದಿದ್ದು ಅವರು ಸುಮಾರು 70 ಪ್ರತಿಶತ ಅಂಕಗಳನ್ನು ಗಳಿಸುವ ಭರವಸೆ ಹೊಂದಿದ್ದಾರೆ ಎಂದು ಹೇಳಿದರು. ಇದೇ ಸಮಯ ಅವರು, ನಿರಂತರವಾಗಿ ಬರೆದರೆ ಕಾಲು ನೋಯುತ್ತದೆ ಎಂದು ಹೇಳಿಕೊಂಡರು. ಆದರೂ ಅವರು ನಿಗದಿತ ಸಮಯದೊಳಗೆ ಉತ್ತರಗಳನ್ನು ಪೂರ್ಣಗೊಳಿಸುತ್ತಾರೆ.ಅದಷ್ಟೇ ಅಲ್ಲದೇ ಅವರ ಕಾಲ್​ಬರಹ ಸಾಕಷ್ಟು ಸ್ಪಷ್ಟವಾಗಿರುತ್ತದೆ.

    ಮಹೇಶ್​ ಸಿಂಗ್​ರ ಬಾಲ್ಯದಲ್ಲಿಯೇ ತಂದೆ ತೀರಿಕೊಂಡರು. ಅವರು ತನ್ನ ತಾಯಿಯೊಂದಿಗೆ ವಾಸಿಸುತ್ತುದ್ದು ಅವನ ಸಹೋದರಿಯರಿಬ್ಬರೂ ಮದುವೆಯಾಗಿದ್ದಾರೆ. ಈ ಹದಿಹರೆಯದ ಸಾಧಕ, ವಿದ್ಯಾಭ್ಯಾಸದ ಜೊತೆಗೆ ತಾಯಿಗೆ ಕೃಷಿಗೆ ಸಹಾಯ ಮಾಡುತ್ತಾನೆ.

    ಮಹೇಶ್​ ಸಿಂಗ್​ “ನಾನು ಆದಷ್ಟು ಬೇಗ ಹಿಂದಿ ಶಾಲೆಯ ಶಿಕ್ಷಕನಾಗಲು ಬಯಸುತ್ತೇನೆ. ನಾನು ಮುಂದೆ ಅಧ್ಯಯನ ಮಾಡಲು ಬಯಸುತ್ತೇನೆ. ನನ್ನ ತಾಯಿಗೆ 60 ವರ್ಷ ವಯಸ್ಸಾಗಿದೆ. ಹೀಗಾಗಿ ನಾನು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಬಯಸುತ್ತೇನೆ. ನನ್ನ ಕನಸನ್ನು ನನಸಾಗಿಸಲು ಸರ್ಕಾರ ನನಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts