More

    ಆಲದಮರದಮ್ಮ ದೇವಿಗೆ ವಿಶೇಷ ಪೂಜೆ

    ಹಿರೀಸಾವೆ: ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದಲ್ಲಿ ಆಲದ ಮರದಮ್ಮ ದೇವಿಯ ಹಬ್ಬ ಮಂಗಳವಾರ ವೈಭವದಿಂದ ನಡೆಯಿತು.
    ನೂರಾರು ವರ್ಷಗಳ ಹಿಂದೆ ಗ್ರಾಮದ ಸೊಸೆಯೊಬ್ಬಳು, ಊರಿನ ಸೊಸೆಯಂದಿರ ಶ್ರೇಯಸ್ಸಿಗಾಗಿ ತನ್ನನ್ನು ತಾನು ಅಗ್ನಿ ದೇವತೆಗೆ ಅರ್ಪಿಸಿಕೊಂಡಿದ್ದಳು. ಅಂತಹ ಸಹಾನುಭೂತಿ ಹಾಗೂ ಗೌರವ ಸಂಪನ್ನೆಯಾದ ಗ್ರಾಮದ ಸೊಸೆಗೆ ಮಡಿಲು ತುಂಬುವ ಸಾಂಪ್ರದಾಯಿಕ ಹಬ್ಬ ಇದಾಗಿದೆ.

    ಬೆಳಗ್ಗೆ 8 ಗಂಟೆ ಸುಮಾರಿನ ವೇಳೆಗೆ ಎಲ್ಲವನ್ನು ಸಿದ್ಧಗೊಂಡ ಮಹಿಳೆಯರು ಬಿದರಿನ ಕುಕ್ಕೆಯಲ್ಲಿ ಅಡುಗೆ ಹಾಗೂ ಪೂಜಾ ಸಾಮಗ್ರಿಯನ್ನು ಅಣಿಮಾಡಿಕೊಂಡು ಗ್ರಾಮದ ಹೃದಯ ಭಾಗದಲ್ಲಿರುವ ಆಲದಮರ ಇರುವಲ್ಲಿಗೆ ಮಹಿಳೆಯರೆಲ್ಲಾ ಬಂದು ಸೇರಿದರು. ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರು ಮರದ ಬುಡಕ್ಕೆ ತಣ್ಣೀರು ಆಕಿ ತೊಳೆದು, ಹರಿಶಿನ ಕುಂಕುಮವಿಟ್ಟು ಹೊಸಸೀರೆ ಉಡಿಸಿ, ವಿವಿಧ ಪುಷ್ವ ಹಾಗೂ ಒಡವೆಗಳಿಂದ ಸಿಂಗರಿಸಿದರು, ಹಿರಿಯ ತಾಯಂದಿರು ಆಲದಮರದಮ್ಮ ದೇವಿಯ ಮೇಲಿನ ಸೋಬಾನೆ ಪದ ಹಾಡಿದರು. ಬಳಿಕ ಬಾಳೆದೆಲೆಯನ್ನು ಹಾಸಿ ಚಿಗಣಿ, ತಂಬಿಟ್ಟು, ನೈವೇದ್ಯ, ಪ್ರಸಾದ, ಹಣ್ಣು-ಅಂಪಲದ ಯಡೆ ಇಟ್ಟು, ಜತೆಗೆ ಆಕೆ ಸಾಕಿದ್ದ ನಾಯಿಗೂ ಪಕ್ಕದಲ್ಲಿಯೇ ಎಡೆ ಇಡಲಾಯಿತು, ನಂತರ ಗಂಧ ಕರ್ಪೂರ ಬೆಳಗಿಸಿ ಆಲದ ಮರದಮ್ಮದೇವಿಗೆ ಪೂಜೆ ಸಲ್ಲಿಸಿ, ಮೂರು ಸುತ್ತು ಪ್ರದಕ್ಷಣೆ ಸುತ್ತಿದರು.

    ಗ್ರಾಮದಲ್ಲಿ ನಡೆದ ಸತ್ಯ ಘಟನೆಗೆ ಸಾಕ್ಷಿಯಾಗಿ ಪುರಾತನ ಆಲದಮರವಿದ್ದು, ದಿನನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿರುತ್ತವೆ. ಈ ಮರದ ಒಂದು ಏಲೆಯನ್ನೂ ಸಹ ಕೀಳುವಂತಿಲ್ಲ, ಇಲ್ಲಿ ಯಾವುದೇ ಮಾಂಸಹಾರ ಮಾಡುವಂತಿಲ್ಲ. ಈಗಲೂ ಸಹ ಮುಕ್ತಿದಾಯಿಕೆ ಆಲದಮರದಮ್ಮ ಗ್ರಾಮದ ಸೊಸೆಯರಿಗೆ ಯಾವುದೇ ಕೆಡುಕು ಹಾಗೂ ಕಂಟಕ ಬಾರದಂತೆ ಕಾಯುತ್ತಿದ್ದಾಳೆ ಎಂಬುದು ಗ್ರಾಮಸ್ಥರ ನಂಬಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts