More

    ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ವಿಶೇಷಚೇತನರಿಗೆ ಸೌಲಭ್ಯ; ನಿಲ್ದಾಣದಲ್ಲಿ ಇರೋ ತನಕ ಸಹಾಯಕ್ಕೆ ಇರ್ತಾರೆ ಸಿಬ್ಬಂದಿ..!

    ದೇವನಹಳ್ಳಿ: ಇದೀಗ ದೇಶದಲ್ಲೇ ಮೊದಲ ಬಾರಿಗೆ ಕೆಂಪೇಗೌಡ ಏರ್ಪೋಟ್ ನಲ್ಲಿ ವಿಶೇಷ ಚೇತನರಿಗಾಗಿ ಹೊಸ‌ ಸೌಲಭ್ಯ ಆರಂಭಿಸಲಾಗಿದೆ. ಇನ್ನು ಮುಂದೆ ವಿಶೇಷಚೇತನರು ಸಾಮಾನ್ಯರ ನಡುವೆ ಕಷ್ಟಪಟ್ಟು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.

    ವಿಮಾನದಲ್ಲಿ ಪ್ರಯಾಣಿಸುವ ವಿಶೇಷಚೇತನ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಈ ಹೊಸ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಏರ್ಪೋಟ್​ಗೆ ಬರುವ ಪ್ರತಿಯೊಬ್ಬ ವಿಶೇಷಚೇತನರಿಗೆ ಪ್ರತ್ಯೇಕ ಸಿಬ್ಬಂದಿ ಮತ್ತು ಸಾಲಿನ ವ್ಯವಸ್ಥೆ ಇರಲಿದೆ. ಇನ್ನು ಟ್ಯಾಗ್ ಮೂಲಕ ವಿಶೇಷ ಚೇತನರು ನೇರವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ.

    ನಿಲ್ದಾಣದಲ್ಲಿರುವ ಟರ್ಮಿನಲ್​ನಿಂದ ವಿಮಾನ ಹತ್ತುವ ತನಕ ಬೇಕಾದ ಸಹಾಯವನ್ನು ವಿಶೇಷವಾಗಿ ನಿಯೋಜಿಸಿರುವ ಸಿಬ್ಬಂದಿ ಮಾಡಲಿದ್ದಾರೆ. ಈ ಸಿಬ್ಬಂದಿ ವಿಶೇಷಚೇತನರಿಗೆ ಯಾವುದೇ ರೀತಿ ಚಾರ್ಜ್​ ಮಾಡದೇ ಉಚಿತವಾಗಿ ವೀಲ್​ಚೇರ್ ಮೂಲಕ ಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಲಿದ್ದಾರೆ. ಇದರ ಜೊತೆಗೆ ಬೋರ್ಡಿಂಗ್ ಪಾಸ್ ತೆಗೆದು ಕೊಡಲು ಮತ್ತು ಬೇಕಾದಲ್ಲಿಗೆ ಕರೆದುಕೊಂಡು ಹೋಗಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಅದಲ್ಲದೇ ಈ ಸಿಬ್ಬಂದಿ ಕಿವುಡರಿಗೆ ಕೈಸನ್ನೆ ಭಾಷೆಯಲ್ಲೆ ಸಹಾಯ ಮಾಡಲೂ ತರಬೇತಿ ಪಡೆದಿದ್ದಾರೆ.

    ಈ ವಿಶೇಷ ಸೌಲಭ್ಯವನ್ನು ಸನ್​ ಫ್ಲವರ್ ಲ್ಯಾನಿಯಾರ್ಡ್ ಸಂಸ್ಥೆ ಮೂಲಕ ಜಾರಿಗೆ ತರಲಾಗಿದೆ. ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವಿಶಿಷ್ಟ ಮಾದರಿ ಯೋಜನೆಗೆ ಚಾಲನೆ ಸಿಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts