More

    ಸಣ್ಣ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್ ನೀಡಿಕೆ ಅತ್ಯಗತ್ಯ

    ಬೆಂಗಳೂರು: ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಮತ್ತು ಎಂಎಸ್​ಎಂಇ ಸಚಿವಾಲಯ ವಿಶೇಷ ಪ್ಯಾಕೇಜ್ ಘೊಷಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷ ಆರ್.ರಾಜು ಒತ್ತಾಯಿಸಿದ್ದಾರೆ.

    ಕರೊನಾ ಬಿಕ್ಕಟ್ಟಿನ ಪರಿಣಾಮದಿಂದಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಸ್​ಎಂಇ) ತಮ್ಮ ಸಾಮರ್ಥ್ಯದ ಶೇ.50 ಉತ್ಪಾದನೆ ಪುನರಾರಂಭಿಸಲಿಕ್ಕೂ ಅಸಮರ್ಥವಾಗಿವೆ. ಕಾರ್ವಿುಕರ ಅನುಪಸ್ಥಿತಿಯಿಂದಾಗಿ ಕೇವಲ ಶೇ.25- 30 ಕೈಗಾರಿಕೆಗಳು ಮಾತ್ರ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ. ಶೇ.30-35 ಕೈಗಾರಿಕೆಗಳು ಹಣಕಾಸಿನ ಲಭ್ಯತೆಯ ಕೊರತೆಅನುಭವಿಸುತ್ತಿವೆ ಎಂದು ರಾಜು ಸುದ್ದಿಗಾರರೊಂದಿಗೆ ವಿವರಿಸಿದ್ದಾರೆ.

    ಇದನ್ನೂ ಓದಿ ‘ಎಣ್ಣೆ’ ಮಾರುತ್ತಿದ್ದ ದಂಪತಿಗೆ ಗ್ರಾಮಸ್ಥರಿಂದಲೇ ಗೃಹಬಂಧನ!

    ರಾಜ್ಯದಲ್ಲಿರುವ ಅಂದಾಜು 6.5 ಲಕ್ಷ ಎಸ್​ಎಂಇಗಳಲ್ಲಿ 70ಲಕ್ಷ ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಅವುಗಳು ಸಹಜ ಸ್ಥಿತಿಯತ್ತ ಮರಳದಿದ್ದರೆ ಕಾರ್ವಿುಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಸರ್ಕಾರವು ಮಾಸಿಕ ನಿಗದಿತ ವಿದ್ಯುತ್ ಶುಲ್ಕ ಮತ್ತು ದಂಡವನ್ನು ಮನ್ನಾ ಮಾಡುವ ಮೂಲಕ ಬೆಂಬಲ ನೀಡಿದ್ದರೂ, ಅದು ಸದ್ಯದ ಬಿಕ್ಕಟ್ಟಿಗೆ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ಇಲ್ಲಿಯವರೆಗೆ ನೀಡಿರುವ ಪರಿಹಾರದಿಂದ ಸಮಸ್ಯೆ ಬಗೆಹರಿಯದು ಎಂದರು.

    ಹಣಕಾಸು ಬೆಂಬಲಕ್ಕೆ ಒತ್ತಾಯ: ಇಎಸ್​ಐನಲ್ಲಿ ರೂ. 85 ಸಾವಿರ ಕೋಟಿ ರೂ. ಮತ್ತು ಪಿಎಫ್​ನಲ್ಲಿ ರೂ.45 ಸಾವಿರ ಕೋಟಿ ರೂ. ಬೃಹತ್ ಕಾರ್ಪಸ್ ನಿಧಿ ಲಭ್ಯವಿದ್ದು, ಈ ನಿರ್ಣಾಯಕ ಹಂತದಲ್ಲಿ ಆ ಮೊತ್ತವನ್ನು ಬಳಸಿಕೊಂಡು ಎಸ್​ಎಂಇಗಳಿಗೆ ನೆರವಾಗಲು ಕೋರಿದ್ದಾರೆ.

    ಇದನ್ನೂ ಓದಿ 15ರೊಳಗೆ ದೇಶೀಯ ವಿಮಾನ ಸಂಚಾರ ಸಾಧ್ಯತೆ

    ಸರ್ಕಾರವು ಜಿಎಸ್​ಟಿ ಮತ್ತು ನೇರ ತೆರಿಗೆ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ಎಸ್​ಎಂಇ ವಲಯದ ಮೇಲಿನ ಹೊರೆಗಳನ್ನು ಕಡಿಮೆ ಮಾಡುವ ಮತ್ತು ಬಾಕಿ ಇರುವ ಪರಿಹಾರಗಳನ್ನು ಪರಿಹರಿಸಬೇಕು. ಶೇ.25- 30 ಕೈಗಾರಿಕೆಗಳು ಮುಚ್ಚಿದಲ್ಲಿ ರಾಜ್ಯ ಮತ್ತು ರಾಷ್ಟ್ರದ ಆರ್ಥಿಕತೆಗೆ ಭಾರಿ ಹೊಡೆತವಾಗಬಹುದು. ಎಸ್​ಎಂಇಗಳಿಗೆ ನೀಡುವ ಪ್ಯಾಕೇಜ್, ಕೃಷಿ ವಲಯಕ್ಕೆ ನೀಡುವ ಪ್ಯಾಕೇಜ್​ಗೆ ಅನುಗುಣವಾಗಿರಬೇಕು ಎಂದು ಹೇಳಿದರು.

    ನೋಟಿಸ್ ಜಾರಿಗೊಳಿಸದಿರಲು ನಿರ್ದೇಶನ

    ಲಾಕ್​ಡೌನ್ ಸಮಯದ ವೇತನ ಪಾವತಿಸದಿರು ವುದು ಮತ್ತು ಪಾವತಿಗಳಲ್ಲಿನ ವ್ಯತ್ಯಾಸಕ್ಕಾಗಿ ಕಾರ್ವಿುಕ ಇಲಾಖೆಯು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ನೋಟಿಸ್ ನೀಡುತ್ತಿದ್ದು, ಇದು ಉದ್ದಿಮೆದಾರರನ್ನು ತೊಂದರೆಗೀಡುಮಾಡಿದೆ. ಮುಖ್ಯಮಂತ್ರಿಗಳು, ಕೈಗಾರಿಕಾ ಮತ್ತು ಕಾರ್ವಿುಕ ಸಚಿವರೊಂದಿಗೆ ಈ ಸಮಸ್ಯೆ ಬಗ್ಗೆ ರ್ಚಚಿಸಿದ್ದು, ಸಚಿವರು ನೋಟಿಸ್​ಗಳನ್ನು ಜಾರಿಗೊಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಲು ಕ್ರಮ ಕೈಗೊಂಡಿರುವುದು ಎಸ್​ಎಂಇಗೆ ಸಹಕಾರಿಯಾಗಿದೆ.

    ಕಾಸಿಯಾ ಒತ್ತಾಯಗಳೇನು?

    ಎಸ್​ಎಂಇ ವಲಯಕ್ಕೆ ಒಡಿ ಖಾತೆಗಳ ಮೇಲಿನ ಬಡ್ಡಿ ಯನ್ನು 3 ತಿಂಗಳ ಅವಧಿಗೆ ಮನ್ನಾ ಮಾಡುವುದು. ಕಾರ್ವಿುಕರಿಗೆ 3 ತಿಂಗಳ ವೇತನ ಪಾವತಿಸಲು ಸಹಾಯ ಧನ ನೀಡುವುದು. ್ಝ ಎಸ್​ಎಂಇ ವಲಯಕ್ಕೆ ಪ್ರಸ್ತುತ ಇರುವ ಒಡಿ ಮೇಲೆ ತಾತ್ಕಾಲಿಕವಾಗಿ ಶೇ.40 ರಿಯಾಯಿತಿ ಬಡ್ಡಿದರದಲ್ಲಿ ನೀಡುವುದು. ್ಝ ಎಲ್ಲ ಒಡಿ ಅಥವಾ ಸಿಸಿ ಖಾತೆಗಳಿಗೆ ರಿಯಾಯಿತಿ ದರದಲ್ಲಿ ಬಡ್ಡಿ ವಿಧಿಸುವಿಕೆ.

    61,000 ಸೋಂಕು 2,000 ಸಾವು! ದೇಶದಲ್ಲಿ 40 ಸಾವಿರ ಸಕ್ರಿಯ ಪ್ರಕರಣ; ಮಹಾರಾಷ್ಟ್ರ, ಗುಜರಾತ್, ದೆಹಲಿ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts