More

    ಶಾರುಖ್​ ಪುತ್ರನ​ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

    ಮುಂಬೈ: ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​ಗೆ ಇಂದೂ ಜಾಮೀನು ಸಿಗಲಿಲ್ಲ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ)ಗೆ ಹೇಳಿಕೆ ಸಲ್ಲಿಸಲು ಅವಕಾಶ ನೀಡಿದ ಮುಂಬೈನ ವಿಶೇಷ ಎನ್​ಡಿಪಿಎಸ್​ ಕೋರ್ಟ್​, ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

    ಹತ್ತು ಇತರ ಆರೋಪಿಗಳೊಂದಿಗೆ ಎನ್​ಸಿಬಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟ 23 ವರ್ಷ ವಯಸ್ಸಿನ ಆರ್ಯನ್​ ಖಾನ್​, ಕಳೆದ ಶುಕ್ರವಾರದಿಂದ ಜೈಲಿನಲ್ಲಿದ್ದಾನೆ. ಅವನ ಜಾಮೀನು ಅರ್ಜಿಗೆ ಹೇಳಿಕೆ ಸಲ್ಲಿಸಲು ಇಂದು ಎನ್​ಸಿಬಿ ವಕೀಲರು ಶುಕ್ರವಾರದವರೆಗೆ ಕಾಲಾವಕಾಶ ಕೋರಿದರು. ಆದರೆ ನ್ಯಾಯಾಲಯ ಬುಧವಾರದೊಳಗೆ ಹೇಳಿಕೆ ಸಲ್ಲಿಸಬೇಕೆಂದು ಸೂಚಿಸಿ, ವಿಚಾರಣೆ ಮುಂದೂಡಿತು. (ಏಜೆನ್ಸೀಸ್)

    ಇಬ್ಬರು ಉಗ್ರವಾದಿಗಳನ್ನು ಸದೆಬಡಿದ ಜಮ್ಮು ಕಾಶ್ಮೀರ ಪೊಲೀಸರು

    ಟಾಟಾ ಕಂಪೆನಿ ತೆಕ್ಕೆಗೆ ಏರ್​ ಇಂಡಿಯಾ; ಖರೀದಿ ಬೆಲೆ ಎಷ್ಟು ಗೊತ್ತಾ?

    VIDEO| ವರುಣನ ವರಸೆಗೆ ನಲುಗಿದ ನಗರ: ರೆಸ್ಟೊರೆಂಟಿಗೆ ನುಗ್ಗಿದ ನೀರು; ಕೊಚ್ಚಿಹೋದ ಮಿನಿಟ್ರಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts