More

    VIDEO| ವರುಣನ ವರಸೆಗೆ ನಲುಗಿದ ನಗರ: ರೆಸ್ಟೊರೆಂಟಿಗೆ ನುಗ್ಗಿದ ನೀರು; ಕೊಚ್ಚಿಹೋದ ಮಿನಿಟ್ರಕ್!

    ಹೈದರಾಬಾದ್: ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಕೆಳ ಮಟ್ಟದ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಮಂಡಿಗಾಲಿನ ಎತ್ತರದವರೆಗೆ ಜಲಾವೃತಗೊಂಡಿದ್ದವು.

    ನಗರದಲ್ಲಿ ನಿನ್ನೆ ಸಂಜೆ 8.30 ರಿಂದ 11 ಗಂಟೆವರೆಗೆ 10 ರಿಂದ 12 ಸೆಂಟಿಮೀಟರ್​ನಷ್ಟು ಧಾರಾಕಾರ ಮಳೆಯಾಗಿದೆ. ಓಲ್ಡ್​ ಸಿಟಿಯ ಒಂದು ರೆಸ್ಟೊರೆಂಟಿನಲ್ಲಿ ಆಹಾರ ಸೇವಿಸುತ್ತಿದ್ದ ಗ್ರಾಹಕರ ಕಾಲಿನ ಮಟ್ಟಕ್ಕೆ ಮಳೆನೀರು ತುಂಬಿರುವ ಚಿತ್ರಣ ಹೊರಬಿದ್ದಿದೆ.

    ಈ ನಡುವೆ, ವನಸ್ಥಲೀಪುರಂನಿಂದ ಇಬ್ಬರು ವ್ಯಕ್ತಿಗಳು ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಈವರೆಗೆ ಪತ್ತೆಯಾಗಿಲ್ಲ. ಅವರ ಹುಡುಕಾಟ ಕಾರ್ಯ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈದರಾಬಾದಿನ ಓಲ್ಡ್​ ಸಿಟಿ ಪ್ರದೇಶದಲ್ಲಿ ಮಳೆಯ ಆರ್ಭಟದಿಂದ ಜಲಪ್ರವಾಹ ಉಂಟಾಗಿರುವ ರಸ್ತೆಯಲ್ಲಿ, ನಿಲ್ಲಿಸಿದ್ದ ಮಿನಿ ಟ್ರಕ್​ ಒಂದು ಕೊಚ್ಚಿಹೋಗುತ್ತಿರುವ ದೃಶ್ಯವನ್ನು ಎಎನ್​ಐ ಸುದ್ದಿ ಸಂಸ್ಥೆ ಟ್ವಿಟರ್​ನಲ್ಲಿ ಶೇರ್ ಮಾಡಿದೆ. (ಏಜೆನ್ಸೀಸ್)

    ರಾಜ್ಯದಲ್ಲಿ ಮತ್ತೊಂದು ಗ್ಯಾಂಗ್​ರೇಪ್​: ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ

    ಕರೊನಾ: 7 ತಿಂಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣಗಳು

    ರಸ್ತೆಯಿಂದ ಇಳಿದು ಗದ್ದೆಗೆ ನುಗ್ಗಿದ ಸರ್ಕಾರಿ ಬಸ್; ವಿದ್ಯಾರ್ಥಿಗಳೇ ತುಂಬಿದ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts