More

    ಕರೊನಾ: 7 ತಿಂಗಳಲ್ಲೇ ಅತಿ ಕಡಿಮೆ ಸಕ್ರಿಯ ಪ್ರಕರಣಗಳು

    ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 19,740 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ಆದರೆ, ದೇಶದ ಸಕ್ರಿಯ ಪ್ರಕರಣಗಳಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಹಾಲಿ 2,36,643 ಸಕ್ರಿಯ ಪ್ರಕರಣಗಳಿವೆ. ಇದು ಕಳೆದ 206 ದಿನಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಮಟ್ಟವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

    ಭಾರತದಲ್ಲಿ ಈವರೆಗೆ ಒಟ್ಟು 3,39,35,309 ಕರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಕರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 4,50,375 ಆಗಿದೆ. ಕಳೆದ 24 ಗಂಟೆಗಳಲ್ಲಿ 248 ಕರೊನಾ ಸಂಬಂಧಿತ ಸಾವು ಸಂಭವಿಸಿದೆ. ರಾಷ್ಟ್ರೀಯ ಸರಾಸರಿ ಕೋವಿಡ್​ 19 ಚೇತರಿಕೆ ದರವು ಶೇಕಡ 97.98 ರಷ್ಟಿದ್ದು, ಇದು 2020ರ ಮಾರ್ಚ್​ನಿಂದ ಈವರೆಗಿನ ಅತಿ ಹೆಚ್ಚಿನ ಮಟ್ಟದಲ್ಲಿದೆ ಎನ್ನಲಾಗಿದೆ.

    ಈವರೆಗೆ ಭಾರತದಲ್ಲಿ ಸುಮಾರು 94 ಕೋಟಿ ಡೋಸ್​ ಕರೊನಾ ಲಸಿಕೆ ನೀಡಲಾಗಿದೆ. ಕೋವಿನ್​ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 79.12 ಲಕ್ಷ (79,12,202) ಡೋಸ್​ಗಳನ್ನು ನೀಡಲಾಗಿದೆ. (ಏಜೆನ್ಸೀಸ್)

    ರಸ್ತೆಯಿಂದ ಇಳಿದು ಗದ್ದೆಗೆ ನುಗ್ಗಿದ ಸರ್ಕಾರಿ ಬಸ್; ವಿದ್ಯಾರ್ಥಿಗಳೇ ತುಂಬಿದ್ದರು!

    ಶಾರುಖ್ ಪುತ್ರನ ಜಾಮೀನು ಅರ್ಜಿ ವಜಾ; ನ್ಯಾಯಾಲಯದಲ್ಲಿ ನಡೆದದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts