More

    ಸಾಂಪ್ರದಾಯಿಕವಾಗಿ ನೀರು ಇಂಗಿಸಿ ; ವಿಚಾರ ಸಂಕಿರಣದಲ್ಲಿ ಜಲ ಚಿಂತಕ ವಿ.ರಾಮಪ್ರಸಾದ್ ಸಲಹೆ

    ತುಮಕೂರು: ನೀರು ಇಂಗಿಸುವ ಸಾಂಪ್ರದಾಯಿಕ ಕ್ರಮಗಳು ಪರಿಣಾಮಕಾರಿಯಾಗಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಲ ಚಿಂತಕ ವಿ.ರಾಮಪ್ರಸಾದ್ ಅಭಿಪ್ರಾಯಪಟ್ಟರು.

    ತುಮಕೂರು ವಿವಿ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಗುರುವಾರ ಆಯೋಜಿಸಿದ್ದ ‘ಜಲ ಸುಸ್ಥಿರತೆ ಮತ್ತು ಭದ್ರತೆ: ಶ್ರೇಷ್ಠ ವಾದರಿಗಳು’ ವಿಷಯ ಕುರಿತುವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಅವರು, ನಮ್ಮಲ್ಲಿರುವ ನೀರನ್ನು ಸದುಪಯೋಗಪಡಿಸಿಕೊಳ್ಳದೆ ಬೇರೆಯವರ ಬಳಿ ನೀರು ಕೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಇಸ್ರೇಲ್, ರಾಜಸ್ತಾನಗಳಲ್ಲಿ ಕೇವಲ 300ರಿಂದ 400 ಮಿಮೀ ಮಳೆಯಾಗುತ್ತದೆ. ಅವರು ನೀರನ್ನು ಯೋಗ್ಯವಾದ ರೀತಿಯಲ್ಲಿ ಬಳಕೆ ವಾಡಿಕೊಳ್ಳುತ್ತಾರೆ. ನಮ್ಮಲ್ಲಿ ಶೇ.800 ಮಿಮೀ ಮಳೆಯಾದರೂ ಕಡಿಮೆ ಮಳೆ ಬೀಳುತ್ತಿದೆ ಎಂದು ನೆಪ ಹೇಳುತ್ತೇವೆಯೇ ಹೊರತು ಸುರಿದ ಮಳೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದರು.

    ಅಂತರ್ಜಲ ಹೆಚ್ಚಾಗಲು ನಾವು ತೋಡುತ್ತಿರುವ ಇಂಗುಗುಂಡಿಗಳು ಸರಿಯಾಗಿ ಕೆಲಸ ವಾಡುತ್ತಿಲ್ಲ ಎಂದು ಸಂಶೋಧನೆ ತಿಳಿಸಿದೆ. ಇಂಗುಬಾವಿಗಳನ್ನು ನಿರ್ಮಿಸುವುದು ಇದಕ್ಕೆ ಸೂಕ್ತ ಪರಿಹಾರ. ಈ ಪ್ರದೇಶದ ಬೋವಿ ಜನಾಂಗದವರಿಗೆ ನೀರಿನ ಇಂಗಿಸುವಿಕೆ ಕುರಿತು ಅಮೂಲ್ಯ ಜ್ಞಾನವಿದೆ ಅವರ ಸಾಂಪ್ರದಾಯಿಕ ಕ್ರಮಗಳನ್ನು ಅರ್ಥ ವಾಡಿಕೊಂಡು ಬಳಕೆಗೆ ತರಬೇಕು ಎಂದರು.

    ಯಾವುದೇ ಯೋಜನೆ ಅನುಷ್ಠಾನಗೊಳ್ಳಲು ಜನರ ಸಹಭಾಗಿತ್ವ ಅಗತ್ಯ, ಎಲ್ಲರನ್ನೂ ಒಂದು ಗೂಡಿಸುವ ಕೆಲಸವನ್ನು ವಿವಿ ವಾಡಬಹುದು, ವಿವಿ ಸವಾಜಕ್ಕೆ ಅನುಕೂಲವಾಗುವ ಸಂಶೋಧನೆಗಳು ನಡೆಯಬೇಕು, ವಿದ್ಯಾರ್ಥಿಗಳು ಪದವಿಯ ಸಂಶೋಧನ ಯೋಜನೆಗಳಿಗೆ ಜಲಸಂರಕ್ಷಣೆಗೆ ಪೂರಕ ವಿಷಯ ಆರಿಸಿಕೊಳ್ಳಬೇಕು ಎಂದರು.

    ವಿವಿಯ ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನೀಲ್‌ಪ್ರಸಾದ್ ವಾತನಾಡಿ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಉತ್ತಮ ಪ್ರಾಜೆಕ್ಟ್ ಕೈಗೊಳ್ಳುವುದಕ್ಕೆ ಪರಮಶಿವಯ್ಯ ಅಧ್ಯಯನ ಪೀಠದ ಮೂಲಕ ಆರ್ಥಿಕ ಸಹಕಾರ ನೀಡುವ ಉದ್ದೇಶವಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ ಮಾತನಾಡಿ, ಭಾರತದಲ್ಲಿ ನೀರು, ರಾಜಕೀಯ ವಿಷಯವಾಗಿದೆ, ಇದನ್ನು ಸಾವಾಜಿಕ ದೃಷ್ಟಿಕೋನದಿಂದ ಕಂಡು ಪ್ರಾದೇಶಿಕ ಹಂತದಲ್ಲಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ ಎಂದರು. ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಬಿ.ರವೀಂದ್ರಕುವಾರ್, ಪ್ರಾಧ್ಯಾಪಕ ಡಾ.ಎಂ.ಮುನಿರಾಜು, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಸಿಬಂತಿ ಪದ್ಮನಾಭ ಇದ್ದರು.

    ಇಂಟರ್ನ್‌ಶಿಪ್ ಪರಿಕಲ್ಪನೆ ಕಡ್ಡಾಯ: ಉನ್ನತ ಶಿಕ್ಷಣ ಸಂಸ್ಥೆಗಳು ಸವಾಜದೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಜನಸಾವಾನ್ಯರನ್ನು ಸೇರಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು. ಹೊಸದಾಗಿ ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಪರಿಕಲ್ಪನೆ ಕಡ್ಡಾಯ ವಾಡಿದೆ. ಇದರಿಂದ ವಿದ್ಯಾರ್ಥಿ ಜೀವನದಲ್ಲೇ ಪ್ರಾಯೋಗಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶ ದೊರೆತಂತಾಗಿದೆ. ಸವಾಜದ ಒಳಿತಿಗೆ ಈ ಅವಕಾಶ ಬಳಸಿಕೊಳ್ಳಬೇಕು ಎಂದರು.

     
    ತುಮಕೂರು ಜಿಲ್ಲೆಯಲ್ಲಿರುವ ಜಯಮಂಗಲಿ ನದಿಯ ಪುನಶ್ಚೇನತಕ್ಕೆ ನಮ್ಮ ಅಧ್ಯಯನ ಪೀಠ ವಿಶೇಷ ಅಧ್ಯಯನ ನಡೆಸುವ ಬಗ್ಗೆ ಚಿಂತನೆ ನಡೆಸಿದೆ. ಜಿಲ್ಲೆಯಲ್ಲಿದ್ದ ಎಲ್ಲ ನದಿಗಳ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಅವುಗಳ ಉಳಿವಿನ ಬಗ್ಗೆ ವಿಶೇಷ ಅಧ್ಯಯನ ಹಾಗೂ ಪರಿಹಾರೋಪಾಯ ಕಂಡುಕೊಳ್ಳಲು ಪೀಠ ಕಾರ್ಯೋನ್ಮುಖವಾಗಲಿದೆ.
    ಟಿ.ಎಸ್.ಸುನೀಲ್‌ಪ್ರಸಾದ್
    ಸಿಂಡಿಕೇಟ್ ಸದಸ್ಯ, ತುಮಕೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts