More

    ಗಡಿ ಶಾಲೆಯಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸಿ

    ಗೋಗಿ: ನಮ್ಮ ಗಡಿ ಶಾಲೆಗಳಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಉಪನ್ಯಾಸಕ ಹಾಗೂ ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.

    ಶಹಾಪುರ ತಾಲೂಕಿನ ಗೋಗಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ಹಮ್ಮಿಕೊಂಡ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸರ್ಕಾರಿ ಹುದ್ದೆ ನೇಮಕಾತಿ ಮಾಡುವಾಗ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ವ್ಯವಹಾರಿಕವಾಗಿ ಬೇರೆ ಭಾಷೆ ಮಾತನಾಡಿದರೆ, ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡುವಂತಾಗಬೇಕು ಎಂದು ಹೇಳಿದರು.

    ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು. ಅವರ ವ್ಯಕ್ತಿತ್ವದ ವಿಕಸನದ ಜತೆಗೆ ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಜಾನಪದ ಸಾಹಿತ್ಯದ ಜ್ಞಾನ ಕೂಡ ಅವಶ್ಯಕತೆ ಇದೆ ಎಂದರು. ರೈತ ಸಂಘದ ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗರತ್ನ ಪಾಟೀಲ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಕಾರ್ಯಕ್ರಮ ಉದ್ಘಾಟಿದರು. ವಲಯ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್ ಅಧ್ಯಕತೆ ವಹಿಸಿದ್ದರು.

    ಗ್ರಾಪಂ ಅಧ್ಯಕ್ಷೆ ಸಾಬಮ್ಮ ಹೊಸಮನಿ. ಪ್ರಾಚಾರ್ಯನ ಗುರುಲಿಂಗಪ್ಪ ಸಾಗರ, ಮುಖ್ಯಗುರು ಸಂಗಮೇಶ ದೇಸಾಯಿ, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಾಣಿಕರೆಡ್ಡಿ ಶಿರಡ್ಡಿ, ಪ್ರಮುಖರಾದ ಚಂದ್ರಶೇಖರ ಧೋತ್ರೆ, ಚಂದಪ್ಪ ತಾಯಮಗೋಳ, ಬಸವರಾಜಪ್ಪಗೌಡ ತಂಗಡಗಿ, ಬಸವರಾಜ ಸಗರ ಇದ್ದರು.

    ಗೌಡಪ್ಪಗೌಡ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಮಹಾವೀರ ಸ್ವಾಗತಿಸಿದರು. ಈರಣ್ಣ ಗಡ್ಡೇಗಾರ ವಂದಿಸಿದರು. ಮಧುಕರ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts