More

    ವಚನ ಸಾಹಿತ್ಯ ಸಂರಕ್ಷಕ ಕಿನ್ನರಿ ಬೊಮ್ಮಯ್ಯ

    ಚಿಂಚೋಳಿ: ವಿಶ್ವಗುರು ಬಸವಣ್ಣನವರ ಕೀರ್ತಿಯನ್ನು ಲೋಕ ಸಂಚಾರದ ಮೂಲಕ ಕಿನ್ನರಿ ವಾದ್ಯದ ಮೂಲಕ ಸಾರಿದ, ಅನಿಷ್ಟ ಪದ್ಧತಿಯ ವಿರುದ್ಧ ಹೋರಾಟ ಮಾಡಿದ ಶರಣರಲ್ಲಿ ಕಿನ್ನರಿ ಬೊಮ್ಮಯ್ಯ ಒಬ್ಬರು ಎಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ ಹೇಳಿದರು.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಶರಣರ ವಚನ ಸಾಹಿತ್ಯ ಸಂರಕ್ಷಕರಾಗಿ ಶ್ರಮಿಸಿದ ಕೀರ್ತಿ ಕಿನ್ನರಿ ಬೊಮ್ಮಯ್ಯನವರಿಗೆ ಸಲ್ಲುತ್ತದೆ ಎಂದರು.

    ಕಿನ್ನರಿ ವಾದ್ಯಗಳ ಮೂಲಕ ಜನರಲ್ಲಿ ಮೂಡನಂಬಿಕೆ, ಅಜ್ಞಾನವನ್ನು ಅಳಿಸಿ ಕಲ್ಯಾಣ ಕ್ರಾಂತಿಯಲ್ಲಿ ಸುಜ್ಞಾನದ ಮಾರ್ಗ ತೋರಿದ್ದರು. ವಚನ ಸಾಹಿತ್ಯವನ್ನು ಕಲ್ಯಾಣದಿಂದ ಕಾರವಾರ ಜಿಲ್ಲೆಯ ಉಳವಿಯಲ್ಲಿ ಸಂರಕ್ಷಿಸಿದ ಮಹಾಪುರುಷ ಬೊಮ್ಮಯ್ಯ ನಮ್ಮ ಭಾಗದವರು ಎಂಬುದು ಹೆಮ್ಮೆ ಎಂದರು.

    ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಚಂದ್ರಶೆಟ್ಟಿ ಲಕ್ಕಶೆಟ್ಟಿ, ಡಾ.ಜ್ಯೋತಿರ್ಲಿಂಗ ಸುಗೂರ ಹಾಗೂ ಉತ್ತಮ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ವಿಜಯಕುಮಾರ ಪರುತೆ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ರೇವಣಸಿದ್ದಪ್ಪ ದುಕಾನ್, ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ ಐನೋಳ್ಳಿ, ಮಲ್ಲಿಕಾರ್ಜುನ ಪಾಲಾಮೂರ, ಗಣಪತ ದೇವಕತೆ, ಶ್ರೀಶೈಲ ನಾಗಾವಿ, ಶರಣಯ್ಯ ಸ್ವಾಮಿ, ಗುರುರಾಜ ಜೋಶಿ, ಜ್ಯೋತಿ ಬೊಮ್ಮಾ, ಸುನೀತಾ ಪಾಲಾಮೂರ, ಗೀತಾರಾಣಿ ಐನೋಳ್ಳಿ, ಸುಮಂಗಲಾ ಹುಣಜೆ, ಚಂದ್ರಕಾಂತ ಕೆರಳ್ಳಿ, ಆನಂದ ಹಿತ್ತಲ್, ರಮೇಶ ಭೂತಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts