More

    ರೈತ ಇಂದಿನಿಂದ ಸ್ವಾಭಿಮಾನಿ ಅನ್ನದಾತ: ಕೈಸೇರಲಿದೆ ವಿಶಿಷ್ಟ ಗುರುತಿನ ಚೀಟಿ, ಇಂದು ಕೊಪ್ಪಳದಲ್ಲಿ ವಿತರಣೆ

    ಬೆಂಗಳೂರು: ರಾಜ್ಯದ ರೈತರ ಸಂಪೂರ್ಣ ಮಾಹಿತಿ ಒಳಗೊಂಡ ‘ಸ್ವಾಭಿಮಾನಿ ರೈತ’ ಗುರುತಿನ ಚೀಟಿ ಇಂದಿನಿಂದ ರಾಜ್ಯದ ಅನ್ನದಾತರ ಕೈಸೇರಲಿದೆ. ಪ್ರತಿ ರೈತ ತಾನೊಬ್ಬ ಸ್ವಾಭಿಮಾನಿ ಎಂದು ಎದೆಯುಬ್ಬಿಸಿ ಹೇಳುವಂತಾಗಬೇಕೆಂಬ ಆಶಯದಿಂದ ಈ ಗುರುತಿನ ಚೀಟಿಗೆ ಸ್ವಾಭಿಮಾನಿ ರೈತ ಎಂಬ ಹೆಸರಿಡಲಾಗಿದೆ.

    ಏನಿದು ಗುರುತಿನ ಚೀಟಿ: ರೈತರ ಎಲ್ಲ ವಿವರಗಳನ್ನು ದಾಖಲಿಸುವುದಕ್ಕಾಗಿ ಇ-ಆಡಳಿತ ಇಲಾಖೆ ಎನ್​ಐಡಿ ಮೂಲಕ ಫ್ರೂಟ್ಸ್ (FRUITS) ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಇದರ ಮೂಲಕ ಪ್ರತಿ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಇದರ ಆಧಾರದಲ್ಲಿ ರೈತರು ಎಲ್ಲ ಇಲಾಖೆಗಳ ಸೌಲಭ್ಯ ಪಡೆಯಬಹುದಾಗಿರುತ್ತದೆ. ಈ ತಂತ್ರಾಂಶದಲ್ಲಿ ರೈತರ ನೋಂದಣಿ 2018ರ ಜೂನ್ ನಿಂದಲೇ ಪ್ರಾರಂಭವಾಗಿದೆ. ಕೃಷಿ ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳಲ್ಲಿ ರೈತರನ್ನು ಈ ತಂತ್ರಾಂಶದಲ್ಲಿ ನೋಂದಾಯಿಸಲಾಗುತ್ತಿದೆ.

    ನೋಂದಣಿ ಹೇಗೆ?: ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿಗಾಗಿ ರೈತರ ಗುರುತು, ವಿಳಾಸ, ಭೂ ಹಿಡುವಳಿ, ಆಧಾರ್ ಗುರುತಿನ ಸಂಖ್ಯೆಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಲಾಗುತ್ತಿದೆ . ಈ ಮಾಹಿತಿ ಆಧರಿಸಿ ತಂತ್ರಾಂಶ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿ ನೀಡಲು ಪ್ರಸ್ತಾಪಿಸಲಾಗಿದೆ. ಈ ತಂತ್ರಾಂಶದಲ್ಲಿ ಆಧಾರ್ ಸಂಖ್ಯೆ, ಪಹಣಿ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ರೈತರ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ವಿವರ, ಫೋಟೋ, ಇತ್ಯಾದಿ ದಾಖಲಾತಿ ಪರಿಶೀಲಿಸಿ ರೈತರ ನೋಂದಣಿ ಮಾಡಲಾಗುತ್ತದೆ. ರೈತರ ಹಿಡುವಳಿ ವಿವರವನ್ನು ಕಂದಾಯ ಇಲಾಖೆಯ ‘ಭೂಮಿ ’ ತಂತ್ರಾಂಶದಿಂದ ಪಡೆಯಲಾಗುತ್ತದೆ.

    ಪ್ರತಿ ನೋಂದಾಯಿತ ರೈತರಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಇಲ್ಲಿಯವರೆಗೆ ರೈತರಿಗೆ ನೋಂದಣಿಯಾದ ನಂತರ ನೀಡಲು ಯಾವುದೇ ನಿರ್ದಿಷ್ಟ ಸ್ವೀಕೃತಿ / ದಾಖಲೆ ಪತ್ರ ನಿಗದಿಪಡಿಸಿರುವುದಿಲ್ಲ, ಯಾವುದೇ ದಾಖಲಾತಿ ಇಲ್ಲದೆ ನಂತರದ ದಿನಗಳಲ್ಲಿ ಇಲಾಖೆಗಳನ್ನು ಸೌಲಭ್ಯಗಳಿಗಾಗಿ ಸಂರ್ಪಸಿದಾಗ ನೋಂದಣಿ ಸಂಖ್ಯೆಯನ್ನು ರೈತರು ನೆನಪಿನಲ್ಲಿಟ್ಟುಕೊಂಡು ಸರಿಯಾದ ಸಂಖ್ಯೆ ನೀಡುವುದು ಕಷ್ಟಸಾಧ್ಯ. ಈ ಅನಾನುಕೂಲ ಪರಿಹರಿಸಲು ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿ ನೀಡಲಾಗುತ್ತಿದೆ.

    ಇಂದು ವಿತರಣೆ: ಶನಿವಾರ (ಜ.9) ಸಿಎಂ ಯಡಿಯೂರಪ್ಪ ಕೊಪ್ಪಳದಲ್ಲಿ ರೈತರಿಗೆ ಸ್ವಾಭಿಮಾನಿ ರೈತ ಗುರುತಿನ ಚೀಟಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ಆ ನಂತರ ಉಳಿದ ಜಿಲ್ಲೆಗಳಲ್ಲೂ ವಿತರಣೆ ಆರಂಭವಾಗಲಿದೆ.

    ಪ್ರಯೋಜನವೇನು?

    • ಬೆಳೆ ಸಾಲ, ವಿವಿಧ ಯೋಜನೆಗಳಡಿ ಸಹಾಯಧನ ಪಡೆಯುವುದಕ್ಕೆ ಕಚೇರಿಗಳಲ್ಲಿ ಸಮಯ ವ್ಯರ್ಥವಾಗದು
    • ರೈತರಿಗೆ ಇದು ಒಂದು ವ್ಯಾವಹಾರಿಕ ಗುರುತಿನ ಚೀಟಿಯಾಗುತ್ತದೆ

    ರೈತ ಇಂದಿನಿಂದ ಸ್ವಾಭಿಮಾನಿ ಅನ್ನದಾತ: ಕೈಸೇರಲಿದೆ ವಿಶಿಷ್ಟ ಗುರುತಿನ ಚೀಟಿ, ಇಂದು ಕೊಪ್ಪಳದಲ್ಲಿ ವಿತರಣೆಶಾಸಕರು, ಮಂತ್ರಿಗಳು, ಅಧಿಕಾರಿಗಳು, ಬೇರೆ ಬೇರೆ ಕಂಪನಿಗಳ ಸಿಬ್ಬಂದಿಗೆ ಗುರುತಿನ ಚೀಟಿ ಇರುತ್ತದೆ. ಅದೇ ರೀತಿಯಲ್ಲಿ ರೈತರಿಗೆ ಅವರ ಎಲ್ಲ ವಿವರಗಳನ್ನು ಒಳಗೊಂಡ ಗುರುತಿನ ಚೀಟಿ ಇರಬೇಕು. ಬ್ಯಾಂಕ್ ಅಥವಾ ಕಚೇರಿಗಳಿಗೆ ಭೇಟಿ ನೀಡಿದಾಗ ಕಾರ್ಡನ್ನು ದಾಖಲೆಯಾಗಿ ತೋರಿಸಬಹುದು. ಕಾರ್ಡ್ ರೀಡರ್ ಮೇಲೆ ಕಾರ್ಡನ್ನು ಇಟ್ಟರೆ ರೈತರ ವಿಳಾಸ, ಆಧಾರ್ ಸಂಖ್ಯೆ, ಪಹಣಿ, ವಿಳಾಸ ಎಲ್ಲವೂ ಸಿಗುವುದರಿಂದ ಕೆಲಸಗಳು ಸುಲಭವಾಗಲಿವೆ. ಮೊದಲ ಹಂತದಲ್ಲಿ ಸಿಎಂ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಡ್ ವಿತರಿಸಲಿದ್ದಾರೆ. ರೈತ ಸ್ವಾಭಿಮಾನಿಯಾದ ಕಾರಣ ಇದಕ್ಕೆ ಸ್ವಾಭಿಮಾನಿ ರೈತ ಎಂದೇ ಹೆಸರಿಟ್ಟಿದ್ದೇವೆ.

    | ಬಿ.ಸಿ. ಪಾಟೀಲ್ ಕೃಷಿ ಸಚಿವ

    ಸನ್ನಿ ಲಿಯೋನ್​ ಸಾಹಸಗಳ ಹಿಂದಿರುವ ಆ ಟ್ಯಾಲೆಂಟೆಡ್​ ಯಂಗ್​ಮ್ಯಾನ್​ ಇವರೇ..

    ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts