More

    ಅಯೋಧ್ಯೆಯಲ್ಲಿ ಅರುಣ್ ಯೋಗಿರಾಜ್​ ಮಸ್ತ್​ ಡಾನ್ಸ್​: ಶಿಲ್ಪ ಕೆತ್ತನೆಯ ಕ್ಷಣಗಳು ಅವಿಸ್ಮರಣೀಯ ಎಂದ ಮೈಸೂರಿನ ಶಿಲ್ಪಿ

    ಮೈಸೂರು/ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್​​ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಇದೇ ಖುಷಿಯಲ್ಲಿರುವ ಅರುಣ್​, ಅಯೋಧ್ಯೆಯಲ್ಲಿ ಶಿಲ್ಪ ಕೆತ್ತನೆಯ ಸಂದರ್ಭ ಅವಿಸ್ಮರಣೀಯ ಎಂದು ಹೇಳಿದ್ದಾರೆ.

    ಮೂರ್ತಿ ಕೆತ್ತನೆಯ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಯೋಗಿರಾಜ್, ನಾನು ಮೂವತ್ತು ವರ್ಷಗಳಿಂದ ಕೆತ್ತನೆಯ ಕೆಲಸ ಮಾಡುತ್ತಿದ್ದೇನೆ. ಹೊರಗಡೆ ಹೋಗಿ ಎಲ್ಲೂ ಕೆಲಸ ಮಾಡಿದ ಅನುಭವ ಇರಲಿಲ್ಲ. ಇಷ್ಟೊಂದು ದೂರದ ಪ್ರದೇಶಗಳಲ್ಲಿ ಕೆಲಸವನ್ನು ಮಾಡಿರಲಿಲ್ಲ. ಇಲ್ಲಿಗೆ ಬರಲು‌ ಪ್ರಾರಂಭದಲ್ಲಿ ಬೇಜಾರಾಗಿತ್ತು. ಆದರೆ ಈಗ ಅಯೋಧ್ಯೆಯಿಂದ ತೆರಳಲು ಬೇಸರವಾಗುತ್ತಿದೆ ಎಂದರು.

    ಇಲ್ಲಿ ಎಲ್ಲರೂ ನನಗೆ ಬೆಂಬಲ ನೀಡಿದರು. ನನ್ನ 30 ವರ್ಷಗಳ ಅನುಭವದಲ್ಲಿ ಎರಡನೇ ಸಾರಿ ಹೊರಗಡೆ ಬಂದು ಕೆಲಸ ಮಾಡ್ತಾ ಇದ್ದೀನಿ. ಇಲ್ಲಿ ಎಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡರು. ಯುವಕರು ನಗು ನಗುತ್ತಾ ಕೆಲಸವನ್ನು ಮಾಡಿದರು. ಇಲ್ಲಿನ ವಾತಾವರಣ ಚೆನ್ನಾಗಿತ್ತು. ಆದ್ದರಿಂದ ಎಷ್ಟೇ ಕೆಲಸ ಮಾಡಿದರೂ ಆಯಾಸ ಆಗ್ತಾ ಇರಲಿಲ್ಲ. ಇಲ್ಲಿ ಆಗಮಿಸುವಾಗ ಬಹಳ ಯೋಚನೆ ಆಗಿತ್ತು. ಆದರೆ, ಅಖಿಲೇಶ್ ಜೀ, ಇತರೆ ಯುವಕರು ಬಹಳ ಚೆನ್ನಾಗಿ ಸಹಕಾರ ನೀಡಿದರು ಎಂದು ಅರುಣ್​ ತಿಳಿಸಿದ್ದಾರೆ.

    ಅರುಣ್​ ಮಸ್ತ್​ ಡಾನ್ಸ್​
    ಇನ್ನು ಬಾಲ ರಾಮ ಮೂರ್ತಿ ಕೆತ್ತಿ ಮುಗಿಸಿದ ಸಂತೋಷದಲ್ಲಿ ಅರುಣ್​ ಮಸ್ತ್​ ಡಾನ್ಸ್​ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಲಭ್ಯವಾಗಿದೆ. ಮೂರ್ತಿ ಕೆತ್ತನೆ ಮಾಡಿದ ಬಳಿಕ ಅಯೋಧ್ಯೆಯಲ್ಲಿ ಟ್ರಸ್ಟಿಗಳಿಂದ ಅರುಣ್​ಗೆ ಸನ್ಮಾನ ಮಾಡಲಾಗಿದೆ. ಮೂರು ಶಿಲ್ಪಿಗಳನ್ನು ಒಟ್ಟಿಗೆ ಕೂರಿಸಿ, ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಗಿದೆ. ಇದಾದ ಬಳಿಕ ಎಲ್ಲ ಶಿಲ್ಪಿಗಳ ಜೊತೆ ನೃತ್ಯ ಮಾಡಿ ಅರುಣ್​, ಸಂಭ್ರಮಿಸಿದ್ದಾರೆ.

    ಯುವಕರೆಂದರೆ ಯುವಾವಸ್ಥೆಯಲ್ಲಿರುವ ಚೇತನ

    ಅಯೋಧ್ಯೆ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆಗೆ 54 ದೇಶಗಳ 100 ಪ್ರತಿನಿಧಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts