More

    ಒಂದೇ ಕುಟುಂಬದ ಮೂರು ತಲೆಮಾರಿನ ನಟರಿಗೆ ಗಾಯನ … ಎಸ್​ಪಿಬಿ ಇನ್ನೊಂದು ದಾಖಲೆ

    ಹೈದರಾಬಾದ್​: ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಎಂಥಾ ವರ್ಸಟೈಲ್​ ಆದ ಗಾಯಕರಾಗಿದ್ದರು ಎಂದರೆ, ಸುಮಾರು ಮೂರು ದಶಕಗಳ ಕಾಲ, ಮೂರು ತಲೆಮಾರಿನ 150ಕ್ಕೂ ಹೆಚ್ಚು ಹೀರೋಗಳಿಗೆ ಹಾಡಿದ್ದರು. ಬರೀ ಹಾಡುವುದಷ್ಟೇ ಅಲ್ಲ, ಪ್ರತಿಯೊಬ್ಬ ಕಲಾವಿದರಿಗೂ ಮ್ಯಾಚ್​ ಆಗುವಂತೆ ಹಾಡುತ್ತಿದ್ದುದು ಅವರ ವಿಶೇಷತೆಯಾಗಿತ್ತು.

    ಇದನ್ನೂ ಓದಿ: ಯಾರೂ ಮಾಡದ ಒಂದು ದಾಖಲೆ ಮಾಡಿದ್ದಾರೆ ಎಸ್​ಪಿಬಿ … ಏನದು?

    ಈ ವಿಷಯದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲೇ ಯಾರೂ ಮಾಡದ ಒಂದು ಅಪರೂಪದ ದಾಖಲೆಯನ್ನು ಅವರು ಮಾಡಿ ಹೋಗಿದ್ದಾರೆ. ಒಂದೇ ಕುಟುಂಬದ ಮೂರು ತಲೆಮಾರಿನ ನಟರಿಗೆ ಅವರು ಹಾಡುವ ಮೂಲಕ ಅವರು ದಾಖಲೆ ಮಾಡಿದ್ದಾರೆ.

    ಆ ಒಂದೇ ಕುಟುಂಬದ ಮೂರು ತಲೆಮಾರಿನ ನಾಯಕನಟರು ಯಾರು ಗೊತ್ತಾ? ಎನ್​.ಟಿ. ರಾಮರಾವ್​, ಬಾಲಕೃಷ್ಣ ಮತ್ತು ಜ್ಯೂನಿಯರ್​ ಎನ್​ಟಿಆರ್​ … 60ರ ದಶಕದ ಕೊನೆಯಲ್ಲಿ ಎನ್​.ಟಿ. ರಾಮರಾವ್​ ಅವರಿಗೆ ಮೊದಲ ಬಾರಿಗೆ ಹಾಡಿದ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ನಂತರ 80ರ ದಶಕದಲ್ಲಿ ಮಗ ಬಾಲಕೃಷ್ಣ ಮತ್ತು 2000ರ ನಂತರ ಜ್ಯೂನಿಯರ್​ ಎನ್​.ಟಿ.ಆರ್​ ಅವರಿಗೆ ಹಾಡಿದ ಖ್ಯಾತಿ ಬಾಲು ಅವರಿಗಿದೆ.

    ಇದನ್ನೂ ಓದಿ: ಅಮಿತಾಭ್​ಗೆ ಧ್ವನಿ ನೀಡುವುದಕ್ಕೆ ಎಸ್​​ಪಿಬಿಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ …

    ಇನ್ನು ಅದೆಷ್ಟು ಅಪ್ಪ-ಮಕ್ಕಳಿಗೆ ಅವರು ಹಾಡಿದ್ದಾರೋ ಲೆಕ್ಕ ಹಾಕುವುದು ಕಷ್ಟ. ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್​ ಮತ್ತು ಅವರ ಮಗ ನಾಗಾರ್ಜುನ ಅವರಿಗೆ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಕನ್ನಡದಲ್ಲಿ ಡಾ. ರಾಜಕುಮಾರ್​ ಮತ್ತು ಶಿವರಾಜಕುಮಾರ್​, ಕೃಷ್ಣ ಮತ್ತು ಮಹೇಶ್​ ಬಾಬು, ಶಿವಾಜಿ ಗಣೇಶನ್​ ಮತ್ತು ಪ್ರಭು … ಹೀಗೆ ಪಟ್ಟಿ ದೊಡ್ಡದಿದೆ.

    ಕನ್ನಡದಲ್ಲಿ ಪ್ರಶಸ್ತಿ ಪಡೆಯುವುದಕ್ಕೆ 30 ವರ್ಷ ಕಾಯಬೇಕಾಯಿತು ಎಸ್​ಪಿಬಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts