More

    ಯಾರೂ ಮಾಡದ ಒಂದು ದಾಖಲೆ ಮಾಡಿದ್ದಾರೆ ಎಸ್​ಪಿಬಿ … ಏನದು?

    ಇಂದು ನಿಧನರಾದ ದಿಗ್ಗಜ ಗಾಯ ಡಾ.ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಅದೆಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೋ, ಲೆಕ್ಕ ಇಟ್ಟವರಿಲ್ಲ. ಕೇಂದ್ರ ಸರ್ಕಾರದಿಂದ ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಎಸ್​ಪಿಬಿ ಪರಿಚಯವೇ ನನ್ನ ಜೀವನಕ್ಕೆ ದೊಡ್ಡ ತಿರುವು: ಸಂಗೀತಾ ಕಟ್ಟಿ

    ಇನ್ನು ಯಾವುದೇ ಚಿತ್ರರಂಗದಲ್ಲೂ, ಯಾವುದೇ ಗಾಯಕ ಮಾಡದಂತಹ ಒಂದು ಅದ್ಭುತ ದಾಖಲೆಯನ್ನು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಮಾಡಿದ್ದಾರೆನ್ನುವುದು ವಿಶೇಷ. ಎಲ್ಲಾ ರಾಜ್ಯ ಸರ್ಕಾರಗಳು ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಕೊಡುವ ಪರಿಪಾಠ ಇಟ್ಟುಕೊಂಡಿದ್ದು,

    ಇದಕ್ಕೆ ಆಂಧ್ರ ಸರ್ಕಾರ ಸಹ ಹೊರತಲ್ಲ. ನಂದಿ ಹೆಸರಿನ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರತೀವರ್ಷ ಕೊಡುವ ಪರಿಪಾಠವನ್ನು ಆಂಧ್ರ ಸರ್ಕಾರ ಇಟ್ಟುಕೊಂಡಿದ್ದು, ಈ ಪೈಕಿ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ದಾಖಲೆಯ 24 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಯಾವೊಬ್ಬ ಕಲಾವಿದರು ಸಹ ತಮ್ಮ ಸಾಧನೆಗಾಗಿ ಸರ್ಕಾರದಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದ ಉದಾಹರಣೆ ಇಡೀ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಎನ್ನುವುದು ವಿಶೇಷ.

    ಇದನ್ನೂ ಓದಿ: ನಾವೇನು ಈಗ ಹಾಡುತ್ತಿದ್ದೇವೋ ಅದು ಎಸ್​ಪಿಬಿ ಹಾಕಿದ ಭಿಕ್ಷೆ!; ರಾಜೇಶ್​ ಕೃಷ್ಣನ್​

    ಎಸ್​ಪಿಬಿ ಅವರು 1978ರಿಂದ 2012ರವರೆಗೂ ಒಟ್ಟು 24 ನಂದಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬರೀ ಹಾಡಿಗಾಗಿಯಷ್ಟೇ ಅಲ್ಲ, ಸಂಗೀತ ನಿರ್ದೇಶನ, ಪೋಷಕ ನಟ, ಸಂಗೀತ ನಿರ್ದೇಶಕ ಮತ್ತು ಡಬ್ಬಿಂಗ್​ ಕಲಾವಿದರಾಗಿಯೂ ಪ್ರಶಸ್ತಿ ಸ್ವೀಕರಿಸಿರುವುದು ವಿಶೇಷ. ಅದರಲ್ಲೂ 1991ರಿಂದ 94ರವರೆಗೂ ನಾಲ್ಕು ವರ್ಷಗಳ ಕಾಲ ಅವರು ಸತತವಾಗಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

    PHOTO GALLERY| ಸ್ವರ ಮಾಂತ್ರಿಕ ಎಸ್​.ಪಿ. ಬಾಲಸುಬ್ರಹ್ಮಣ್ಯಂರ ಅಪರೂಪದ ಕ್ಷಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts