ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ ಹೇಳಿದ್ದಿಷ್ಟು…

blank

ನವದೆಹಲಿ: ವಾಡಿಕೆಯಂತೆ ಗಣರಾಜ್ಯೋತ್ಸವದ ಹಿಂದಿನ ದಿನ ಪದ್ಮಪುರಸ್ಕಾರಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, 2022ನೇ ಸಾಲಿನಲ್ಲಿ ನಾಲ್ವರು ಪದ್ಮವಿಭೂಷಣ, 17 ಮಂದಿ ಪದ್ಮಭೂಷಣ, 107 ಸಾಧಕರು ಪದ್ಮಶ್ರೀ ಪುರಸ್ಕಾರಗಳಿಗೆ ಆಯ್ಕೆ ಆಗಿದ್ದಾರೆ. ಈ ಪೈಕಿ 13 ಜನರಿಗೆ ಮರಣೋತ್ತರವಾಗಿ ಮತ್ತು ಎರಡು ಜೋಡಿಗೆ (ನಾಲ್ವರಿಗೆ) ಜಂಟಿಯಾಗಿ ಪ್ರಶಸ್ತಿ ಘೋಷಣೆ ಆಗಿದೆ.

ಪ್ರಶಸ್ತಿ ಘೋಷಣೆ ಬೆನ್ನೆಲ್ಲೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ (77) ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನನ್ನನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆಂದು ಅನೇಕರು ಹೇಳುತ್ತಿದ್ದಾರೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ಇದು ನಿಜವೇ ಆಗಿದ್ದರೆ ನಾನು ಪ್ರಶಸ್ತಿಯನ್ನು ತಿರಸ್ಕರಿಸುತ್ತೇನೆ ಎಂದಿದ್ದಾರೆ.

ಭಾರತದ ಅತ್ಯನ್ನತ ನಾಗರಿಕ ಗೌರವ ಪುರಸ್ಕಾರಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿರುವ ಅಪರೂಪದ ನಿದರ್ಶನ ಇದಾಗಿದ್ದು, ಸರ್ಕಾರಕ್ಕೆ ಇದು ದೊಡ್ಡ ಮುಜುಗರ ಉಂಡುಮಾಡಲಿದೆ.

ಕೇಂದ್ರ ಸರ್ಕಾರದ ಪ್ರಕಾರ, ಕೇಂದ್ರ ಗೃಹ ಕಾರ್ಯದರ್ಶಿ ಇಂದು ಬೆಳಗ್ಗೆ ಪ್ರಶಸ್ತಿಯ ಬಗ್ಗೆ ಶ್ರೀ ಭಟ್ಟಾಚಾರ್ಯ ಅವರ ಪತ್ನಿಯೊಂದಿಗೆ ಮಾತನಾಡಿದ್ದಾರೆ. ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು ಮತ್ತು ಧನ್ಯವಾದ ಹೇಳಿದರು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಟೀಕಾಕಾರರಲ್ಲಿ ಭಟ್ಟಾಚಾರ್ಯ ಕೂಡ ಪ್ರಮುಖರು. ಕೆಲ ತಿಂಗಳುಗಳಿಂದ ಭಟ್ಟಾಚಾರ್ಯ ಅವರು ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಜೊತೆಗೆ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.

ಚಲನಚಿತ್ರ ಬರಹಗಾರ ಸಲೀಂ ಖಾನ್ ಅವರು 2015ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅವರಿಗಿಂತ ಮೊದಲು, ಇತಿಹಾಸಕಾರರಾದ ರೋಮಿಲಾ ಥಾಪರ್ ಅವರು 2005 ರಲ್ಲಿ ಪದ್ಮಭೂಷಣವನ್ನು ನಿರಾಕರಿಸಿದ್ದರು. (ಏಜೆನ್ಸೀಸ್​)

ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣ

ರಾವತ್​ಗೆ ಮರಣೋತ್ತರ ಪದ್ಮವಿಭೂಷಣ: 4 ಪದ್ಮವಿಭೂಷಣ, 17 ಪದ್ಮಭೂಷಣ, 107 ಪದ್ಮಶ್ರೀ ಪ್ರಶಸ್ತಿ ಪಟ್ಟಿ ಪ್ರಕಟ

ಕಿಟ್-ಕಿಸ್ ವಿವಿಗಳಿಗೆ ಪ್ರತಿ ಸಲ ಭೇಟಿ ಕೊಟ್ಟಾಗಲೂ ವಿಶಿಷ್ಟ ಅನುಭವ: ಭುವನೇಶ್ವರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೆಚ್ಚುಗೆ

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…