More

    ಯಲಹಂಕದಲ್ಲಿ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪೆಟಲ್ಸ್‌ನ ನೂತನ ಶಾಖೆ ಆರಂಭ

    ಬೆಂಗಳೂರು: ರಾಜ್ಯದ ಅತಿದೊಡ್ಡ ಮಲ್ಟಿಸ್ಪೆಷಾಲಿಟಿ ಆರೋಗ್ಯ ಸೇವೆ ನೀಡುವ ಆಸ್ಪತ್ರೆಗಳ ಸಮೂಹಗಳಲ್ಲಿ ಒಂದಾದ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪೆಟಲ್ಸ್ ನಗರದ ಯಲಹಂಕದಲ್ಲಿ 250 ಹಾಸಿಗೆಗಳ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಿದೆ.

    ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯನ್ನು ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಮುಖ್ಯಸ್ಥ ಡಾ. ಶರಣ ಶಿವರಾಜ್ ಪಾಟೀಲ್, ಸಚಿವ ಎಂ.ಬಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ನಿವೃತ್ತ ನ್ಯಾ. ಶಿವರಾಜ್ ವಿ. ಪಾಟೀಲ್ ಇತರರು ಇದ್ದರು.

    ತುರ್ತು ಚಿಕಿತ್ಸಾ ವಿಭಾಗದಲ್ಲಿ 50 ಹಾಗೂ ನವಜಾತ ಶಿಶುಗಳ ನಿಗಾ ಘಟಕದಲ್ಲಿ 20 ಸೇರಿ 250 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಯು, 40 ವಿಶೇಷತೆಗಳೊಂದಿಗೆ ವಿವಿಧ ವಿಭಾಗಗಳಲ್ಲಿ ಸಮಗ್ರ ಮತ್ತು ವಿಶೇಷ ಆರೈಕೆ ಒದಗಿಸಲಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ನ್ಯೂರೋಸೈನ್ಸಸ್, ಕಾರ್ಡಿಯಾಕ್ ಸೈನ್ಸಸ್, ಗ್ಯಾಸ್ಟ್ರೋ ಸೈನ್ಸಸ್, ಮೂತ್ರಪಿಂಡ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಆರೈಕೆ, ತಲೆ ಮತ್ತು ಕುತ್ತಿಗೆಯ ಶಸಚಿಕಿತ್ಸೆ, ಅಪಘಾತ ಆರೈಕೆ ಮತ್ತು ತುರ್ತು ಔಷಧ ಸೇರಿ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ. 24/7 ತುರ್ತು ಆರೈಕೆ ಒದಗಿಸಲಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ. ಶರಣ ಶಿವರಾಜ್ ಪಾಟೀಲ್ ತಿಳಿಸಿದರು.

    ಇದು ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ 7ನೇ ಶಾಖೆಯಾಗಿದ್ದು, ಒನ್ ಸ್ಟಾಪ್ ಹೆಲ್ತ್‌ಕೇರ್ ಹಬ್ ಆಗಿಸುವ ನಮ್ಮ ಪ್ರಯತ್ನಕ್ಕೆ ಇದು ಸಾಕ್ಷಿಯಾಗಿದೆ. ವಿಶ್ವ ದರ್ಜೆಯ ವೈದ್ಯಕೀಯ ಸೇವೆ ನೀಡುವ ಮೂಲಕ ನಮ್ಮ ಬದ್ಧತೆಯನ್ನು ತಿಳಿಸುತ್ತದೆ. ಪ್ರತಿ ರೋಗಿಗೂ ಆರಾಮದಾಯಕ ಸೇವೆ ಒದಗಿಸಲು ನಾವು ಅಗತ್ಯ ಸೌಕರ್ಯಗಳೊಂದಿಗೆ ಸಜ್ಜಾಗಿದ್ದೇವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts