More

    ಕರೋನಾ ಎಫೆಕ್ಟ್​: ರೂಲ್ಸ್​ ಪಾಲಿಸಿ ಎನ್ನುತ್ತಿರುವ ಸರ್ಕಾರ; ಮಿಶ್ರ ಪ್ರತಿಕ್ರಿಯೆ ಕೊಡುತ್ತಿರುವ ಜನ…

    ಬೆಂಗಳೂರು: ದೇಶಾದ್ಯಂತ ಕರೋನಾ ಹಿನ್ನೆಲೆ ಸಮರೋಪಾದಿಯಲ್ಲಿ ಆಸ್ಪತ್ರೆಗಳಲ್ಲಿ ಮಾಕ್​ ಡ್ರಿಲ್​, ಆಕ್ಸಿಜನ್​ ಸಿಲಿಂಡರ್​ಗಳು ಎಷ್ಟಿವೆ, ಅಗತ್ಯ ಸಲಕರಣೆಗಳು ಇದೆಯಾ ಎಂದು ಚೆಕ್​ ಮಾಡಲಾಗುತ್ತಿದೆ. ಈ ನಡುವೆ ಸರ್ಕಾರವೂ ಕರೋನಾ ನಿಯಂತ್ರಿಸಲು ರೂಲ್ಸ್​ ಮಾಡುತ್ತಿದ್ದು ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಕಾಣಿಸಿಕೊಳ್ಳುತ್ತಿದೆ.

    ಮಾಸ್ಕ್ ಕಡ್ಡಾಯದ ವಿರುದ್ಧ ಆಟೋ ಚಾಲಕರು ಕಿಡಿ ಕಾರಿದ್ದು ‘ಕರೊನಾನೂ ಉಲ್ಲ, ಏನೂ ಇಲ್ಲ. ಇದು ಸರ್ಕಾರದ ದುಡ್ಡು ಮಾಡುವ ತಂತ್ರ. ಎಲೆಕ್ಷನ್ ಬಂದಾಗ ಯಾವ ಕರೊನಾನೂ ಇರಲ್ಲ. ಈಗ ಕರೊನಾ ಕರೊನಾ ಅಂತಾ ಭಯಪಡಿಸ್ತಾ ಇದ್ದಾರೆ. ಜೀವನ ಮಾಡೋಕೆ ಬಿಡಿ ಸ್ವಾಮೀ’ ಎಂದು ಆಟೋ ಚಾಲಕರ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಗಾಂಧಿ ಬಜಾರ್​ನಲ್ಲೂ ಸರ್ಕಾರದ ನಿಯಮ ಜನ ಪಾಲಿಸುತ್ತಿಲ್ಲ. ವ್ಯಾಪಾರಿಗಳು, ಸಾರ್ವಜನಿಕರು, ಗ್ರಾಹಕರು, ಹೀಗೆ ಯಾರ ಮುಖದಲ್ಲೂ ಮಾಸ್ಕ್ ಕಾಣಿಸಿಕೊಳ್ಳುತ್ತಿಲ್ಲ. ಜನ ಸಾಮಾಜಿಕ ಅಂತರ ಇಲ್ಲದೆ ಮನಸೋ ಇಚ್ಛೆ ಓಡಾಟ ನಡೆಸುತ್ತಿದ್ದಾರೆ. ಗಾಂಧಿ ಬಜಾ್ರ್​ನಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮಾಸ್ಕ್ ಧರಿಸಿದ್ದಾರೆ. ಇನ್ನೂ ಕೆಲವರಿಗೆ ಮಾಸ್ಕ್ ಕಡ್ಡಾಯ ಮಾಡಿದೆ ಎನ್ನುವುದೇ ತಿಳಿದಿಲ್ಲ. ಇನ್ನು ಕೆಲವರು ಜೇಬಿನಲ್ಲಿ ಮಾಸ್ಕ್ ಇಟ್ಟುಕೊಂಡು ಓಡಾಡುತ್ತಿದ್ದು ಯಾರಾದರು ಕೇಳಿದರೆ ಮಾತ್ರ ಮಾಸ್ಕ್​ ಜೇಬಿನಿಂದ ಹೊರ ಬರುತ್ತಿದೆ. ಕೆಲ ಗ್ರಾಹಕರು ನಾಳೆಯಿಂದ ಮಾಸ್ಕ್ ಧರಿಸ್ತೀವಿ ಎನ್ನುತ್ತಿದ್ದರೆ ತಕ್ಷಣದಿಂದಲೇ ಮಾಸ್ಕ್ ಧರಿಸ್ತೀವಿ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ ರೂಪಾಂತರಿ BF.7 ಆತಂಕ; ಶುರುವಾಯ್ತು ಮಾಕ್​ ಡ್ರಿಲ್​…

    ಸಸ್ಯಕಾಶಿ ಲಾಲ್​ಬಾಗ್​ನಲ್ಲೂ ಕರೊನಾ ರೂಲ್ಸ್ ಪಾಲಿಸಲಾಗುತ್ತಿಲ್ಲ. ಅಲ್ಲಿ ಕಡ್ಡಾಯವಾಗಿ ಮಾಸ್ಕ್ ಧಾರಣೆ ಇಲ್ಲವೇ ಇಲ್ಲ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಜನರ ಓಡಾಡುತ್ತಿದ್ದು ಲಾಲ್​ಬಾಗ್​ನಲ್ಲಿ ಪ್ರವಾಸಿಗರ ದಂಡು ಬಂದಿದೆ. ಮಾಸ್ಕ್ ಇಲ್ಲದಿದ್ರೂ ಲಾಲ್​ಬಾಗ್ ಸಿಬ್ಬಂದಿ ಪ್ರವಾಸಿಗರಿಗೆ ಎಂಟ್ರಿ ಕೊಡುತ್ತಿದ್ದಾರೆ.
    ಈ ಎಲ್ಲಾ ಪ್ರಕರಣಗಳನ್ನು ನೋಡುವಾಗ ಮಾಸ್ಕ್ ಕಡ್ಡಾಯ ಎಂಬ ಸರ್ಕಾರದ ನಿಯಮ ಜನರಿಗೆ ಗೊತ್ತೇ ಇಲ್ವಾ? ಎನ್ನುವ ಪ್ರಶ್ನೆ ಏಳುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts