More

    ರಾಜಮನೆತನವನ್ನೂ ಬಿಡದ ಕೋವಿಡ್ 19; ಸ್ಪೇನ್‌ನ ರಾಣಿ ಮರಿಯಾ ತೆರೇಸಾ ಸಾವು

    ಮ್ಯಾಡ್ರಿಡ್: ಯಾವುದೇ ರೋಗರುಜಿನ ಬಂದರೂ ಬಡವರು, ಶ್ರೀಮಂತರು ಎಂಬ ಯಾವುದೇ ಭೇದಭಾವ ಇರುವುದಿಲ್ಲ ಎಂಬುದಕ್ಕೆ ಕರೊನಾ ವೈರಸ್ ಸೋಂಕು ಉದಾಹರಣೆಯಾಗಿದೆ.

    ಕೆಲದಿನಗಳ ಹಿಂದಷ್ಟೇ ಬ್ರಿಟನ್‌ನ ರಾಜ ಚಾರ್ಲ್ಸ್ ಕರೊನಾ ಸೋಂಕಿಗೆ ಒಳಗಾಗಿದ್ದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸ್ಪೇನ್‌ನ ಬೋರ್ನ್‌ಬೋನ್ ಪರ್ಮಾ ರಾಜಮನೆತನಕ್ಕೆ ಸೇರಿದ್ದ ರಾಣಿ ಮರಿಯಾ ತೆರೇಸಾ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. 86 ವರ್ಷ ವಯಸ್ಸಿನ ಅವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ 19ಕ್ಕೆ ಬಲಿಯಾದ ರಾಜಮನೆತನದ ಮೊದಲ ವ್ಯಕ್ತಿ ಇವರಾಗಿದ್ದಾರೆ.
    ರಾಣಿ ಮರಿಯಾ ತೆರೇಸಾ ಸ್ಪೇನ್‌ನ ರಾಜ ೆಲಿಪೆ 6 ಸಹೋದರ ಸಂಬಂಧಿಯಾಗಿದ್ದರು. ಇತ್ತೀಚೆಗೆ ೆಲಿಪೆ ಅವರಿಗೆ ಕರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಗಂಟಲಿನ ದ್ರವವನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಸೋಂಕು ತಗುಲಿಲ್ಲ ಎಂಬುದು ಖಚಿತಪಟ್ಟಿತ್ತು.

    ಆದರೆ ಮರಿಯಾ ತೆರೇಸಾ ಅವರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಅವರ ಭಾನುವಾರ ಮೃತಪಟ್ಟಿದ್ದಾಗಿ ರಾಜಮನೆತನದ ಮೂಲಗಳು ತಿಳಿಸಿವೆ.

    ಎಡಪಂಥೀಯ ಒಲವು ಹೊಂದಿದ್ದ ಮರಿಯಾ ತೆರೇಸಾ ನಿಷ್ಠುರ ಮತ್ತು ನೇರನುಡಿಗೆ ಖ್ಯಾತರಾಗಿದ್ದರು. ರೆಡ್ ಪ್ರಿನ್ಸೆಸ್ ಎಂದೇ ಇವರನ್ನು ಕರೆಯಲಾಗುತ್ತಿತ್ತು. 1933ರ ಜುಲೈ 28ರಂದು ಜನಿಸಿದ್ದ ಇವರು ್ರಾನ್ಸ್‌ನಲ್ಲಿ ಸಮಾಜಶಾಸ ವ್ಯಾಸಂಗ ಮಾಡಿ, ಪ್ಯಾರೀಸ್‌ನಲ್ಲಿ ಪ್ರೊೆಸರ್ ಆಗಿ ಕೆಲಸ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts