More

    ‘ಇನ್ನೊಂದ್​ ಸಲ ಹೆಲ್ಮೆಟ್​ ಹಾಕಿದ್ದು ಕಂಡ್ರೆ ಸ್ಪಾಟ್​ನಲ್ಲೇ ಸಸ್ಪೆಂಡ್​ ಮಾಡ್ತೀನಿ’ ಎಂದ ಎಸ್​ಪಿ..!

    ವಿಜಯನಗರ: ಪ್ರತೀ ವರ್ಷವೂ ಸಾವಿರಾರು ಭಕ್ತರು ರಾಜ್ಯದ ಮೂಲೆ ಮೂಲೆಗಳಿಂದ ವಿಜಯನಗರ ಜಿಲ್ಲೆಯಲ್ಲಿ ಸಂಕೀರ್ತನಾ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಪ್ರತೀ ಬಾರಿಯಂತೆ ಈ ಬಾರಿಯೂ ವಡಕರಾಯ ದೇಗುಲದಿಂದ ಅಭಯ ಹಸ್ತಾಂಜನೇಯ ದೇಗುಲದವರೆಗೆ ಹನುಮ ಭಕ್ತರು ಮೆರವಣಿಗೆ ನಡೆಸಲಿದ್ದಾರೆ. ಈ ಸಂದರ್ಭ ಸುರಕ್ಷತಾ ಬಂದೋಬಸ್ತಿಗೆ ಇದ್ದ ಪೊಲೀಸರು ಟೋಪಿ ತೊಡಲಿಲ್ಲ ಎಂದು ಎಸ್.ಪಿ ಫುಲ್​ ಗರಂ ಆಗಿದ್ದರು.

    ಸದ್ಯ ಇಬ್ಬರು ಡಿಎಸ್.ಪಿ, 6 ಜನ ಸಿಪಿಐ , 13 ಸಬ್ ಇನ್ಸ್ಪೆಕ್ಟರ್, 30 ಜನರು ಎಎಸ್ಐಗಳನ್ನ ನೇಮಕ ಮಾಡಲಾಗಿದೆ. ಇದರ ಜೊತೆಗೆ 230 ಜನರ ಪೊಲೀಪ್ ಪೇದೆಗಳನ್ನ, ಒಂದು ಕೆಸ್ಆರ್ಪಿ ತುಕಡಿ ನೇಮಕ ಮಾಡಲಾಗಿದ್ದು ವಿಡಿಯೋಗ್ರಫಿ, ಗಸ್ತು ಪೊಲೀಸರೂ ಈ ಬಾರಿ ಸುರಕ್ಷತೆ ನೋಡಿಕೊಳ್ಳಲಿದ್ದಾರೆ.

    ಸಂಕೀರ್ಥನಾ ಯಾತ್ರೆ ಸಂದರ್ಭ ಪೊಲೀಸ್ ಪೇದೆಗಳಿಗೆ ಗೈಡ್ ಮಾಡುವ ವೇಳೆ ಎಸ್.ಪಿ ಶ್ರೀಹರಿಬಾಬು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಗೈಡ್ ಮಾಡುವ ವೇಳೆ ಪೇದೆಗಳು ಪೊಲೀಸ್ ಟೋಪಿ ಹಾಕಿಕೊಂಡಿರಲಿಲ್ಲ. ಇದರಿಂದ ಫುಲ್​ ಸಿಟ್ಟಾದ ಎಸ್​.ಪಿ, ಈ ವೇಳೆ ‘ಟೋಪಿ ಹಾಕಿಕೊಳ್ಳಲು ಭಾರ ಆಗುತ್ತೇನ್ರೀ ನಿಮಗೆ? ಅದ್ಯಾವುದೋ ಕಿತ್ತೋಗಿರೋ ಹೆಲ್ಮೆಟ್ ಹಾಕಿದ್ರೆ ಆಯ್ತೇನ್ರೀ..? ಹೆಲ್ಮೆಟ್ ಹಾಕೋದಾದ್ರೆ ಇಲಾಖೆಯಿಂದ ಟೋಪಿ ಯಾಕ್ ಕೊಡಬೇಕು? ಇನ್ನೊಂದು ಬಾರಿ ಹೆಲ್ಮೆಟ್ ಹಾಕಿದ್ರು ಕಂಡುಬಂದ್ರೆ ಸ್ಪಾಟಿನಲ್ಲೆ ಸಸ್ಪೆಂಡ್ ಮಾಡ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.

    ನಿಯಮ ಪ್ರಕಾರ ಪೊಲೀಸರು ಸಂಪೂರ್ಣ ಸಮವಸ್ತ್ರದಲ್ಲೇ ಇರಬೇಕು. ಆದರೆ ಇಲ್ಲಿ ಪೊಲೀಸ್​ ಪೇದೆಗಳು ಸಮವಸ್ತ್ರದ ಟೋಪಿ ಹಾಕುವ ಬದಲು ಪೊಲೀಸ್​ ಹೆಲ್ಮೆಟ್​ ಧರಿಸಿದ್ದರು. ಇದರಿಂದ ಎಸ್​.ಪಿ ಸಿಟ್ಟಾಗಿದ್ದು ಪೊಲೀಸರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts