More

  ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

  ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ ಎಚ್ಚರಿಕೆ ನೀಡಿದರು.

  ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ವಾತನಾಡಿದರು. ಪಾವಗಡದಲ್ಲಿ ಮಟ್ಕಾ ದಂಧೆ ಹೆಡೆಮುರಿ ಕಟ್ಟಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಮಟ್ಕಾದಂಧೆಕೋರರು 10 ಲಕ್ಷ ದಂಡ ಹಾಗೂ ಜೈಲುವಾಸ ಅನುಭವಿಸಲು ಸಿದ್ಧರಾಗಬೇಕು. ರಾಜ್ಯದಲ್ಲಿ ತುಮಕೂರು ಜಿಲ್ಲೆಯಲ್ಲೇ ಅತೀ ಹೆಚ್ಚು ಅಪಘಾತಗಳಾಗುತ್ತಿದ್ದು, ಸಂಚಾರಿ ನಿಯಮ ಪಾಲಿಸದೆ ಇರುವುದು ಕಾರಣ ಎಂದರು.

  ಉಚಿತ ಚಾಲನಾ ಪರವಾನಗಿ ಮೇಳ ಆಯೋಜಿಸುವಂತೆ ಹೆಲ್ಪ್ ಸೊಸೈಟಿ ಅಧಕ್ಷ ವಾನಂಶಶಿಕಿರಣ್ ಮತ್ತು ಅನಿಲ್ ಮನವಿ ಸಲ್ಲಿಸಿದರು. ಇಂದ್ರಬೆಟ್ಟ, ಬೂದಿಬೆಟ್ಟ, ಕೋಟಗುಡ್ಡ ಗ್ರಾಮ ಮತ್ತಿತರ ಗ್ರಾಮಗಳಲ್ಲಿ ಅಸ್ಪೃಶ್ಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ, ಪೊಲೀಸರು ಕ್ರಮ ಜರುಗಿಸಬೇಕು ಎಂದು ದಲಿತ ಮುಖಂಡರಾದ ಸಿ.ಕೆ.ತಿಪ್ಪೇಸ್ವಾಮಿ, ವೆಂಕಟರವಣ ಆಗ್ರಹಿಸಿದರು. ರೈತ ಸಂದ ನರಸಿಂಹರಡ್ಡಿ ಮಾತನಾಡಿ, ಸೋಲಾರ್ ಪಾರ್ಕ್ ಕಂಪನಿ ರೈತರಿಗೆ ಸೂಕ್ತ ಪರಿಹಾರ ನೀಡದೆ ರೈತರಿಗೆ ಅನ್ಯಾಯ ವಾಡುತ್ತಿದೆ ಎಂದರು.

  ಪಟ್ಟಣದ ರೈನ್‌ಗೇಜ್ ಬಡಾವಣೆಯ ಶೃಂಗೇರಿ ಶಾರದ ವಿದ್ಯಾಪೀಠ ಶಾಲೆಯತ್ತಿರ ಪಡ್ಡೆಹುಡುಗರ ಹಾವಳಿ ಹೆಚ್ಚಾಗಿದ್ದು, ಹೆಣ್ಣುಮಕ್ಕಳು ಓಡಾಡಲು ಭಯಭೀತರಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಅಂಗನವಾಡಿ ಶಿಕ್ಷಕಿ ರಮೀಜಾ ಒತ್ತಾಯಿಸಿದರು. ಹೆಲ್ಪ್ ಸೊಸೈಟಿ ವತಿಯಿಂದ ವಂಶಿಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಮಧುಗಿರಿ ಡಿವೈಎಸ್‌ಪಿ ಪ್ರವೀಣ್, ಪಾವಗಡ ಸಿಪಿಐ ನಾಗರಾಜ್, ಎಸ್‌ಐ ರಾವೇಂದ್ರ, ತಿರುಮಣಿ, ಸಿಪಿಐ ಶ್ರೀಶೈಲಮೂರ್ತಿ, ಎಸ್‌ಐ ರಾಮಕೃಷ್ಣಪ್ಪ ಹಾಗೂ ತಾಲೂಕಿನ 4 ಠಾಣೆಗಳ ಸಿಬ್ಬಂದಿ ಇದ್ದರು.

  ಜನಸ್ನೇಹಿ ಪೊಲೀಸ್ ಠಾಣೆ: ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಠಾಣಾಗಳಾಗಿ ರೂಪುಗೊಳ್ಳುತ್ತಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ, ಕುಡಿತದಿಂದ ಕೊಲೆಸುಲಿಗೆಗಳು ಮತ್ತು ಸಂಸಾರಗಳು ಹಾಳಾಗುತ್ತಿವೆ. ಅಕ್ರಮ ಮದ್ಯವಾರಾಟಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಬಗ್ಗೆ ಅಬಕಾರಿ ಇಲಾಖೆ ಜತೆ ಚರ್ಚೆ ನಡೆಸಲಾಗುತ್ತದೆ. ಗ್ರಾಮದ ಸ್ತ್ರೀಶಕ್ತಿ ಸಂದ ಮಹಿಳೆಯರು ಅಕ್ರಮ ಮದ್ಯ ವಾರಾಟದ ಬಗ್ಗೆ ಧ್ವನಿ ಎತ್ತಬೇಕು ಎಂದು ಎಸ್ಪಿ ವಂಶಿಕೃಷ್ಣ ತಿಳಿಸಿದರು.

  ಪೊನ್ನ ಸಮುದ್ರದಲ್ಲಿ ಎಸ್‌ಪಿ ಗ್ರಾಮವಾಸ್ತವ್ಯ

  ಪಾವಗಡ: ಪೊನ್ನಸಮುದ್ರದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಎಸ್‌ಪಿ ವಂಶಿಕೃಷ್ಣ ಮತ್ತು ಪೊಲೀಸ್ ತಂಡ ಶುಕ್ರವಾರ ರಾತ್ರಿ ಗ್ರಾಮವಾಸ್ತವ್ಯ ಹೂಡಿ, ಸಾರ್ವಜನಿಕ ಸಭೆ ನಡೆಸಿ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಅವಲೋಕನ ನಡೆಸಿದರು.

  ಅಕ್ರಮ ಮದ್ಯವಾರಾಟ ಜೋರಾಗಿದ್ದು, ಮೀಸೆಬಾರದ ಮಕ್ಕಳು ಸಹ ಕುಡಿಯುವುದನ್ನ ಕಲಿತಿದ್ದಾರೆ. ಅಕ್ರಮ ಮದ್ಯವಾರಾಟಕ್ಕೆ ಕಡಿವಾಣ ಹಾಕಲೆಬೇಕು ಎಂದು ಗ್ರಾಮದ ಲಕ್ಷ್ಮಮ್ಮ, ಸರೋಜಮ್ಮ, ದುರ್ಗಮ್ಮ, ಕೊಲ್ಲಕ್ಕ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಶಾಂತಿ ಭದ್ರತೆ, ಗುಂಪು ಗಲಾಟೆ ಹಾಗೂ ಆಸ್ಪತ್ರೆ ಬಗ್ಗೆ ದೂರುಗಳಿದ್ದರೆ ನೇರವಾಗಿ ಡಿವೈಎಸ್‌ಪಿಗೆ ದೂರು ಸಲ್ಲಿಸಬಹುದು. ಪೊಲೀಸ್ ಎಂದರೆ ಭಯ ಅಲ್ಲ ಭರವಸೆ. ನಾವು ಸಮವಸ್ತ್ರ ಹಾಕಿ ಪೊಲೀಸ್ ಆಗಿದ್ದೇವೆ, ಸಾರ್ವಜನಿಕರು ಸಮವಸ್ತ್ರ ಇಲ್ಲದೇ ಪೊಲೀಸರಾಗಬೇಕು ಎಂದರು.

  ಇಒ ನರಸಿಂಹಮೂರ್ತಿ, ಮಧುಗಿರಿ ಡಿವೈಎಸ್‌ಪಿ ಪ್ರವೀಣ್, ಸಿ.ಐ. ನಾಗರಾಜ್, ಶ್ರೀಶೈಲಮೂರ್ತಿ,ಗ್ರಾಮ ಪಂಚಾಯಿತಿ ಅಧ್ಯೆಕ್ಷೆ ಲಕ್ಷ್ಮೀದೇವಿ ಈರಣ್ಣ, ಪಿಡಿಒ ಕಿಶೋರ್‌ಲಾಲ್, ಗ್ರಾಪಂ ಸದಸ್ಯರಾದ ಬಿಎಚ್ ಮಹೇಶ್, ವರಮಹಾಲಕ್ಷ್ಮಮ್ಮ, ಅಕ್ಕಮ್ಮ, ರಂಗಮ್ಮ, ಪ್ರೇಮ, ಈಶ್ವರಪ್ಪ, ಹನುಮರೆಡ್ಡಿ, ಶಿವಪ್ಪ, ನಾಗಿರೆಡ್ಡಿ, ಮುಖಂಡ ಮೈಲಾರರೆಡ್ಡಿ ಇದ್ದರು.

  ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ತಾಲೂಕಿನಲ್ಲಿ ಅಕ್ರಮ ಮದ್ಯವಾರಾಟ ಎಗ್ಗಿಲ್ಲದೇ ನಡೆಯುತ್ತದೆ. ಪಟ್ಟಣದಲ್ಲಿ ಸೋಮವಾರ ನಡೆಯುವ ಸಂತೆಯಲ್ಲಿ ಮೊಬೈಲ್ ಕಳ್ಳರಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಹಸಿರುಸೇನೆ ಸಂದ ಅಧ್ಯಕ್ಷ ಪೂಜಾರಪ್ಪ ಒತ್ತಾಯಿಸಿದರು. ಪಟ್ಟಣದಲ್ಲಿ ಶನಿಮಹಾತ್ಮ ದೇವಸ್ಥಾನದ ಪಕ್ಕದಲ್ಲಿ ಲಿಕ್ಕರ್ ಶಾಪ್‌ಗಳಲ್ಲಿ ಬಿಡಿ ವಾರಾಟ ವಾಡುತ್ತಿದ್ದು, ಕುಡುಕರ ಹಾವಳಿ ಹೆಚ್ಚಾಗಿದೆ. ಮುಖ್ಯ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ವಾಲ್ಮೀಕಿ ಜಾಗೃತಿ ವೇದಿಕೆ ಸಂಟನಾ ಕಾರ್ಯದರ್ಶಿ ಬೇಕರಿ ನಾಗರಾಜ್ ಮನವಿ ವಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts