More

    ಯುಪಿ ವಿಧಾನಸಭಾ ಚುನಾವಣೆಯಲ್ಲಿ ಈ ವಿಪಕ್ಷ ನಾಯಕ ಸ್ಪರ್ಧಿಸುವುದಿಲ್ಲವಂತೆ!

    ಲಖನೌ: ಉತ್ತರಪ್ರದೇಶದ ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಾರ್ಟಿ(ಎಸ್​​ಪಿ)ಯ ಅಧ್ಯಕ್ಷ ಅಖಿಲೇಶ್​ ಯಾದವ್​ 2022ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಅಜಮ್​ಗಡದ ಸಂಸದರಾಗಿರುವ ಯಾದವ್​ ಎಸ್​​ಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಇಂದು ಲಖನೌನಲ್ಲಿ ಮಾತನಾಡಿರುವ ಅಖಿಲೇಶ್​ ಯಾದವ್​ ತಮ್ಮ ಪಕ್ಷ, ರಾಷ್ಟ್ರೀಯ ಲೋಕ ದಳ(ಆರ್​ಎಲ್​ಡಿ)ದೊಂದಿಗೆ ಚುನಾವಣಾ ಒಪ್ಪಂದ ಮಾಡಿಕೊಂಡಿದೆ. ಸೀಟುಗಳ ಹಂಚಿಕೆ ಇನ್ನೂ ಅಂತಿಮವಾಗಬೇಕಿದೆ ಎಂದು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ. ತಮ್ಮ ಚಿಕ್ಕಪ್ಪ ಶಿವಪಾಲ್​ ಯಾದವ್​ರ ಪ್ರಗತಿಶೀಲ್​ ಸಮಾಜವಾದಿ ಪಾರ್ಟಿ ಲೋಹಿಯಾ(ಪಿಎಸ್​ಪಿಎಲ್​)ದೊಂದಿಗೆ ಒಗ್ಗೂಡುವ ಸಾಧ್ಯತೆ ಬಗೆಗೆ, “ನನಗೆ ಯಾವ ಸಮಸ್ಯೆಯೂ ಇಲ್ಲ. ಅವರಿಗೆ ಮತ್ತು ಅವರ ಜನರಿಗೆ ಸೂಕ್ತ ಗೌರವ ನೀಡಲಾಗುವುದು” ಎಂದು ತೆರೆದ ಆಹ್ವಾನ ನೀಡಿದ್ದಾರೆ. (ಏಜೆನ್ಸೀಸ್)

    ಬಿಜೆಪಿ ಜೊತೆ ಸೀಟು ಹಂಚಿಕೆಗೆ ಸಿದ್ಧ: ಕಾಂಗ್ರೆಸ್​ ತೊರೆದ ಮಾಜಿ ಸಿಎಂ ಉವಾಚ

    2 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ: ಕಾಮುಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts