More

    45 ದಿನಗಳು ಗತಿಸಿದವು; ಎಸ್​ಪಿ ಬಾಲಸುಬ್ರಮಣ್ಯಂ ಆರೋಗ್ಯ ಈಗ ಹೇಗಿದೆ?

    ಚೆನ್ನೈ: ಲೆಜಂಡರಿ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಕರೊನಾ ಹಿನ್ನೆಲೆಯಲ್ಲಿ ಚೆನ್ನೈ ಎಂಜಿಎಂ ಆಸ್ಪತ್ರೆಗೆ ಆಗಸ್ಟ್​ 5ರಂದೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಸಹಜ ಒಂದಷ್ಟು ಕಾಯಿಲೆಗಳು ಬಾಧಿಸಿರುವುದರಿಂದ ಚೇತರಿಕೆ ತಡವಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕರೊನಾ ವರದಿ ಸಹ ನೆಗೆಟಿವ್​ ಬಂದಿದೆ. ಹೀಗಿರುವಾಗಲೇ ಅಪ್ಪನ ಆರೋಗ್ಯದ ಬಗ್ಗೆ ಪುತ್ರ ಎಸ್​ಪಿ ಚರಣ್​ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಬಾಲನಟಿ ನಾಯಕಿ ಆದಾಗ…

    ‘ಈ ಮೊದಲೇ ಹೇಳಿದಂತೆ ಅಪ್ಪನ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆಗಳಿಲ್ಲ. ಆದರೆ, ಈ ಮೊದಲಿದಷ್ಟು ಆತಂಕ ಈಗಿಲ್ಲ. ಎಲ್ಲವೂ ನಾರ್ಮಲ್​ ಆಗಿದೆ. ಇನ್ನೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಬೇಕಿದೆ. ಶ್ವಾಸಕೋಶದ ಚೇತರಿಕೆ ಸದ್ಯಕ್ಕೆ ಬಹುಮುಖ್ಯವಾಗಿದೆ. ವೆಂಟಿಲೇಟರ್​ ಮೂಲಕವೇ ಅವರಿನ್ನೂ ಉಸಿರಾಡುತ್ತಿದ್ದಾರೆ. ವೈದ್ಯರು ನಿತ್ಯ 15ರಿಂದ 20 ನಿಮಿಷ ಫಿಸಿಯೋಥೆರಪಿ ಮಾಡಿಸುತ್ತಿದ್ದಾರೆ. ಶುಕ್ರವಾರದಿಂದ ಆಹಾರ ಸೇವನೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಚರಣ್​.

    ಆಗಸ್ಟ್​ 5ರಂದು ಕರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್​ಪಿಬಿ ಬಳಿಕ ಒಂದು ವಾರದ ಬಳಿಕ ಅವರನ್ನು ತೀವ್ರ ನಿಗಾ ಘಟಕಕ್ಕೆ ರವಾನೆ ಮಾಡಲಾಗಿತ್ತು. ಸೆ.7 ರಂದು ಕರೊನಾ ವರದಿ ನೆಗೆಟಿವ್​ ಬಂದಿತ್ತು. ಅಷ್ಟೇ ಅಲ್ಲ ಐಪಿಎಲ್​ ಪಂದ್ಯಕ್ಕೆ ಕಾಯುತ್ತಿರುವ ಬಗ್ಗೆಯೂ ಎಸ್​ಪಿಬಿ ಹೇಳಿಕೊಂಡಿದ್ದರು. (ಏಜೆನ್ಸೀಸ್​)

    ಲವ್ ಜಿಹಾದ್​ಗೆ ಸಿಲುಕಿ ಸಂಜನಾ ಮತಾಂತರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts