More

    ಬಾಲನಟಿ ನಾಯಕಿ ಆದಾಗ…

    ಬೆಂಗಳೂರು‘ಮರೆಯಾದ ಅಮ್ಮನ ಆಸೆ ಈಡೇರಿಸುವುದಕ್ಕೆ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿಯೇ ನೆಲೆ ಕಂಡುಕೊಳ್ಳಬೇಕೆಂಬುದು ನನ್ನ ಬಯಕೆ …’ ಅಮ್ಮನ ಆ ಕನಸನ್ನು ನನಸು ಮಾಡಿದ ಖುಷಿಯಲ್ಲಿದ್ದಾರೆ ನಟಿ ಬಿಂದುಶ್ರೀ. ಯಾರು ಈ ಬಿಂದುಶ್ರೀ? ಎಂಬ ಪ್ರಶ್ನೆ ಎದುರಾದರೆ ಅದಕ್ಕೆ ಉತ್ತರ ಇಲ್ಲಿದೆ. ಬಿಂದುಶ್ರೀ ಚಿತ್ರರಂಗಕ್ಕೆ ಬಂದು 20 ವರ್ಷಗಳಾಗಿವೆ.

    ಒಂದಲ್ಲ, ಎರಡಲ್ಲ ಬರೋಬ್ಬರಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಧಾರಾವಾಹಿ ಕ್ಷೇತ್ರವೂ ಅವರಿಗೆ ಹೊಸದೇನಲ್ಲ. ಇದೀಗ ಹಲವು ವರ್ಷಗಳ ಬಳಿಕ ‘ಮಹಿಷಾಸುರ’ ಮತ್ತು ‘ಲಡ್ಡು’ ಚಿತ್ರಗಳಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ‘ಎಲ್​ಕೆಜಿ, ಯುಕೆಜಿ ಓದುತ್ತಿದ್ದಾಗಲೇ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದೆ. ಮುಂದೊಂದು ದಿನ ಮಗಳು ನಟಿಯಾಗಬೇಕು ಎಂಬುದು ಅಮ್ಮನ ಬಯಕೆಯಾಗಿತ್ತು. ಮಗಳು ಓದಿನಲ್ಲಿ ಮುಂದಿರಬೇಕು ಎಂಬುದು ಅಪ್ಪನ ಆಸೆ. ಹಾಗಾಗಿ ಏಳನೇ ತರಗತಿಗೆ ನಟನೆ ಕೈ ಬಿಟ್ಟೆ. ಬಳಿಕ ಇಂಜಿನಿಯರಿಂಗ್ ಮಾಡಿ, ಒಳ್ಳೇ ಕೆಲಸವನ್ನೂ ಗಿಟ್ಟಿಸಿಕೊಂಡೆ. ದುರದೃಷ್ಟವಶಾತ್ ನಾಲ್ಕು ವರ್ಷದ ಹಿಂದೆ ಅಮ್ಮ ತೀರಿಹೋದರು. ಅವರ ಆಸೆ ಮಾತ್ರ ಹಾಗೇ ಇತ್ತು. ಇದೀಗ ನಾಯಕಿಯಾಗಿ ಅವರ ಆಸೆಯನ್ನು ಈಡೇರಿಸಿದ ತೃಪ್ತಿ ನನಗಿದೆ’ ಎಂಬುದು ಬಿಂದುಶ್ರೀ ಮಾತು. ‘ಶ್ರೀರಸ್ತು ಶುಭಮಸ್ತು’, ‘ಶಿವಪ್ಪನಾಯಕ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಬಿಂದುಶ್ರೀ, ‘ಗೌತಮಿ’, ‘ಕಾವ್ಯಾಂಜಲಿ’ ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಸದ್ಯ ‘ಮಹಿಷಾಸುರ’ ಮತ್ತು ‘ಲಡ್ಡು’ ಸಿನಿಮಾಗಳಲ್ಲಿ ನಟಿಸಿರುವ ಅವರು, ‘ಕೇಸ್ ಸುಶೀಲ’ ಚಿತ್ರದಲ್ಲಿ ವಿಜ್ಞಾನಿಯ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿ ಕೊಂಡಿರುವ ಅವರು, ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಾರೆ.

    ನಿತಿನ್‌ಗೆ ನಭಾ ನಾಯಕಿ … ಅಂಧಾದುನ್ ರಿಮೇಕ್‌ನಲ್ಲಿ ಕನ್ನಡತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts