More

    ಕೃಷ್ಣನೆದುರು ಹಾಡುತ್ತ ಪ್ರಾರ್ಥನೆ ಸಲ್ಲಿಸಿದ್ದರು!

    ಉಡುಪಿ: ಗಾನ ಗಾರುಡಿಗ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಉಡುಪಿಗೆ ಹಲವು ಬಾರಿ ಬಂದು, ಸಂಗೀತ ಪ್ರದರ್ಶನ ನೀಡಿದ್ದರು. ಕೊನೆಯದಾಗಿ 2016 ಜೂನ್ 4ರಂದು ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಅವಧಿಯಲ್ಲಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದ್ದರು.

    70 ಹುಟ್ಟುಹಬ್ಬದ ದಿನದಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ್ದ ಅವರು, ಕೃಷ್ಣ ಮಠಕ್ಕೂ ಭೇಟಿ ನೀಡಿ ದೇವರ ಎದುರು ಹಾಡಿ ಪ್ರಾರ್ಥನೆ ಸಲ್ಲಿಸಿದ್ದರು. ಚಂದ್ರಶಾಲೆಯಲ್ಲಿ ಕನಕದಾಸರು ರಚಿಸಿದ ಬಾರೋ ಕೃಷ್ಣಯ್ಯ ಮತ್ತು ವ್ಯಾಸರಾಜ ತೀರ್ಥರು ರಚಿಸಿದ ಕೃಷ್ಣ ನೀ ಬೇಗನೇ ಬಾರೊ ಎಂಬ ಪದಗಳನ್ನು ಸುಶ್ರಾವ್ಯವಾಗಿ ಹಾಡಿದ್ದರು.

    ಪೇಜಾವರ ಶ್ರೀಗಳ ಆಶೀರ್ವಾದ ಪಡೆದಿದ್ದರು ಎಂದು ಪೇಜಾವರ ಮಠದ ಆಪ್ತರಾದ ವಾಸುದೇವ ಭಟ್ ಪೆರಂಪಳ್ಳಿ ಸ್ಮರಿಸಿದ್ದಾರೆ.
    2004 ಜೂನ್ 18ರಂದು ಅದಮಾರು ಮಠದ ಪರ್ಯಾಯ ಸಂದರ್ಭ ರಾಜಾಂಗಣದಲ್ಲಿ ಭಕ್ತಿ ರಸಮಂಜರಿಯನ್ನೂ ನಡೆಸಿಕೊಟ್ಟಿದ್ದರು. 1996ರಲ್ಲಿ ನಗರದ ಬೋರ್ಡ್ ಹೈಸ್ಕೂಲ್ ಡಾ.ರಾಜ್ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿಯೂ ಎಸ್‌ಪಿಬಿ ಹಾಡಿದ್ದರು.

    ಎಸ್‌ಪಿಬಿ ತುಳು ಭಕ್ತಿಸುಧೆ: ಎಸ್‌ಪಿಬಿ ಹಾಡಿದ 2001ರಲ್ಲಿ ಆಲ್ಬಂ ಕ್ಯಾಸೆಟ್ ‘ಗಂಧಪುರ್ಸದ’ ತುಳು ಭಕ್ತಿಗಾಯನ ಮೋಡಿ ಮಾಡಿತ್ತು. ಮೋಕೆಡೇ ಬರುವಾನಾ ಉಡುಪಿದಾ ಕೃಷ್ಣ… ಮಹಾದೇವಿ ಕಟೀಲೇಶ್ವರಿ… ರಜತಗಿರಿ ಪನ್ಪಿನ ಓಲಾಂಡ್… ಸೇರಿದಂತೆ ಆಲ್ಬಂನಲ್ಲಿದ್ದ ಒಂಬತ್ತು ಭಕ್ತಿಗೀತೆಗಳು ಲಕ್ಷಾಂತರ ಭಕ್ತರ ಮನತಣಿಸಿದ್ದವು. ಈ ಗೀತೆಗಳು ಯ್ಯೂಟ್ಯೂಬ್‌ನಲ್ಲಿಯೂ ಜನಪ್ರಿಯವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts