More

    ಬಿತ್ತನೆ ಬೀಜ, ರಸಗೊಬ್ಬರ ಲಭ್ಯ

    ಕಡೂರು: ತಾಲೂಕಿನಲ್ಲಿ ಪೂರ್ವ ಮುಂಗಾರು ಉತ್ತಮವಾಗಿದ್ದು, ರೈತರಿಗೆ ಅವಶ್ಯವಾದ ಹೆಸರು, ಉದ್ದು, ಅಲಸಂದೆ, ಸೂರ್ಯಕಾಂತಿ ಹಾಗೂ ಶೇಂಗಾ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಸಹಾಯಕ ನಿರ್ದೇಶಕ ಎಂ.ಅಶೋಕ್ ತಿಳಿಸಿದ್ದಾರೆ.

    ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಎಣ್ಣೆಕಾಳು ಯೋಜನೆಯಡಿ ಸೂರ್ಯಕಾಂತಿ ಬೆಳೆಯನ್ನು ಇಲಾಯಿಂದ ವಿಶೇಷವಾಗಿ ಪ್ರೋತ್ಸಾಹಿಸಲು ಸುಧಾರಿತ ಓಉಖಏ ತಳಿಯ 2 ಕೆ.ಜಿ ಪ್ಯಾಕಿನ ಬೀಜವನ್ನು ರಿಯಾಯಿತಿ ದರದಲ್ಲಿ 450 ರೂ.ಗೆ ವಿತರಿಸಲಾಗುತ್ತಿದೆ. ಇಳುವರಿ ಹೆಚ್ಚಿಸಲು ಬೀಜೋಪಚಾರ, ಜೈವಿಕ ಗೊಬ್ಬರ, ಲಘು ಪೋಷಕಾಂಶಗಳನ್ನು ಶೇ.50ರ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಎಕರೆಗೆ ಸುಮಾರು 4220 ರೂ. ಉಳಿತಾಯವಾಗುವುದು ಮತ್ತು ಪರಾಗಸ್ಪರ್ಶ ಜೇನುಪೆಟ್ಟಿಗೆ ತೆಗೆದುಕೊಳ್ಳುವ ರೈತರಿಗೆ ನೇರವಾಗಿ ಸಹಾಯಧನ ರೂಪದಲ್ಲಿ 2000 ನೀಡಲಾಗುವುದು. ರೈತರು ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂರ್ಪಕಿಸಬಹುದು ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts