More

    ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಚಿತ್ರದುರ್ಗದಲ್ಲಿ ಮತದಾನ ಆರಂಭ

    ಚಿತ್ರದುರ್ಗ: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಮತದಾನ ಜಿಲ್ಲೆಯ 32 ಮತಗಟ್ಟೆಗಳಲ್ಲೂ ಆರಂಭವಾಗಿದ್ದು,ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಳಗ್ಗೆಯಿಂದಲೇ ತುರುಸಿನ ಮತದಾನ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಸಹಿತ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಕೊನೆ ಕ್ಷಣದಲ್ಲಿ ಮತದಾರ ಮನ ಪರಿವರ್ತನೆ ಕಸರತ್ತಿನಲ್ಲಿ ತೊಡಗಿದ್ದರು.

    ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಗರನ್ನು,ಕಾರ‌್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದರು. ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ,ಬಿಜೆಪಿಯ ಚಿದಾನಂದ ಎಂ.ಗೌಡ, ಕಾಂಗ್ರೆಸ್ಸಿನ ರಮೇಶ್ ಬಾಬು,ಪಕ್ಷೇತರ ಡಾ.ಕೆ.ಎಂ.ಸುರೇಶ್,ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ಸೇರಿದಂತೆ ಹದಿನೈದು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

    13,681 ಪುರುಷ ಹಾಗೂ 7342 ಮಹಿಳಾ ಹಾಗೂ ಇತರೆ 1 ಮತದಾರರು ಸೇರಿದಂತೆ ಜಿಲ್ಲೆಯ 21,021 ಮತದಾರರು ಇದ್ದಾರೆ. ಮೊಳಕಾಲ್ಮೂರು-3,ಚಳ್ಳಕೆರೆ -6,ಚಿತ್ರದುರ್ಗ-8,ಹಿರಿಯೂರು -6,ಹೊಸದುರ್ಗ-5 ಹಾಗೂ ಹೊಳಲ್ಕೆರೆ ತಾಲೂಕಲ್ಲಿ 4 ಮತಗಟ್ಟೆ ಗಳಿವೆ. ಎಲ್ಲ ಮತಗಟ್ಟೆಗಳಿಗೂ ಪಿಪಿಇ ಸಹಿತ ಮೆಡಿಕಲ್ ಕಿಟ್ ಒದಗಿಸಲಾಗಿದ್ದು,ತಾಪಮಾನ ಪರೀಕ್ಷೆ,ಸ್ಯಾನಿಟೈಸೆಷನ್, ಪ್ರತಿ ಮತದಾರರಿಗೆ ಒಂದು ಹ್ಯಾಂಡ್ ಗ್ಲಾಸ್ ಕೊಡಲಾಗುತ್ತದೆ ಇತ್ಯಾದಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಚುನಾವಣಾ ಆಯೋಗ ತೆಗೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts