More

    1.5 ಲಕ್ಷ ಟಿನ್​ ಕೋಕ್ ಕುಡಿದ ಮಹಿಳೆಯ ವಯಸ್ಸು 74!

    ಸಿಯೋಲ್​: ಬರೋಬ್ಬರಿ 1.5 ಲಕ್ಷ ಟಿನ್ ಕೋಕ್​ ಕುಡಿದ ಈ ಮಹಿಳೆಯ ವಯಸ್ಸು 74! ಉಸಿರಾಟದಷ್ಟೇ ಸಹಜವಾಗಿ ಕೋಕ್​ ಈಕೆಯ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆಯಂತೆ. ದಕ್ಷಿಣ ಕೊರಿಯಾದ ಯೂಟ್ಯೂಬ್ ಚಾನೆಲ್​ ಎಕ್ಸ್​ ಎಸ್​ಬಿಎಸ್​ ಈಕೆಯ ಕುರಿತ ನ್ಯೂಸ್ ಸ್ಟೋರಿಯೊಂದನ್ನು ಚಿತ್ರೀಕರಿಸಿ ಪ್ರಸಾರ ಮಾಡಿತ್ತು. ಹೀಗಾಗಿ ಈಕೆಯ ವಿಚಿತ್ರ ಹವ್ಯಾಸ ಜಗತ್ತಿನಲ್ಲೆಡೆ ಸುದ್ದಿಯಾಯಿತು.

    ಇದನ್ನೂ ಓದಿ:  ಐಎಸ್​ಐಎಸ್ ಕಮಾಂಡರ್ ಜಿಯಾ ಉಲ್ ಹಕ್ ಸೇರಿ ಮೂವರು ಪ್ರಮುಖರು ಆಫ್ಘನ್​ನಲ್ಲಿ ಸೆರೆ

    ಒಂದೂವರೆ ಲಕ್ಷ ಟಿನ್ ಕೋಕಾ ಕೋಲಾವನ್ನು ಒಂದೇ ಸಲ ಕುಡಿದಿಲ್ಲ ಈಕೆ. ನೀರು ಕುಡಿಯಬೇಕೆನಿಸಿದಾಗೆಲ್ಲ ಈಕೆ ಕುಡಿಯುವುದು ಕೋಕಾ ಕೋಲಾವನ್ನೇ. ಹಾಗೆಂದು ಇದೇನೂ ಬಾಲ್ಯದಿಂದಲೇ ಶುರುವಾದ ಹವ್ಯಾಸವೇನಲ್ಲ. ಕಳೆದ ನಲುವತ್ತು ವರ್ಷಗಳಿಂದ ಈ ಹವ್ಯಾಸಕ್ಕೆ ಅಂಟಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಕೋಕ್ ಕುಡಿಯುವ ಹವ್ಯಾಸ ಶುರುವಾದದ್ದನ್ನು ಈಕೆ ವಿವರಿಸುವುದು ಹೀಗೆ-  ನನಗಾಗ 34 ವರ್ಷ ವಯಸ್ಸು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪತಿ ಅಗಲಿದ ಆ ಹೊತ್ತು, ಮನಸ್ಸಿಗೆ ತುಂಬಾ ವೇದನೆಯಾಗಿತ್ತು. ಮನೋವೇದನೆ ನೀಗಿಸಿಕೊಳ್ಳಲು ಅನೇಕರು ಮದ್ಯಪಾನ ಮಾಡುತ್ತಾರೆ. ಆದರೆ ನನಗಂದು ಯಾಕೋ ಕೋಕ್ ಕುಡಿಯಬೇಕು ಎಂದೆನಿಸಿತು. ಹಾಗೆ ಮೊದಲ ಬಾರಿಗೆ ಕೋಕ್ ಕುಡಿದೆ. ನಂತರ ಬೇಜಾರಾದಾಗ ಎಲ್ಲ ಕೋಕ್ ಕುಡಿಯಲಾರಂಭಿಸಿದೆ. ಪತಿಯನ್ನು ಕಳೆದುಕೊಂಡ ದುಃಖವನ್ನು ಮರೆಯಲು ಆಗಾಗ ಕೋಕ್ ಕುಡಿಯುತ್ತಿದೆ. ಬದುಕು ಹಾಗೆಯೇ ಸಾಗುತ್ತಿತ್ತು.

    ಇದನ್ನೂ ಓದಿ: 533 ಜನರಿಗೆ COVID19 ಕೊಟ್ಟವ ಒಬ್ಬನೇ- ಘಾನಾದ ಅಧ್ಯಕ್ಷರ ಕಳವಳ !

    ಹಾಗಿರುವಾಗಲೇ ಮತ್ತೊಂದು ಆಘಾತ ಕಾದಿತ್ತು ನನಗೆ. ಅದೊಂದು ದಿನ ಅಪಘಾತದ ಸುದ್ದಿ ಕಿವಿಗಪ್ಪಳಿಸಿತ್ತು. ನನ್ನ ಪುತ್ರ ಅದರಲ್ಲಿ ಅಸುನೀಗಿದ್ದ. ಹೀಗೆ ಎರಡು ಆಘಾತಗಳನ್ನು ತಡೆಯದಾದಾಗ ಹೆಚ್ಚು ಹೆಚ್ಚು ಕೋಕ್ ಕುಡಿಯಲಾರಂಭಿಸಿದೆ. ದಿನವೊಂದರ ಕನಿಷ್ಠ 10 ಟಿನ್ ಕೋಕ್ ಕುಡಿದಿದ್ದೇನೆ. ಕಳೆದ ನಲವತ್ತು ವರ್ಷಗಳ ಅವಧಿಯಲ್ಲಿ ಹೆಚ್ಚು ಕಡಿಮೆ 1.5 ಲಕ್ಷ ಟಿನ್ ಕೋಕ್ ಕುಡಿದು ಮುಗಿಸಿದ್ದೇನೆ. 1.5 ಲಕ್ಷ ಟಿನ್ ಎಂದರೆ ಹೆಚ್ಚು ಕಡಿಮೆ 37,500 ಲೀಟರ್​ ಕೋಕ್​ ನನ್ನ ಹೊಟ್ಟೆ ಸೇರಿದೆ. ಈಗಂತೂ ಕೋಕಾ ಕೋಲಾ ನನ್ನ ಉಸಿರಿನಷ್ಟೇ ಇಷ್ಟವಾಗಿ ಬಿಟ್ಟಿದೆ. ಇಷ್ಟು ದೀರ್ಘ ಅವಧಿಗೆ ಅದನ್ನು ಸೇವಿಸಿದ್ದರಿಂದ ನನಗೇನೂ ಆಗಿಲ್ಲ ಎಂದು ಹೇಳುವ ಆಕೆಯನ್ನು ಇತ್ತೀಚೆಗೆ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗಿ ಅನ್ನನಾಳ, ಕರುಳು, ಹೊಟ್ಟೆಯೊಳಗೆ ಅಲ್ಸರ್​ ಆಗಿರುವುದು ಕಂಡುಬಂದಿದೆ. ಆದರೆ, ಅದಕ್ಕೆ ನಿಖರ ಕಾರಣವೇನು ಎಂಬುದನ್ನು ವೈದ್ಯರು ತಿಳಿಸಿಲ್ಲ. ಹೀಗಾಗಿ ಈಕೆ ಈಗ ಅಲ್ಲಿನ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. (ಏಜೆನ್ಸೀಸ್)

    ಪತ್ರಕರ್ತೆಯರಿಬ್ಬರಿಗೆ ಚೀನಾ ತೋರಿಸಿದ ಅಮೆರಿಕ ಅಧ್ಯಕ್ಷ – ಸುದ್ದಿಗೋಷ್ಠಿ ಅರ್ಧಕ್ಕೇ ಖತಂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts