More

    ಎಬಿ ಡಿವಿಲಿಯರ್ಸ್‌ನ ವೇಗದ ಶತಕ ದಾಖಲೆ ಮುರಿದ ಆಸೀಸ್ ಯುವ ಬ್ಯಾಟರ್!

    ಅಡಿಲೇಡ್: ಆಸ್ಟ್ರೇಲಿಯಾ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಯುವ ಬ್ಯಾಟರ್ ಜೇಕ್ ್ರೇಸರ್ ಮೆಕ್‌ಗುರ್ಕ್ (125 ರನ್, 38 ಎಸೆತ, 10 ಬೌಂಡರಿ, 13 ಸಿಕ್ಸರ್) ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನೂತನ ದಾಖಲೆ ರಚಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ಮೇನಿಯಾ ತಂಡ 9 ವಿಕೆಟ್‌ಗೆ 435 ರನ್ ಪೇರಿಸಿತು. ಬೃಹತ್ ಮೊತ್ತದ ಚೇಸಿಂಗ್ ನಡೆಸಿದ ದಕ್ಷಿಣ ಆಸ್ಟ್ರೇಲಿಯಾ ತಂಡದ ಪರ 21 ವರ್ಷದ ಜೇಕ್ ್ರೇಸರ್ ಮೆಕ್‌ಗುರ್ಕ್ ಸ್ಫೋಟಕ ಬ್ಯಾಟಿಂಗ್ ನಡೆಸಿ 29 ಎಸೆತಗಳಲ್ಲೇ ಶತಕ ಪೂರೈಸಿದರು. ಈ ಮೂಲಕ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ 31 ಎಸೆತಗಳಲ್ಲಿ ಶತಕ ಸಿಡಿಸಿದ್ದ ಏಕದಿನ ಕ್ರಿಕೆಟ್‌ನ ಅತಿವೇಗದ ಶತಕದ ದಾಖಲೆ ಮುರಿದರು. 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮೆಕ್‌ಗುರ್ಕ್, ನಂತರದ 11 ಎಸೆತಗಳಲ್ಲೇ ಮತ್ತೆ 50 ರನ್ ಕಸಿದರು. ಇದರ ನಡುವೆಯೂ ದಕ್ಷಿಣ ಆಸ್ಟ್ರೇಲಿಯಾ 398 ರನ್‌ಗಳಿಗೆ ಸರ್ವಪತನ ಕಂಡು ಸೋಲು ಅನುಭವಿಸಿತು. ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಮ್ 49 ಎಸೆತಗಳಲ್ಲೇ ಶತಕ ಸಿಡಿಸಿ ದಾಖಲೆ ಬರೆದ ಮರುದಿನವೇ ಈ ಸಾಧನೆ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts