More

    ಟಾಯ್ಲೆಟ್​ನಲ್ಲಿದ್ದಾಗಲೇ ಮಗು ಜನನ; ಹುಟ್ಟಿದ ಮಗುವನ್ನು ಮುದ್ದಾಡುವುದು ಬಿಟ್ಟು ಹೊಡೆದು ಕೊಂದ ತಾಯಿ!

    ಕೇಪ್ ಟೌನ್: ಮಗು ಹುಟ್ಟಿದ ತಕ್ಷಣ ಅದನ್ನು ಎತ್ತಿ ಮುದ್ದಾಡುವ ತಾಯಿಯನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆ ತಾನೇ ಜನ್ಮ ಕೊಟ್ಟ ಮಗುವಿಗೆ ಹೊಡೆದು ಹೊಡೆದು ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಹಾಗೆ ಮಾಡುವುದಕ್ಕೆ ಕಾರಣವೇನು? ಮುಂದೆ ಓದಿ..

    ದಕ್ಷಿಣ ಆಫ್ರಿಕಾದ ಲಿಂಪೋಪೋ ಹೆಸರಿನ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 30 ವರ್ಷದ ಮಹಿಳೆ ಕುಂಜನಿ ಹೊಟ್ಟೆ ಇತ್ತೀಚೆಗೆ ದೊಡ್ಡದಾಗತೊಡಗಿದ್ದನ್ನು ನೋಡಿ ಆಕೆ ತನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋಗಿದ್ದಳು. ಅಲ್ಲಿ ವೈದ್ಯರಲ್ಲಿ ಸಮಸ್ಯೆ ಹೇಳಿಕೊಂಡಾಗ ಪರೀಕ್ಷೆ ಮಾಡಿದ ಅವರು ಆಕೆ ಗರ್ಭಿಣಿಯಾಗಿರುವ ವಿಚಾರ ತಿಳಿಸಿದ್ದಾರೆ. ಆದರೆ ಅದಕ್ಕೆ ಒಪ್ಪದ ಆಕೆ, ತಾನು ಗರ್ಭಿಣಿ ಆಗಿರಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾಳೆ. ಆದರೆ ವೈದ್ಯರು ನೀವು ಗರ್ಭಿಣಿಯಾಗಿರುವುದು ಸತ್ಯ ಎಂದು ಹೇಳಿ ವಾಪಸು ಕಳಿಸಿದ್ದಾರೆ.

    ಎರಡು ದಿನ ಬಿಟ್ಟು ಮತ್ತೆ ವೈದ್ಯರ ಬಳಿ ತೋರಿಸಲೆಂದು ತಾಯಿ ಮಗಳು ಆಸ್ಪತ್ರೆ ಕಡೆ ಮುಖ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕುಳಿತಿದ್ದಾಗ ತಾನು ಟಾಯ್ಲೆಟ್​ಗೆ ಹೋಗಿ ಬರುವುದಾಗಿ ಹೇಳಿ ಮಗಳು ಹೋಗಿದ್ದಾಳೆ. ಟಾಯ್ಲೆಟ್​ನಲ್ಲಿ ಶೌಚಕ್ಕೆ ಕುಳಿತಾಗ ಆಕೆಗೆ ಹೆರಿಗೆಯಾಗಿದೆ. ಆಗ ತಾನೆ ಜನನವಾದ ಮಗುವನ್ನು ಕೈನಲ್ಲಿ ಎತ್ತಿಕೊಂಡ ಮಹಿಳೆ ಮಗುವಿಗೆ ಮನಸೋಇಚ್ಛೆ ಹೊಡೆದಿದ್ದಾಳೆ.

    ಟಾಯ್ಲೆಟ್​ನಲ್ಲಿ ಮಗು ಅಳುವ ಸದ್ದನ್ನು ಕೇಳಿದ ಕ್ಲೀನರ್ ಒಬ್ಬರು ಆ ವಿಚಾರವನ್ನು ವೈದ್ಯರಿಗೆ ತಿಳಿಸಿದ್ದಾಳೆ. ತಕ್ಷಣ ಹೋಗಿ ಬಾಗಿಲು ಒಡೆದಾಗ, ಅಲ್ಲಿ ಮಗು ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಮಗು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮಗುವನ್ನು ಕೊಂದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

    ಮಕ್ಕಳೊಂದಿಗೇ ಕುಳಿತು ಅಶ್ಲೀಲ ವಿಡಿಯೋಗಳನ್ನ ನೋಡ್ತಾರಂತೆ ಈ ಸಿಂಗರ್!

    30 ಕೆಜಿಯ ಕಬ್ಬಿಣದ ಚೈನ್​ನಲ್ಲಿ ಹೆಂಡತಿಯನ್ನು ಕಟ್ಟಿಟ್ಟ ಗಂಡ! 3 ತಿಂಗಳ ಕಾಲ ಒದ್ದಾಡಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts