More

    ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಿದ ಚುನಾವಣಾ ಆಯೋಗ; ಕಾರಣ ತಿಳಿಯಿರಿ!

    ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರು ಮೇ 29 ರಂದು ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವಿರುವುದರಿಂದ ಅವರನ್ನು ಅಭ್ಯರ್ಥಿ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದೆ. ಆಯೋಗವು ಗುರುವಾರ ಮಾಧ್ಯಮಗೋಷ್ಠಿಯನ್ನು ನಡೆಸಿತು. ಇದರಲ್ಲಿ ಜುಮಾ ಅವರ ಉಮೇದುವಾರಿಕೆಯ ವಿರುದ್ಧ ಸಲ್ಲಿಸಲಾದ ಆಕ್ಷೇಪಣೆಯನ್ನು ಎತ್ತಿಹಿಡಿದಿದೆ ಎಂದು ಹೇಳಿದೆ.

    ಮೇಲ್ಮನವಿ ಸಲ್ಲಿಸಲು ಸಮಯ
    ಈ ಮೊದಲೇ ಹೇಳಿದ ಹಾಗೆ ಜುಮಾ ಅವರ ಮೇಲೆ ಕ್ರಿಮಿನಲ್ ಪ್ರಕರಣವಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸಲಾಗಿದೆ ಎಂದು ಐಇಸಿ ಹೇಳಿದೆ. “ನಾವೆಲ್ಲರೂ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಂಡಿದ್ದೇವೆ. ಇವು ನಾವು ಪ್ರತ್ಯೇಕವಾಗಿ ವ್ಯವಹರಿಸುವ ವಿಷಯಗಳಲ್ಲ. ಇಲ್ಲಿ ನಾವು ಆಕ್ಷೇಪಣೆಯನ್ನು ಸಲ್ಲಿಸಬಹುದಾದ ಕಾನೂನಿನ ನಿಬಂಧನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಜುಮಾಗೆ ಏಪ್ರಿಲ್ 2 ರವರೆಗೆ ಸಮಯವಿದೆ” ಎಂದು ಐಇಸಿ ಅಧ್ಯಕ್ಷ ಮೊಸೊಥೊ ಮೋಪ್ಯಾ ಹೇಳಿದರು.

    ಪಕ್ಷದಿಂದ ವಜಾ
    2021 ರಲ್ಲಿ ಜುಮಾ ಅವರಿಗೆ ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯವು ತನಿಖಾ ಆಯೋಗದ ವಿಚಾರಣೆಯನ್ನು ಮಧ್ಯದಲ್ಲಿಯೇ ಬಿಟ್ಟಿದ್ದಕ್ಕಾಗಿ 15 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತು ಎಂಬುದು ಗಮನಾರ್ಹ. ಜುಮಾ ಅವರನ್ನು ಅವರ ಪಕ್ಷ ‘ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್’ (ANC) 2018 ರಲ್ಲಿ ವಜಾಗೊಳಿಸಿತ್ತು. ಸ್ವಯಂ ದೇಶಭ್ರಷ್ಟ ಗುಪ್ತಾ ಕುಟುಂಬದ ಜೊತೆ ಜುಮಾ ಆತ್ಮೀಯತೆಯಿಂದ ಬಗ್ಗೆ ಜನರು ಸಿಟ್ಟಾಗಿದ್ದರು. ಅದರ ನಂತರವೇ ಎಎನ್​​ಸಿ ಜುಮಾ ಅವರನ್ನು ಪಕ್ಷದಿಂದ ವಜಾಗೊಳಿಸುವ ಕ್ರಮವನ್ನು ತೆಗೆದುಕೊಂಡಿತು. ಗುಪ್ತಾ ಕುಟುಂಬವು ಶತಕೋಟಿ ಮೌಲ್ಯದ ‘ಎಸ್ಕಾಮ್’ ನಂತಹ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ವಂಚಿಸಿದ ಆರೋಪವನ್ನು ಹೊಂದಿದೆ. ಇದೀಗ ಈ ಸಂಸ್ಥೆಗಳು ಈಗ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಅಲ್ಲದೆ ವಿದ್ಯುತ್ ವಿತರಣಾ ಸಂಸ್ಥೆ ‘ಎಸ್ಕಾಂ’ ದೇಶದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದೆ ರೈಲು ಸಂಚಾರವೂ ಸ್ಥಗಿತಗೊಂಡಿದೆ.

    ಎಲ್.ಕೆ. ಅಡ್ವಾಣಿ, ನರಸಿಂಹರಾವ್ ಸೇರಿ ಹಲವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts