More

    ಇಂಗ್ಲೆಂಡ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿದೊಡ್ಡ ಸೋಲುಣಿಸಿದ ಆಫ್ರಿಕಾ: ಹಲವು ದಾಖಲೆ ಬರೆದ ಹರಿಣ ಪಡೆ !

    ಮುಂಬೈ: ಆಘಾತಕಾರಿ ಸೋಲಿನಿಂದ ಪುಟಿದೆದ್ದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಬೃಹತ್ ಗೆಲುವಿನ ದಾಖಲೆಯೊಂದಿಗೆ ಲಯಕ್ಕೆ ಮರಳಿದೆ. ಹೆನ್ರಿಕ್ ಕ್ಲಾಸೆನ್ (109 ರನ್, 67 ಎಸೆತ, 12 ಬೌಂಡರಿ, 4 ಸಿಕ್ಸರ್ ) ಸ್ಫೋಟಕ ಶತಕ, ಮಾರ್ಕೋ ಜಾನ್ಸೆನ್ (75* ರನ್, 42 ಎಸೆತ, 3 ಬೌಂಡರಿ, 6 ಸಿಕ್ಸರ್, 35ಕ್ಕೆ 2 ವಿಕೆಟ್) ಆಲ್ರೌಂಡ್ ಆಟ ಹಾಗೂ ಬೌಲರ್‌ಗಳ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು 229 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಇದುವರೆಗೆ ಆಡಿದ 4 ಪಂದ್ಯಗಳಲ್ಲಿ 3ನೇ ಸೋಲು ಅನುಭವಿಸಿದ ಜೋಸ್ ಬಟ್ಲರ್ ಬಳಗ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಹಾದಿ ಜಟಿಲಗೊಂಡಿದೆ.

    ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ದಾಖಲಾದ ದಾಖಲೆಗಳಿವು

    229: ಇಂಗ್ಲೆಂಡ್‌ಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ರನ್ ಅಂತರದಲ್ಲಿ ಅತಿದೊಡ್ಡ ಸೋಲು ಇದಾಗಿದೆ. ಕಳೆದ ವರ್ಷ ಆಸೀಸ್ ಎದುರು 221 ರನ್‌ಗಳಿಂದ ಸೋತಿದ್ದು ಹಿಂದಿನ ಗರಿಷ್ಠ.

    399: ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಂಡವೊಂದರ ಗರಿಷ್ಠ ಮೊತ್ತ ಇದಾಗಿದೆ. ನ್ಯೂಜಿಲೆಂಡ್ 398 ರನ್ ಕಲೆಹಾಕಿದ್ದು ಹಿಂದಿನ ದೊಡ್ಡ ಮೊತ್ತ.

    4: ಹೆನ್ರಿಕ್ ಕ್ಲಾಸೆನ್ ಹಾಲಿ ವಿಶ್ವಕಪ್‌ನಲ್ಲಿ ದ.ಆಫ್ರಿಕಾದ 4ನೇ ಶತಕ ಸಾಧಕ ಎನಿಸಿದರು. ಕ್ವಿಂಟನ್ ಡಿಕಾಕ್ (2), ರಸ್ಸೀ ವಾನ್ ಡರ್ ಡಸೆನ್, ಏಡೆನ್ ಮಾರ್ಕ್ರಮ್ ಹಿಂದಿನ ಮೂವರು.

    6. ದ.ಆಫ್ರಿಕಾ ಏಕದಿನ ವಿಶ್ವಕಪ್‌ನಲ್ಲಿ 6ನೇ ಗರಿಷ್ಠ ಮೊತ್ತ ಪೇರಿಸಿತು. ಹಾಲಿ ಆವೃತ್ತಿಯಲ್ಲಿ ಲಂಕಾ ವಿರುದ್ಧ 428 ರನ್‌ಗಳಿಸಿದ್ದು ಅತ್ಯಧಿಕ ಮೊತ್ತ ಎನಿಸಿದೆ.

    6. ಏಕದಿನ ವಿಶ್ವಕಪ್‌ನಲ್ಲಿ ಹೆನ್ರಿಚ್ ಕ್ಲಾಸೆನ್ 6ನೇ ವೇಗದ ಶತಕ ಸಾಧಕ ಸಿಡಿಸಿದರು. ಏಡೆನ್ ಮಾರ್ಕ್ರಮ್ (41) ಮೊದಲ ಸ್ಥಾನದಲ್ಲಿದ್ದಾರೆ.

    6. ದ.ಆಫ್ರಿಕಾ ಮೊದಲ ಬ್ಯಾಟಿಂಗ್‌ನಲ್ಲಿ ಸತತ 6ನೇ ಬಾರಿ ಏಕದಿನ ಕ್ರಿಕೆಟ್‌ನಲ್ಲಿ 300 ಪ್ಲಸ್ ರನ್‌ಗಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts