More

    ಭಾರತದಲ್ಲಿ ಹಾವಳಿ ಇಕ್ಕುತ್ತಿರುವ ಕರೊನಾ ವೈರಾಣುವಿನ ಮೂಲ ಇದು…

    ಬೆಂಗಳೂರು: ಕರ್ನಾಟಕ ಸೇರಿ ಭಾರತದ ವಿವಿಧ ರಾಜ್ಯಗಳಲ್ಲಿ ಹಾವಳಿ ಇಕ್ಕುತ್ತಿರುವ ಕರೊನಾ ವೈರಾಣು ಚೀನಾದಿಂದ ಹಬ್ಬಿದ್ದಲ್ಲ. ಬದಲಿಗೆ ಯುರೋಪ್​, ಮಧ್ಯಪ್ರಾಚ್ಯ, ಓಷಿಯಾನಿಯಾ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಿಂದ ಹಬ್ಬಿದ್ದು ಎಂಬುದು ಈಗ ಸ್ಪಷ್ಟವಾಗಿದೆ. ಈ ಪ್ರದೇಶಗಳಿಗೆ ಭೇಟಿ ನೀಡಿದ್ದವರು ಅಥವಾ ಅಲ್ಲಿಂದ ಭಾರತಕ್ಕೆ ಬಂದವರಿಂದ ಕರೊನಾ ಸೋಂಕು ಹಬ್ಬುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಕೈಗೊಂಡಿದ್ದ ಸಂಶೋಧನೆಯಿಂದ ಗೊತ್ತಾಗಿದೆ.

    ಪ್ರೊ. ಕುಮಾರವೇಲ್​ ಸೋಮಸುಂದರಂ, ಮೈನಾಕ್​ ಮಂಡಲ್​ ಮತ್ತು ಅಂಕಿತಾ ಲಡಾರ್ಡೆ ಅವರನ್ನು ಒಳಗೊಂಡಿದ್ದ ಐಐಎಸ್ಸಿಯ ಮೈಕ್ರೋ ಬಯಾಲಜಿ ಮತ್ತು ಸೆಲ್​ ಬಯಾಲಜಿ ವಿಭಾಗದ ಸಂಶೋಧಕರ ತಂಡ ಈ ಸಂಶೋಧನೆ ಮಾಡಿದೆ. ಕರೆಂಟ್​ ಸೈನ್ಸ್​ ಎಂಬ ಜರ್ನಲ್​ನಲ್ಲಿ ಕರೊನಾ ವೈರಾಣು ಭಾರತಕ್ಕೆ ಹೇಗೆ ಬಂದು ವಕ್ಕರಿಸಿತು ಎಂಬ ಈ ತಂಡದ ಮಹಾಪ್ರಬಂಧ ಪ್ರಕಟವಾಗಿದೆ.

    ಕರೊನಾ ವೈರಾಣುವಿನ ಜಿನೋಮ್​ ಸೀಕ್ವೆನ್ಸ್​ ಅನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಸಂಶೋಧಕರು, ಈ ವೈರಾಣು ಭಾರತಕ್ಕೆ ಎಲ್ಲಿಂದ, ಹೇಗೆ ಬಂದಿತು, ಭಾರತದಲ್ಲಿ ಸಾಂಕ್ರಾಮಿಕವಾಗಿ ಹಬ್ಬುತ್ತಿರುವ ಸೋಂಕಿಗೆ ಕಾರಣವಾಗಿರುವ ವೈರಾಣುವಿನ ಜೆನೆಟಿಕ್​ ಪ್ರಬೇಧಗಳು ಯಾವುವು ಎಂಬುದನ್ನು ಪತ್ತೆ ಮಾಡಿದ್ದಾರೆ.

    ಇದನ್ನೂ ಓದಿ: ಕರೊನಾ ಟೆಸ್ಟ್​ ಮಾಡಿಸಿಕೊಂಡ ಕೇಜ್ರಿವಾಲ್​: ವರದಿ ಬರುವವರೆಗೂ ಡವಡವ

    ಕರೊನಾ ಸೋಂಕಿನಿಂದ ಬಾಧಿತರಾಗಿರುವ 137 ಭಾರತೀಯರ ಪೈಕಿ 129 ಜನರಲ್ಲಿ ಪತ್ತೆಯಾಗಿರುವ ಕರೊನಾ ವೈರಾಣು ನಿರ್ದಿಷ್ಟವಾದ ರಾಷ್ಟ್ರಗಳಲ್ಲಿನ ವೈರಾಣುವಿನ ಹೋಲಿಕೆ ಹೊಂದಿದೆ. ಎ ಕ್ಲಸ್ಟರ್​ನಲ್ಲಿನ ಭಾರತೀಯರ ಮಾದರಿಗಳನ್ನು ಪರಿಶೀಲಿಸಿದಾಗ ಅವು ಓಷಿಯಾನಿಯ, ಕುವೈತ್​ ಮತ್ತು ದಕ್ಷಿಣ ಏಷ್ಯಾದಲ್ಲಿ ಪತ್ತೆಯಾಗಿರುವ ವೈರಾಣುವಿನ ಮಾದರಿಯನ್ನು ಹೋಲುತ್ತವೆ. ಬಿ ಕ್ಲಸ್ಟರ್​ನಲ್ಲಿನ ಮಾದರಿಯಲ್ಲಿ ಪತ್ತೆಯಾಗಿರುವ ವೈರಾಣು ಯುರೋಪಿಯನ್​ ಮೂಲವನ್ನು ಹಾಗೂ ಸಣ್ಣ ಪ್ರಮಾಣದಲ್ಲಿ ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾ ಮೂಲದ ವೈರಾಣುವನ್ನು ಹೋಲುತ್ತವೆ. ಇದೆಲ್ಲವನ್ನು ಗಮನಿಸಿ ಹೇಳುವುದಾದರೆ ಭಾರತದಲ್ಲಿ ಹರಡಿರುವ ಹೆಚ್ಚಿನ ಭಾಗದ ಕರೊನಾ ವೈರಾಣು ಯುರೋಪ್​, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಓಷಿಯಾನಿಯಾ ಪ್ರದೇಶದಿಂದ ಬಂದಿದ್ದು ಎಂಬುದು ಸ್ಪಷ್ಟವಾಗುತ್ತದೆ ಎಂದು ಸಂಶೋಧಕರು ಮಹಾಪ್ರಬಂಧದಲ್ಲಿ ವಿವರಿಸಿದ್ದಾರೆ.

    ಇನ್ನುಳಿದಂತೆ ಕೆಲವು ಪ್ರದೇಶಗಳಲ್ಲಿ ಚೀನಾ ಮತ್ತು ಪೂರ್ವ ಏಷ್ಯಾ ಮೂಲದಲ್ಲಿ ಪತ್ತೆಯಾಗಿರುವ ಕರೊನಾ ವೈರಾಣುವಿನ ಹೋಲಿಕೆ ಹೊಂದಿವೆ. ಬಹುಶಃ ಆ ಪ್ರದೇಶಗಳಿಂದ ಭಾರತಕ್ಕೆ ಬಂದವರಿಂದ ಈ ಸೋಂಕು ಹಬ್ಬಿರುವ ಸಾಧ್ಯತೆ ಇದೆ. ಏಕೆಂದರೆ ಈ ಮಾದರಿಗಳಲ್ಲಿ ಚೀನಾದ ವುಹಾನ್​ನಲ್ಲಿ ಪತ್ತೆಯಾಗಿದ್ದ ವೈರಾಣುವಿನೊಂದಿಗೆ ಹೆಚ್ಚಿನ ಸಾಮ್ಯತೆ ಇದೆ ಎಂದು ಹೇಳಿದ್ದಾರೆ.

    ಪ್ರವಾಸ ಮತ್ತು ಸಂಪರ್ಕದ ಮಾಹಿತಿ ಇಲ್ಲದ ಭಾರತೀಯ ಸೋಂಕಿತರಲ್ಲಿ ಪತ್ತೆಯಾಗಿರುವ ಕರೊನಾ ವೈರಾಣುವಿನ ಮೂಲವನ್ನು ನಿಖರವಾಗಿ ನಿಷ್ಕರ್ಷಿಸಲು ಸಾಧ್ಯವಾಗಿಲ್ಲ. ತನ್ಮೂಲಕ ಜನರು ಯಾವೆಲ್ಲ ರಾಷ್ಟ್ರಗಳಿಗೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರೋ, ಆ ರಾಷ್ಟ್ರಗಳಿಂದ ಕರೊನಾ ವೈರಾಣು ಭಾರತವನ್ನು ಪ್ರವೇಶಿಸಿದೆ ಎಂದು ಹೇಳಬಹುದಾಗಿದೆ ಎಂದು ತಿಳಿಸಿದ್ದಾರೆ.

    29ಕ್ಕೆ ವಿಧಾನ ಪರಿಷತ್​ನ 7 ಸ್ಥಾನಗಳಿಗೆ ಚುನಾವಣೆ: ವೇಳಾಪಟ್ಟಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts