More

    ಸೈಬರ್ ಕಳ್ಳರ ಗಾಳದಲ್ಲಿ ಐಐಎಸ್ಸಿ ಸಂಶೋಧಕರು..!

    ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರೊೆಸರ್, ಸಂಶೋಧಕರು, ಉದ್ಯೋಗಿಗಳು ಸಾಲು ಸಾಲಾಗಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಕೆಲ ದಿನಗಳ ಹಿಂದೆ ಹಿರಿಯ ಸಂಶೋಧಕಿಯೊಬ್ಬರು, ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ 83 ಲಕ್ಷ ರೂ. ಕಳೆದುಕೊಂಡಿದ್ದರು. ಮತ್ತೆ ಮೂವರು ಸೈಬರ್ ಗಾಳಕ್ಕೆ ಸಿಲುಕಿ, ಲಕ್ಷಾಂತರ ರೂ. ಕಳೆದುಕೊಂಡಿರುವ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ವರದಿಯಾಗಿವೆ.

    ಐಐಎಸ್‌ಸಿ ಸಹಾಯಕ ಸಂಶೋಧಕ ಪ್ರಭಾತ್ ರಂಜನ್ ಕುಮಾರ್ ಎಂಬುವರು, ಡಿ.23ರ ಮಧ್ಯಾಹ್ನ 2.18ರಲ್ಲಿ ವಿಜಯನಗರ ಜಿಲ್ಲೆ ಹಂಪಿಯಲ್ಲಿ ಹೋಟೆಲ್ ಬುಕ್ ಮಾಡಲು ಆನ್‌ಲೈನ್‌ನಲ್ಲಿ ಲಭ್ಯವಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ. ಆತ ಮುಂಗಡ 17 ಸಾವಿರ ರೂ. ಆಗಲಿದೆ. ಮುಂಗಡವಾಗಿ 8 ಸಾವಿರ ರೂ. ಪಾವತಿ ಮಾಡಬೇಕೆಂದು ಸೂಚಿಸಿದ್ದಾನೆ. ಅದರಂತೆ ಪ್ರಭಾತ್, ಹಣ ಪಾವತಿ ಮಾಡಿದ್ದಾರೆ. ಹಣ ಸ್ವೀಕೃತಿ ಆಗಿದ್ದರೂ ಸೈಬರ್ ಕಳ್ಳ, ಸಿಸ್ಟಮ್‌ನಲ್ಲಿ ತೆಗೆದುಕೊಂಡಿಲ್ಲ. ಮತ್ತರ 7999 ರೂ. ಪಾವತಿ ಮಾಡುವಂತೆ ಸೂಚಿಸಿದ್ದಾನೆ. ಮತ್ತೆ ಪ್ರಭಾತ್, 7999 ರೂ. ಪಾವತಿ ಮಾಡಿದ್ದಾರೆ. ಇದಾದ ಮೇಲೂ 1 ಸಾವಿರ ರೂ. ಪಾವತಿ ಮಾಡುವಂತೆ ಕೇಳಿದಾಗ ಅನುಮಾನ ಬಂದು ಪ್ರಭಾತ್, ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ದೂರು ಸಲ್ಲಿಸಿದ್ದಾರೆ.

    ಐಐಎಸ್‌ಸಿಯ ಮತ್ತೊಬ್ಬರಾದ ಚಂದ್ರಿಕಾ ಎಸ್.ಜೋಶಿ ಎಂಬುವರ ಮೊಬೈಲ್‌ಗೆ ಡಿ.29ಕ್ಕೆ ಎಸ್‌ಬಿಐ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಸಂದೇಶ ಬಂದಿರುತ್ತದೆ. ಸ್ವಲ್ಪ ಸಮಯ ಬಿಟ್ಟು ಮತ್ತೊಂದು ಸಂದೇಶ ಬಂದಿದ್ದು, ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆ ಆಕ್ಟೀವ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಅಪ್‌ಡೇಟ್ ಮಾಡುವಂತೆ ಸಲಹೆ ಕೊಟ್ಟಿರುತ್ತದೆ.

    ಇದನ್ನು ನಂಬಿರುವ ಚಂದ್ರಿಕಾ, ಲಿಂಕ್ ಮೇಲೆ ಕ್ಲಿಕ್ ಮಾಡಿ ಬ್ಯಾಂಕ್ ಖಾತೆ ವಿವರ ಅಪ್‌ಡೇಟ್ ಮಾಡಿದಾಗ ಅವರ ಬ್ಯಾಂಕ್ ಖಾತೆಯಿಂದ 18 ಸಾವಿರ ರೂ. ಕಡಿತವಾಗಿದೆ. ಹಣ ಕಡಿತವಾಗಿರುವ ಸಂದೇಶ ಬರುತ್ತಿದಂತೆ ಎಚ್ಚೆತ್ತ ಚಂದ್ರಿಕಾ ಹೆಚ್ಚಿನ ವಂಚನೆ ಆಗದಂತೆ ಜಾಗೃತಿ ವಹಿಸಿದ್ದಾರೆ. ಜತೆಗೆ ಸದಾಶಿವನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಟಡಿ ಟೇಬಲ್ ಮಾರಾಟಕ್ಕಿಟ್ಟು ವಂಚನೆ

    ಐಐಎಸ್‌ಸಿ ಸಹಾಯಕ ಆಡಳಿತಾಧಿಕಾರಿ ಸಜ್ಜಲ್ ಸಿಂಗ್ ಎಂಬುವರು, ಡಿ.23ಕ್ಕೆ ಹಳೆಯ ಸ್ಟಡಿ ಟೇಬಲ್‌ನ್ನು 2 ಸಾವಿರ ರೂ.ಗೆ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಇದನ್ನು ಗಮನಿಸಿದ ಅಪರಿಚಿತ ವ್ಯಕ್ತಿ, ಟೇಬಲ್ ಖರೀದಿಸುವುದಾಗಿ ಹೇಳಿ ಸಜ್ಜಲ್ ಸಿಂಗ್ ವಾಟ್ಸ್‌ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿ ಇದನ್ನು ಸ್ಕಾೃನ್ ಮಾಡಿದರೇ ನಿಮಗೆ ಹಣ ಬರಲಿದೆ ಎಂದು ತಿಳಿಸಿದ್ದಾನೆ.

    ನಂಬಿ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿದಾಗ ಹಂತ ಹಂತವಾಗಿ 9 ಬಾರಿ ಬರೋಬ್ಬರಿ 1.20 ಲಕ್ಷ ರೂ. ಸಜ್ಜಲ್ ಸಿಂಗ್ ಬ್ಯಾಂಕ್ ಖಾತೆಯಿಂದ ಕಡಿತವಾಗಿದೆ. ವಾಪಸ್ ಅಪರಿಚಿತ ವ್ಯಕ್ತಿಯ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts