More

    ದಾದಾ ಗುಣಗಾನ ಮಾಡಿದ ಪಾಕ್ ಮಾಜಿ ವೇಗಿ ಅಖ್ತರ್

    ಲಾಹೋರ್: ಭಾರತದ ಹಾಲಿ ಹಾಗೂ ಮಾಜಿ ಆಟಗಾರರ ವಿರುದ್ಧ ಪಾಕಿಸ್ತಾನದ ಕೆಲ ಮಾಜಿ ಕ್ರಿಕೆಟಿಗರಿಗೆ ಕಿಡಿಕಾರುವುದೇ ಕೆಲಸ. ಆದರೆ, ಕೆಲವೊಮ್ಮೆ ವಿಭಿನ್ನವಾಗಿ ಕಾಣುತ್ತಾರೆ ಮಾಜಿ ವೇಗಿ ಶೋಯೆಬ್ ಅಖ್ತರ್. ಕೆಲ ಸಲ ಭಾರತದ ಆಟಗಾರರನ್ನು ಟೀಕಿಸಿದರೂ ಹಾಗೆಯೇ ಶ್ಲಾಸಿದ್ದು ಉಂಟು. ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್, ಗಂಗೂಲಿ ಧೈರ್ಯವನ್ನು ಕೊಂಡಾಗಿದ್ದಾರೆ. ಹೊಸ ಚೆಂಡಿನಲ್ಲಿ ಗಂಗೂಲಿ ಎದುರಿಸುತ್ತಿದ್ದ ಕುರಿತು ಅಖ್ತರ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗಿದ್ದ ಕಿವೀಸ್‌ನ ಮಾಜಿ ಕ್ರಿಕೆಟಿಗ ಸಾವು

    ವಿಶ್ವದ ವೇಗದ ಬೌಲರ್‌ಗಳಲ್ಲಿ ಶೋಯೆಬ್ ಅಖ್ತರ್ ಕೂಡ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಅಖ್ತರ್ ಆಡುತ್ತಿದ್ದ ವೇಳೆ ಎದುರಾಳಿ ಬ್ಯಾಟ್ಸ್‌ಮನ್ ಮಾನಸಿಕವಾಗಿ ಸಾಕಷ್ಟು ಸಿದ್ಧವಾಗಿರಬೇಕಿತ್ತು. ಇದಕ್ಕಾಗಿಯೇ ಅಖ್ತರ್ ಮೈದಾನದಲ್ಲಿ ಭಾರತೀಯರನ್ನು ಸಾಕಷ್ಟು ಭಾರಿ ಕೆಣಕ್ಕಿದ್ದಾರೆ. ಇದೀಗ ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕಿರುವ ಅಖ್ತರ್, ನನ್ನ ಬೌಲಿಂಗ್‌ನಲ್ಲಿ ಹೊಸ ಚೆಂಡಿನಲ್ಲಿ ಗಂಗೂಲಿ ಒಬ್ಬರೇ ಧೈರ್ಯವಾಗಿ ಎದುರಿಸುತ್ತಿದ್ದರು ಎಂದು ಮೆಲುಕುಹಾಕಿದ್ದಾರೆ. ನನ್ನ ಎಸೆತಗಳಿಗೆ ಎಂದು ಹಿಂದಕ್ಕೆ ಹೋಗದೇ ಎದುರಿಸುತ್ತಿದ್ದರು ಎಂದು ಅಖ್ತರ್ ಹೇಳಿದ್ದಾರೆ. ಹಲವು ಬಾರಿ ನಾನು ಎದೆಮಟ್ಟಕ್ಕೆ ಎಸೆದರೂ ಧೈರ್ಯವಾಗಿ ಎದುರಿಸಿದ್ದಾರೆ ಎಂದು ಭಾರತದ ಮಾಜಿ ನಾಯಕನ ಗುಣಗಾನ ಮಾಡಿದ್ದಾರೆ.

    ಇದನ್ನೂ ಓದಿ: ನಾಟಕವಾಗ್ತಿದೆ ಸಂಜಯ್​ ಲೀಲಾ ಬನ್ಸಾಲಿಯ ಬಾಜಿರಾವ್ ಮಸ್ತಾನಿ

    ಗಂಗೂಲಿ 113 ಟೆಸ್ಟ್ ಪಂದ್ಯಗಳಿಂದ 7212 ರನ್, 311 ಏಕದಿನ ಪಂದ್ಯಗಳಿಂದ 11,363 ರನ್ ಗಳಿಸಿದ್ದಾರೆ. ಅಖರ್ ಪಾಕ್ ಪರ 46 ಟೆಸ್ಟ್ ಪಂದ್ಯಗಳಿಂದ 178 ವಿಕೆಟ್ ಹಾಗೂ 163 ಏದಕಿನ ಪಂದ್ಯಗಳಿಂದ 247 ವಿಕೆಟ್ ಕಬಳಿಸಿದ್ದಾರೆ. ಸೌರವ್ ಗಂಗೂಲಿ ಸದ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿದ್ದಾರೆ.

    ಕರೊನಾ ವೈರಸ್‌ಗೂ ಬಗ್ಗದ ಜನ, ಸ್ಟೇಡಿಯಂನಲ್ಲಿ ರಗ್ಬಿ ಪಂದ್ಯ ನೋಡಿದ್ರು 22 ಸಾವಿರ ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts